ಗದಗ ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶಿಕ್ಷಣ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನದ ಅಂಗವಾಗಿ ಶನಿವಾರ ರೋಗಿಗಳಿಗೆ ಹಣ್ಣು-ಹಂಪಲು, ಬಿಸ್ಕಿಟ್ ವಿತರಿಸಲಾಯಿತು.
ಗದಗ: ಶಿಕ್ಷಣ, ವೈದ್ಯಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಡಾ. ಪ್ರಭಾಕರ ಕೋರೆ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು, ಅವರದು ದೂರದೃಷ್ಟಿಯ ನಾಯಕತ್ವ ಮತ್ತು ಸಮಾಜ ಸೇವೆಯ ಮಾದರಿ ಎಂದು ಡಾ. ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಗದಗ ಶಾಖೆಯ ಸಂಚಾಲಕ ಶ್ರೀಧರಗೌಡ ಧರ್ಮಾಯತ ಹೇಳಿದರು.
ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶಿಕ್ಷಣ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರ 79ನೇ ಜನ್ಮದಿನದ ಅಂಗವಾಗಿ ಶನಿವಾರ ರೋಗಿಗಳಿಗೆ ಹಣ್ಣು-ಹಂಪಲು, ಬಿಸ್ಕಿಟ್ ವಿತರಿಸಿ ಅವರು ಮಾತನಾಡಿದರು.ಡಾ. ಕೋರೆ ಅವರು 1984ರಲ್ಲಿ ಕೆ.ಎಲ್.ಇ. ಸೊಸೈಟಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಕೇವಲ 30 ಶಿಕ್ಷಣ ಸಂಸ್ಥೆಗಳಿದ್ದವು. ಅವರ 40 ವರ್ಷಗಳ ಅವಿರತ ಶ್ರಮದಿಂದ ಈಗ ಕೆ.ಎಲ್.ಇ. ಸಂಸ್ಥೆ 314ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಾಗಿ ಬೆಳೆದು, ರಾಷ್ಟ್ರದ ಅತಿದೊಡ್ಡ ಶಿಕ್ಷಣ ಸಾಮ್ರಾಜ್ಯವಾಗಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ, ವೈದ್ಯಕೀಯ, ಎಂಜಿನಿಯರಿಂಗ್, ಆಯುರ್ವೇದ, ಫಾರ್ಮಸಿ ವರೆಗೆ ಅವಕಾಶ ಕಲ್ಪಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬೆಳಗಾವಿಯ ಕೆ.ಎಲ್.ಇ. ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಏಷ್ಯಾದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಸಹಕಾರ ಕ್ಷೇತ್ರದಲ್ಲಿ ಡಾ. ಪ್ರಭಾಕರ ಕೋರೆ ಮಲ್ಟಿ ಸ್ಟೇಟ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಶಕ್ತಿ ತುಂಬಿದ್ದಾರೆ ಎಂದರು.
ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರಾದ ಡಾ. ವಿನಾಯಕ ಪಂಚಗಾರ, ಡಾ. ಪ್ರಕಾಶ ಹೊಸಮನಿ, ಡಾ. ಸಂಗಮೇಶ ಅಸೂಟಿ, ಅನ್ನದಾನಯ್ಯ ಸಂಶಿಮಠ, ಹರೀಶಕುಮಾರ ಶಹಾ, ಗಂಗಾಧರ ಮೇಲಗಿರಿ, ಮುರಿಗೆಪ್ಪ ನಾಲ್ವಾಡ, ಚಿದಾನಂದ ಸರಡೆ, ವಿಜಯಕುಮಾರ ಸಂಗೊಳ್ಳಿ, ಶ್ರವಣಕುಮಾರ ಅಂಗಡಿ, ಪ್ರಕಾಶ ಮೇಹರವಾಡೆ, ಶ್ರೀಪತಿ ಉಡುಪಿ, ಈಶಣ್ಣ ಮುನವಳ್ಳಿ, ಕರ್ಜಗಿ ಶೆಟ್ಟರ, ಅಶೋಕ ನಿಲೂಗಲ್ಲ ಇದ್ದರು.