ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಡಾ. ಪುನೀತ್ ರಾಜ್‌ಕುಮಾರ್ ತಮ್ಮ ನಟನೆ, ನೃತ್ಯದಿಂದ ಅಷ್ಟೇ ಅಲ್ಲದೆ ತಮ್ಮ ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ನಾಲ್ಕು ವರ್ಷಗಳಾದರೂ, ಅವರ ನೆನಪು ಮಾತ್ರ ಸದಾ ನಮ್ಮಲ್ಲಿ ಅಡಗಿದೆ. ಪುನೀತ್ ರಾಜ್ ಕುಮಾರ್ ಎಂದಿಗೂ ಅಜರಾಮರರಾಗಿದ್ದಾರೆ. ಅವರ ಸರಳತೆ ಮತ್ತು ವಿನಯತೆಯನ್ನು ಪ್ರತಿಯೊಬ್ಬ ಕನ್ನಡಿಗ ಅಳವಡಿಸಿಕೊಂಡರೆ ಉತ್ತಮವಾದ ಜೀವನವನ್ನು ಮಾಡಬಹುದು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು. ಅವರು ಶಿರಾ ರಂಗನಾಥನಗರದಲ್ಲಿ ಪವರ್ ಸ್ಟಾರ್ ಡಾ.ಪುನಿತ್ ರಾಜ್‌ಕುಮಾರ್ ಅಬಿಮಾನಿ ಬಳಗದ ವತಿಯಿಂದ ಪುನೀತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಮಾಜ ಸೇವಕರು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್‌ಕುಮಾರ ಎಂಬುದು ಅವರ ಹೆಸರಿನಲ್ಲಿ ಅಷ್ಟೇ ಅಲ್ಲ, ಅವರ ಗುಣದಲ್ಲಿಯೂ ಇತ್ತು. ಹೆಸರಿಗೆ ತಕ್ಕಂತೆ ಪುನೀತ್ ರಾಜಕುಮಾರನಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು, ಸಾಕಷ್ಟು ಗೋಶಾಲೆಗಳು ಹಾಗೂ 45ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ನೆರವು ನೀಡಿದ್ದಾರೆ. ತಮ್ಮ ಜನಸೇವೆಯನ್ನು ಎಡಗೈನಲ್ಲಿ ಮಾಡಿದ ಕೆಲಸ ಬಲಗೈಗೆ ತಿಳಿಯದಂತೆ ಮಾಡಿದ್ದಾರೆ. ಕನ್ನಡಿಗರ ಪಾಲಿಗೆ ಅಪ್ಪು ದೇವರಂತೆ, ಜನರಿಂದ ಮರೆಯಾದರೂ ಎಂದಿಗೂ ಅಭಿಮಾನಿಗಳ ಮನಸ್ಸಿಂದ ಮರೆಯಾಗದ ಮಾಣಿಕ್ಯ ಅಪ್ಪು ಅವರ ಉತ್ತಮ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ರಾಜ್ಯ ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಸಾವು ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಸ್ಮರಣೆ ನಾವೆಲ್ಲರೂ ಎಂದಿಗೂ ಮರೆಯದಂತೆ ಮಾಡಬೇಕು. ರಾಜ್ ಕುಮಾರ್ ಅವರ ಕುಟುಂಬದವರು ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ನಗರಸಭಾ ಸದಸ್ಯರಾದ ಎಸ್.ಎಲ್.ರಂಗನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ನಗರಸಭೆ ಸದಸ್ಯ, ಆರ್.ರಾಮು, ಮಾಜಿ ಸದಸ್ಯ ಆರ್.ರಾಘವೇಂದ್ರ, ಮುಖಂಡರಾದ ವಿಜಯ್‌ಕುಮಾರ್, ಪಂಜಿಗಾನಹಳ್ಳಿ ತಿಪ್ಪಣ್ಣ, ಕದ್ರೆಹಳ್ಳಿ ಮೂರ್ತಿ, ಲಕ್ಷ್ಮೀಕಾಂತ್, ಫಾರ್ಹನ್, ಕಾಂಗ್ರೆಸ್ ಮುಖಂಡರುರಾದ ಅಪ್ಪಿ ರಂಗನಾಥ್, ರವಿಶಂಕರ್, ಕಡೆ ಮನೆ ರವಿಕುಮಾರ್, ಪೆದ್ದರಾಜು, ನರೇಶ್ ಗೌಡ, ಟೈರ್ ರಂಗನಾಥ್, ಸಚಿನ್ ಲಕ್ಷ್ಮೀಕಾಂತ್, ನಿಸರ್ಗ ಸುರೇಶ್, ಷೇಕ್ ಮಹಮದ್ ಅಲಿ, ರಾಜು.ಕೆ, ನಾದೂರು ಕಿರಣ್, ಶ್ರೀರಂಗನಾಥ ಮೌರ್ಯ, ರಂಗಣ್ಣ, ಎನ್.ನಾಗರಾಜ್, ಸೇರಿದಂತೆ ರಂಗನಾಥ ನಗರದ ಅಪ್ಪು ಅಭಿಮಾನಿಗಳು ಭಾಗವಹಿಸಿದ್ದರು.
೩೦ಶಿರಾ೧: ಶಿರಾ ರಂಗನಾಥ ನಗರದಲ್ಲಿ ಪುನೀತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ೩೦ಶಿರಾ೨: ಶಿರಾ ರಂಗನಾಥ ನಗರದಲ್ಲಿ ಪುನೀತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಉದ್ಘಾಟಿಸಿದರು.;Resize=(128,128))
;Resize=(128,128))
;Resize=(128,128))