ತರೀಕೆರೆಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ದಡಿ ತರೀಕೆರೆ ತಾಲೂಕಿನ ಎಲ್ಲಾ 26 ಗ್ರಾಪಂಗಳಲ್ಲಿ ನೋಂದಾಯಿತ ಜಾಬ್ ಕಾರ್ಡ್ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಮೇ 31, 2026ರ ಒಳಗೆ ಪೂರ್ಣಗೊಳಿಸಲು ತರೀಕೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ದೇವೇಂದ್ರಪ್ಪ ಆರ್. ತಿಳಿಸಿದ್ದಾರೆ.
ನರೇಗಾ ಜಾಬ್ ಕಾರ್ಡ್ ಗೆ ಇ-ಕೆವೈಸಿ ಕಡ್ಡಾಯ
ಕನ್ನಡಪ್ರಭ ವಾರ್ತೆ, ತರೀಕೆರೆಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ದಡಿ ತರೀಕೆರೆ ತಾಲೂಕಿನ ಎಲ್ಲಾ 26 ಗ್ರಾಪಂಗಳಲ್ಲಿ ನೋಂದಾಯಿತ ಜಾಬ್ ಕಾರ್ಡ್ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಮೇ 31, 2026ರ ಒಳಗೆ ಪೂರ್ಣಗೊಳಿಸಲು ತರೀಕೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ದೇವೇಂದ್ರಪ್ಪ ಆರ್. ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಸೂಚನೆಯಂತೆ, ಎನ್ ಎಂ ಎಂ ಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ) ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ. ಐಇಸಿ ಚಟುವಟಿಕೆ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಿಗೆ ಇ-ಕೆವೈಸಿ ಮಹತ್ವ ತಿಳಿಸಲಾಗುತ್ತಿದೆ. ಕಾರ್ಮಿಕರು ತಮ್ಮ ಜಾಬ್ ಕಾರ್ಡ್ ಮತ್ತು ಆಧಾರ್ ಸಹಿತ ಗ್ರಾಪಂ ಕಚೇರಿಗೆ ಭೇಟಿ ನೀಡಿ, ಇ-ಕೆವೈಸಿ ಮಾಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.ಕಾರ್ಮಿಕರ ಹಾಜರಿಯನ್ನು ಮುಖ ಆಧಾರಿತ ತಂತ್ರಜ್ಞಾನದ ಮೂಲಕ ಎನ್ ಎಂಎಂಎಸ್ ಅಪ್ಲಿಕೇಶನ್ ನಲ್ಲಿ ನಿಖರವಾಗಿ ದಾಖಲಿಸಬಹುದು ಇದು ನರೇಗಾ ಯೋಜನೆ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ. ಈಗಾಗಲೇ ಎನ್ ಎಂಎಂಎಸ್ ಅಪ್ಲಿಕೇಶನ್ ನಲ್ಲಿ ಕಾರ್ಮಿಕರ ಫೋಟೊ ಹಿಡಿದು, ಆಧಾರ್ ಸಂಖ್ಯೆ ಜತೆ ಹಾಜರಾತಿ ದೃಢ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ತರೀಕೆರೆ ತಾಲೂಕಿನ ಒಟ್ಟು 26 ಗ್ರಾಪಂ ಗಳಲ್ಲಿ ಇರುವ 45439 ನೋಂದಾಯಿತ ಕೂಲಿಕಾರರಲ್ಲಿ ಈವರೆಗೂ 28410 ಮಂಧಿ ಮಾತ್ರ ಇ ಕೆವೈಸಿ ಮಾಡಿಸಿಕೊಂಡಿದ್ದಾರೆ. ಬಾಕಿ ಉಳಿದ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ತಿಳಿಸಿದ್ದಾರೆ. ತಾಲೂಕಿನಲ್ಲಿ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿ ಮೂಲಕ ಕೂಲಿಕಾರರಿಗೆ 100 ದಿನಗಳ ಉದ್ಯೋಗ ಖಾತ್ರಿ ಜೊತೆಗೆ ದಿನ ಒಂದಕ್ಕೆ ₹370 ಗಂಡು ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಕಾರ್ಮಿಕರು ತುರ್ತಾಗಿ ಇ-ಕೆವೈಸಿ ಮಾಡಿಸಬೇಕು. ಸಾರ್ವಜನಿಕರು ಆಸ್ತಿ, ನೀರಿನ ತೆರಿಗೆ ಮತ್ತು ಇತರೆ ತೆರಿಗೆಯನ್ನು ಸಕಾಲಕ್ಕೆ ಗ್ರಾಪಂಗೆ ಪಾವತಿಸಿ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.--13ಕೆಟಿಆರ್.ಕೆ.2ಃ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ ಆರ್,.