ಸಾರಾಂಶ
ಡಾ. ಎಸ್. ಆರ್. ರಂಗನಾಥ ಅವರು ಮೊದಲ ಗ್ರಂಥಪಾಲಕರಾಗಿ ಉತ್ತಮ ಸೇವೆ ಮಾಡಿ ತಮ್ಮ ಜೀವನವನ್ನು ಗ್ರಂಥಾಲಯ ಸೇವೆಗಾಗಿ ಜೀವನ ಮುಡಿಪಾಗಿಟ್ಟಿದ್ದರು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.
ಮುಂಡರಗಿ: ಡಾ. ಎಸ್. ಆರ್. ರಂಗನಾಥ ಅವರು ಮೊದಲ ಗ್ರಂಥಪಾಲಕರಾಗಿ ಉತ್ತಮ ಸೇವೆ ಮಾಡಿ ತಮ್ಮ ಜೀವನವನ್ನು ಗ್ರಂಥಾಲಯ ಸೇವೆಗಾಗಿ ಜೀವನ ಮುಡಿಪಾಗಿಟ್ಟಿದ್ದರು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.
ಅವರು ಈಚಗೆ ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಡಾ.ಎಸ್.ಆರ್. ರಂಗನಾಥ ಅವರು ತಮ್ಮ ಬರವಣಿಗೆಯ ಮೂಲಕ ಗ್ರಂಥಾಲಯದ ಮಹತ್ವ ಕುರಿತು ಅರಿವು ಮೂಡಿಸಿದ ಮಹಾನ್ ಚೇತನ. ಇವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಇವರಂತೆ ತಾವು ತಮ್ಮ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಎಸ್.ಆರ್. ರಂಗನಾಥನ ಅವರ ಜನ್ಮದಿನದ ಪ್ರಯುಕ್ತ ತಾಲೂಕಿನ ಉತ್ತಮ ಗ್ರಂಥಪಾಲಕರನ್ನಾಗಿ ಅಂದಪ್ಪ ತುರಕಾಣಿ, ಹಳ್ಳಿಕೇರಿ ಶಿವಾನಂದ ಗುಬ್ಬೆನಕೊಪ್ಪ, ಪೇಠಾಲೂರಿನ ಹಾಲಪ್ಪ ಕೊರ್ಲಹಳ್ಳಿ, ಮೇವುಂಡಿ ಪ್ರೇಮಸಿಂಗ್ ಪವಾರ, ಕದಾಂಪೂರದ ರತ್ನಾ ಬಡಿಗೇರ, ಡೋಣಿಯ ಮಹಾಂತೇಶ ಬಡಿಗೇರ, ಹಾರೋಗೇರಿ ಇವರನ್ನು ಆಯ್ಕೆ ಮಾಡಿ ಸನ್ಮಾನಿಸಿದರು.ಅತಿಥಿಗಳಾಗಿ ಯೋಜನಾ ಅಧಿಕಾರಿ ವಿಜಯಕುಮಾರ ಬೆಣ್ಣಿ, ಸರಕಾರಿ ನೌಕರ ಸಂಘದ ಉಪಾಧ್ಯಕ್ಷ ಮಹೇಶ ಅಲ್ಲಿಪೂರ ಮಾತನಾಡಿದರು. ಈ ಸಂದರ್ಭದಲ್ಲಿ ಸರಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷ ಜಗದೀಶ ಅರಣಿ, ಸಂಪನ್ಮೂಲ ವ್ಯಕ್ತಿ ಮಂಜುನಾಥ ಮುಧೋಳ, ಪಿಡಿಓ ಬಸವರಾಜ ತಳವಾರ, ಶಶಿಧರ ಹೊಂಬಳ, ಗ್ರಾಮ ಪಂಚಾಯಿತಿ ಅರಿವು ಗ್ರಂಥಾಲಯ ಗ್ರಂಥಪಾಲಕರ ಜಿಲ್ಲಾಧ್ಯಕ್ಷ ಗವಿಶಿದ್ದಪ್ಪ ಹಳ್ಳಾಕರ, ವಿವಿಧ ಗ್ರಾಮ ಪಂಚಾಯತ ಮೇಲ್ವಿಚಾರಕರು, ನರೇಗಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.