ಸಾರಾಂಶ
ಡಾ.ಎಸ್. ರಾಧಾಕೃಷ್ಣನ್ ಅವರ ಪಾಂಡಿತ್ಯ ಪರಿಚಯ ಮೈಸೂರಿನ ವಿದ್ಯಾರ್ಥಿಗಳಿಗೂ ಸಿಕ್ಕಿದ್ದು ಅದೃಷ್ಟ.
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಕ ವೃತ್ತಿ ಪವಿತ್ರ ವೃತ್ತಿಗಳಲ್ಲಿ ಒಂದು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕ ಡಾ. ಶಿವಣ್ಣ ತಿಳಿಸಿದರು.ನಗರದ ಹೊಯ್ಸಳ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯು ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಡಾ.ಎಸ್. ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಎಂದೂ ಹಾಳಾಗದ ಆಸ್ತಿ. ಇಂತಹ ಆಸ್ತಿಯನ್ನು ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ನೀಡುವ ಶಕ್ತಿ ಇರುವುದು ಶಿಕ್ಷಕರಲ್ಲಿ ಮಾತ್ರ ಎಂದು ಹೇಳಿದರು.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಸೋಮೇಗೌಡ ಮಾತನಾಡಿ, ಡಾ.ಎಸ್. ರಾಧಾಕೃಷ್ಣನ್ ಅವರ ಪಾಂಡಿತ್ಯ ಪರಿಚಯ ಮೈಸೂರಿನ ವಿದ್ಯಾರ್ಥಿಗಳಿಗೂ ಸಿಕ್ಕಿದ್ದು ಅದೃಷ್ಟ. ಅವರು ಶಿಕ್ಷಕರಾಗಿ ದೇಶದ ಉಪರಾಷ್ಟ್ರಪತಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಮಹಾನ್ ತತ್ವಶಾಸ್ತ್ರಜ್ಞರು ಎಂದರು.ಶಿಕ್ಷಕರಾದ ಕೆ.ಬಿ. ಸೋಮೇಗೌಡ, ಮನೋಹರ್, ಗೋಪಾಲಕೃಷ್ಣ, ರೇವಣ್ಣಪ್ಪ ಅಣ್ಣೂರು, ಎಸ್. ರಾಮಪ್ರಸಾದ್, ವಿದುಷಿ ಶ್ರೀವಾಣಿ. ವಿದುಷಿ ಶಾರದಾ ಅಯ್ಯರ್ ಮತ್ತು ಬಿ.ಎಸ್. ಕಿಶೋರ್ ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಾಲುಂಡಿ ಎಸ್. ದೊರೆಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ಸಿದ್ದಪ್ಪ, ಗೋವಿಂದರಾಜ್, ಮಾದಪ್ಪ, ಗೋಪಿ, ಕಾವೇರಮ್ಮ, ಮಾಲಿನಿ, ಪುಷ್ಪಲತಾ, ಭವಾನಿ, ಮದನ್, ಬಾಬು, ಶಿವು ಮೊದಲಾದವರು ಇದ್ದರು.