ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ಮತ್ತು ಸಾಧನೆ ಮನುಕುಲಕ್ಕೆ ಮಾದರಿ

| Published : Oct 21 2025, 01:00 AM IST

ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ಮತ್ತು ಸಾಧನೆ ಮನುಕುಲಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತೂರು ಮಠವು ಸಮಾಜಕ್ಕೆ ಹತ್ತು ಹಲವು ಕೊಡುಗೆಗಳನ್ನು ನೀಡುವ ಮೂಲಕ ನೊಂದವರು, ಬಡವರು, ದಲಿತರು ಮತ್ತು ತುಳಿತಕ್ಕೊಳದಾದವರ ದನಿ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಅಕ್ಷರ ಮತ್ತು ಅನ್ನದಾಸೋಹದ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ಮತ್ತು ಸಾಧನೆ ಮನುಕುಲಕ್ಕೆ ಮಾದರಿ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು.ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದ ಈಶಾನ್ನೇಶ್ವರ ಮಠದಲ್ಲಿ ನಡೆದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 110ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶತಮಾನಗಳ ಇತಿಹಾಸ ಹೊಂದಿರುವ ಸುತ್ತೂರು ಮಠ ದೇಶದ ಇತರ ಮಠಗಳಿಗೆ ಮಾದರಿ ಎಂದರು.ಸುತ್ತೂರು ಮಠವು ಸಮಾಜಕ್ಕೆ ಹತ್ತು ಹಲವು ಕೊಡುಗೆಗಳನ್ನು ನೀಡುವ ಮೂಲಕ ನೊಂದವರು, ಬಡವರು, ದಲಿತರು ಮತ್ತು ತುಳಿತಕ್ಕೊಳದಾದವರ ದನಿಯಾಗಿದ್ದು, ಕೋಟ್ಯಂತರ ಮಂದಿಗೆ ಉಚಿತ ಶಿಕ್ಷಣ ನೀಡುವುದರ ಜತೆಗೆ ನಿರಂತರ ಅನ್ನ ದಾಸೋಹದ ನಡೆಸುತ್ತ ಜನರ ಬದುಕಿನ ಆಶ್ರಯ ದಾಮವಾಗಿದೆ ಎಂದು ಬಣ್ಣಿಸಿದರು.ಹಾಡ್ಯ ಈಶಾನ್ನೇಶ್ವರ ಮಠದ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮಾಯಗೌಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಸಪ್ಪ, ಮಾಜಿ ಸದಸ್ಯ ರಘು, ನಿವೃತ್ತ ಶಿಕ್ಷಕ ಎಚ್.ಬಿ. ಕುಮಾರ್, ಹಾಡ್ಯ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಮಹೇಶ್, ತ್ರಯಂಬಕಸ್ವಾಮಿ, ಮುಖಂಡರಾದ ಎಚ್.ಪಿ. ನಾಗೇಶ್, ರಾಕೇಶ್, ಬ್ರಿಜೇಶ್, ಎಚ್.ಬಿ. ಮಹೇಶ್, ಶಿವಣ್ಣ, ಭುಜಂಗ ಇದ್ದರು.