ಶಿಕ್ಷಣ ಸೇವೆಯ ದಾಸೋಹಕ್ಕೆ ಬೆಳಕಾದ ಡಾ.ಸಿದ್ದಲಿಂಗ ಶ್ರೀಗಳು

| Published : Aug 14 2024, 12:46 AM IST

ಸಾರಾಂಶ

ಆಧ್ಯಾತ್ಮಿಕ, ಧಾರ್ಮಿಕ,. ಸಮಾಜಮುಖಿ ಕಾಳಜಿಯೊಂದಿಗೆ ಶಿಕ್ಷಣ ಸೇವೆಯ ದಾಸೋಹಕ್ಕೆ ತೋಂಟದ ಲಿಂ.ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಆದ್ಯತೆ ನೀಡಿ ಬೆಳಕಾದವರು ಎಂದು ಗದಗ ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಧ್ಯಾತ್ಮಿಕ, ಧಾರ್ಮಿಕ,. ಸಮಾಜಮುಖಿ ಕಾಳಜಿಯೊಂದಿಗೆ ಶಿಕ್ಷಣ ಸೇವೆಯ ದಾಸೋಹಕ್ಕೆ ತೋಂಟದ ಲಿಂ.ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಆದ್ಯತೆ ನೀಡಿ ಬೆಳಕಾದವರು ಎಂದು ಗದಗ ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಹೇಳಿದರು.

ಇಲ್ಲಿನ ಮಂಜಪ್ಪ ಹರ್ವೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದಲಿಂಗ ಪೂಜ್ಯರಲ್ಲಿ ಸ್ಥಿತಪ್ರಜ್ಞೆ, ಸಮಚಿತ್ತ ಅಗಾಧವಾಗಿತ್ತು. ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಮೂಲ್ಯ ಜ್ಞಾನ ಸಿಂಚನದ ಕೊಡುಗೆ ಸಿದ್ದಲಿಂಗ ಶ್ರೀಗಳವರು ನೀಡಿದ್ದಾರೆ. ಪೂಜ್ಯರ ಜೀವನ ತತ್ವ ಜನಮಾನಸಲ್ಲಿ ನೆಲೆಸಿವೆ. ಅವರ ವಿವೇಕ ಜಾಗರೂಕತೆ ತೀಕ್ಷ್ಣವಾಗಿವೆ ಎಂದರು.ಭಾರತ ಸರಕಾರ 75ನೇ ಅಮೃತ ಮಹೋತ್ಸವ ಅಂಗವಾಗಿ ಆಜ್ಞಾತ ಮಂಜಪ್ಪ ಎಂಬ ಪುಸ್ತಕ ಪ್ರಕಟಿಸಿದೆ. ಏನು ಇಲ್ಲದ ಕಾಲದಲ್ಲಿ 150ಕ್ಕೂ ಹೆಚ್ಚು ಪುಸ್ತಕಗಳನ್ನು ಮಂಜಪ್ಪನವರು ಅಂದಿನ ಕಾಲದಲ್ಲಿ ಕನ್ನಡದಲ್ಲಿ ಪ್ರಕಟಿಸಿದರು. ಗಾಂಧೀಜಿಯವರ ಬದುಕು ಕುರಿತು ಬರೆದು ಪರಿಚಯಿಸಿದ್ದಾರೆ. ಅವರೊಬ್ಬರು ನಾಡುಕಂಡ ಶ್ರೇಷ್ಠ ಸಂತ. ಮಂಜಪ್ಪನವರ ಹಾಗೂ ಡಾ.ಫ.ಗು.ಹಳಕಟ್ಟಿಯವರ ಜೀವನ ಚರಿತ್ರೆ ಯಶೋಗಾಥೆ ಇಂದಿನ ಯುವಜನತೆ ಮೆಲುಕು ಹಾಕಬೇಕು. ಇಂಥ ಅಪರೂಪದ ಪುಣ್ಯ ಪುರುಷರ ನಾಮಧೇಯದಡಿ ನಡೆಯುತ್ತಿರುವ ಸಂಸ್ಥೆಯಲ್ಲಿ ಜ್ಞಾನಾರ್ಜನೆ ಮಾಡುತ್ತಿರುವ ಯುವಕರ ಭವಿಷ್ಯ ಉನ್ನತಿಡೆಗೆ ಸಾಗಲಿ. ಮಕಿಕಳ ಕಲ್ಯಾಣವೇ ನಮ್ಮ ಸಮಾಜದ ಕಲ್ಯಾಣ ಎಂದರು.ಚಿಮ್ಮಲಗಿ ಭಾಗ- 2 ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲಿ ಅವರದೇ ಅದಂಥ ಪ್ರತಿಭೆಗಳಿವೆ. ಇಂದಿನ ಮಕ್ಕಳು ಓದು-ಬರಹ ಮರೆಯುತ್ತಿದ್ದಾರೆ. ಮೊಬೈಲ್ ಮಾಯೆ ಸೆಳತಕ್ಕೆ ಒಳಗಾಗಿದ್ದಾರೆ. ಯುವಜನತೆ ವಿಪರೀತ ಮೊಬೈಲ್ ಹುಚ್ಚು ಹಿಡಿಸಿಕೊಂಡಿರುವುದು ವಾಸ್ತವಿಕ ಸತ್ಯ. ಅದರಲ್ಲಿ ಪಾಲಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಯವರು ಸಹ ಮಕ್ಕಳಿಗೆ ಬರೀ ಓದುವ ಮಶಿನ ಮಾಡಿಬಿಟ್ಟು ಒತ್ತಡ ಹೇರುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಪುಸ್ತಕ ಓದು ನೆತ್ತಿಗೆರಿಸಿಕೊಂಡರೇ ಮಾತ್ರ ಪ್ರತಿಫಲ. ಶ್ರದ್ಧೆ, ನಿಷ್ಠೆಯಿಂದ ಗೈಯುವ ಸಾಧನೆ ಛಲ ಮೂಡಿದರೆ ಮಾತ್ರ ಕಲಿತ ವಿದ್ಯೆ ತಲೆಯಲ್ಲಿ ಉಳಿಯಲು ಸಾಧ್ಯ. ಮೌಲ್ಯಯುತ ವ್ಯಕ್ತಿತ್ವ ರೂಪಿಸಿಕೊಂಡು ಯುವಕರು ಆದರ್ಶಪ್ರಾಯ ಬದುಕು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ, ಬಸವನ ಬಾಗೇವಾಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಪಾಟೀಲ, ಆಲಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ಬಡಿಗೇರ ಇದ್ದರು. ಸಿದ್ದರೇಣುಕ ಶಿವಾಚಾರ್ಯ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಜಿ.ಎಂ.ಕೋಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ಕೆ.ಸಿ.ಪಟ್ಟಣಶೆಟ್ಟಿ, ಬಸಯ್ಯ ಶಿವಯೋಗಿಮಠ, ತನುಜಾ ಪೂಜಾರಿ, ಕಮಲಾಕ್ಷಿ ಶಿವಯೋಗಿಮಠ, ಎಚ್.ಎನ್.ಕೆಲೂರ, ಎಂ.ಎಸ್.ಸಜ್ಜನ, ಪಿ.ವೈ.ಧನಶೆಟ್ಟಿ, ಟಿ.ಬಿ.ಕರದಾನಿ, ಎಂ.ಎನ್.ಕರೇಮುರಗಿ, ಧನರಾಜ ಸಿಂಗಾರಿ, ಶಾಂತೂ ತಡಸಿ, ತಿಮ್ಮಣ ದಾಸರ, ಲಕ್ಷ್ಮೀ ಗುನ್ನಾಪೂರ, ಸ್ನೇಹಾ ಜಗತಾಪ ಮೊದಲಾದವರಿದ್ದರು.