ಕುಷ್ಟಗಿ ತಾಲೂಕಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ 2025-26ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ವಿಭಾಗದಲ್ಲಿ ಫ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗೆ ಭಾಜನಾಗಿದ್ದಾರೆ.
ಡಾ. ಸಿದ್ದಲಿಂಗಯ್ಯ ಶಂಕೀನ್, ಪಶು ವೈದ್ಯಕೀಯ ಸೇವೆಯಲ್ಲಿ ಕಾರ್ಯ ನಿರ್ವಹಿಸುವುದರ ಜತೆಗೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಾಗುವ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆ ಕರ್ನಾಟಕ ಮೀಡಿಯಾ ಕ್ಲಬ್ ಸಾಧನೆ ಗುರುತಿಸಿದ ಅವರು ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದ ಕಲಾ ಗ್ರಾಮದ ಸಭಾಂಗಣದಲ್ಲಿ ಕರ್ನಾಟಕ ಮೀಡಿಯಾ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಫ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊನ್ನಮ ಗವಿಮಠ ಶಿವಗಂಗೆ ಕ್ಷೇತ್ರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪಾಲನಹಳ್ಳಿ ಮಠದ ಡಾ. ಸಿದ್ದರಾಜು ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಕೃಷ್ಣಪ್ಪ, ಚಲನಚಿತ್ರ ನಟ ಚೇತನ್ ಅಹಿಂಸಾ, ಅಂತಾರಾಷ್ಟ್ರೀಯ ಖ್ಯಾತ ವೈದ್ಯ ಡಾ.ಪದ್ಮ ಪ್ರಕಾಶ, ಕರ್ನಾಟಕ ಮೀಡಿಯಾ ಕ್ಲಬ್ ಅಧ್ಯಕ್ಷ ರಮೇಶ ಎಸ್.ಜಿ. ಸೇರಿದಂತೆ ಅನೇಕ ಗಣ್ಯರು ಇದ್ದರು.
ಡಾ. ಶಂಕೀನ್ ಈ ಹಿಂದೆ ಕರುನಾಡ ರತ್ನಪ್ರಶಸ್ತಿ, ವೆಟರ್ನರಿ ಎಕ್ಸಲೆನ್ಸ್ ಪ್ರಶಸ್ತಿ, ರೈತ ಸ್ನೇಹಿ ಪ್ರಶಸ್ತಿ, ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ, ಕೊಪ್ಪಳ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು.ಡಾ.ಸಿದ್ದಲಿಂಗಯ್ಯ ಶಂಕೀನ್ ಸಾಮಾಜಿಕ ಸೇವೆ ಮತ್ತು ಮೂಕ ಪ್ರಾಣಿಗಳ ಸೇವೆ ಅಪಾರವಾಗಿದೆ ಎಂದು ಕುಷ್ಟಗಿ ಸಮಾಜ ಸೇವಕ ರವಿಕುಮಾರ ಹಿರೇಮಠ ತಿಳಿಸಿದ್ದಾರೆ.
ಡಾ. ಸಿದ್ದಲಿಂಗಯ್ಯ ಶಂಕೀನ್ ರೈತ ಸ್ನೇಹಿ ವ್ಯಕಿತ್ವ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಮಾಜ ಸೇವಕ ಕಂದಕೂರಪ್ಪ ವಾಲ್ಮೀಕಿ ತಿಳಿಸಿದ್ದಾರೆ.