ಸಾರಾಂಶ
ರಕ್ತ ಹೀರುವ ಜನರ ಮಧ್ಯೆ ರಕ್ತ ಕೊಡುವ, ರಕ್ತಸ್ರಾವ ನಿಲ್ಲಿಸುವ ಡಾ.ಸುರೇಶ ಹನಗವಾಡಿ ಅವರ ಕಾರ್ಯ ಸಂತರ ಕಾರ್ಯ, ಕಾಳಜಿಗಿಂತ ಮಿಗಿಲಾದುದು ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದಿದ್ದಾರೆ.
ದಾವಣಗೆರೆ: ರಕ್ತ ಹೀರುವ ಜನರ ಮಧ್ಯೆ ರಕ್ತ ಕೊಡುವ, ರಕ್ತಸ್ರಾವ ನಿಲ್ಲಿಸುವ ಡಾ.ಸುರೇಶ ಹನಗವಾಡಿ ಅವರ ಕಾರ್ಯ ಸಂತರ ಕಾರ್ಯ, ಕಾಳಜಿಗಿಂತ ಮಿಗಿಲಾದುದು ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.
ನಗರದ ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಗೆ ಶ್ರೀಗಳು ಇತ್ತೀಚೆಗೆ ಭೇಟಿ ನೀಡಿ, ಹಿಮೋಫಿಲಿಯಾ ಬಾಧಿತರು ಹಾಗೂ ಪೋಷಕರಿಗೆ ಆರ್ಶೀವಾದ ಮಾಡಿ ಮಾತನಾಡಿದರು. ಸಂತರು ಕೇವಲ ಮಠಗಳಲ್ಲಿ ಇರಬೇಕಿಲ್ಲ, ಸಂತರಂತವರು ಆಸ್ಪತ್ರೆಯಲ್ಲಿರಬೇಕು. ಆ ನಿಟ್ಟಿನಲ್ಲಿ ಡಾ.ಸುರೇಶ ಹನಗವಾಡಿ ಅವರ ಕಾರ್ಯವೈಖರಿ ದೇಶದಾದ್ಯಂತ ಹೆಸರು ಮಾಡಿದೆ ಎಂದು ಶ್ರೀಗಳು ಶ್ಲಾಘಿಸಿದರು.ಹಿಮೊಫಿಲಿಯಾ ಸೊಸೈಟಿಯ ಲೈಫ್‌ಲೈನ್ ರಕ್ತನಿಧಿ ಕೇಂದ್ರದ ಮೂಲಕ ರಕ್ತಸ್ರಾವ ರೋಗಿಗಳಿಗೆ ಉಚಿತವಾಗಿ ರಕ್ತ ಮತ್ತು ರಕ್ತಾಂಶಗಳನ್ನು ನೀಡುತ್ತಿದೆ. ಹಾಗೆಯೇ, ಹಿಮೋಫಿಲಿಯಾ ಬಾಧಿತರಿಗೆ ದುಬಾರಿ ವೆಚ್ಚದ ಔಷಧಿ ಉಚಿತವಾಗಿ ನೀಡಲು ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ಶ್ರೀಗಳು ಡಾ.ಸುರೇಶ ಹನಗವಾಡಿ, ಡಾ.ಮೀರಾ ಹನಗವಾಡಿ ದಂಪತಿಯನ್ನು ಆಶೀರ್ವದಿಸಿದರು. ಸೊಸೈಟಿಯ ಕಿರುವಾಡಿ ಗಿರಿಜಮ್ಮ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಎ.ಎಂ.ಕೊಟ್ರೇಶ್ವರ್, ಈಶ್ವರ್ ತಳವಾರ, ಸಿದ್ಧಲಿಂಗ ಸ್ವಾಮಿ, ಸಂಸ್ಥೆ ಸಿಬ್ಬಂದಿ, ಹಿಮೋಫಿಲಿಯಾ ಬಾಧಿತರು ಹಾಗೂ ಪೋಷಕರು ಉಪಸ್ಥಿತರಿದ್ದರು.- - -
-19ಕೆಡಿವಿಜಿ37:ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಆಗಮಿಸಿದ್ದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.