ಸಾರಾಂಶ
ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಮತ್ತು ಬ್ಯಾರಿಸ್ ಕಲ್ಚರಲ್ ಫೋರಮ್ (ಬಿಸಿಎಫ್)ನ ಪೋಷಕ ಡಾ. ತುಂಬೆ ಮೊಯ್ದೀನ್ ಅವರಿಗೆ ಬ್ಯಾರಿಸ್ ಕಲ್ಚರಲ್ ಫೋರಮ್ - ಯುಎಇಯಿಂದ ‘ಗ್ಲೋಬಲ್ ವಿಷನರಿ ಎನ್‌ಆರ್‌ಐ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಮತ್ತು ಬ್ಯಾರಿಸ್ ಕಲ್ಚರಲ್ ಫೋರಮ್ (ಬಿಸಿಎಫ್)ನ ಪೋಷಕ ಡಾ. ತುಂಬೆ ಮೊಯ್ದೀನ್ ಅವರಿಗೆ ಬ್ಯಾರಿಸ್ ಕಲ್ಚರಲ್ ಫೋರಮ್ - ಯುಎಇಯಿಂದ ‘ಗ್ಲೋಬಲ್ ವಿಷನರಿ ಎನ್‌ಆರ್‌ಐ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ತಿನ ಸದಸ್ಯ ನಜೀರ್ ಅಹಮದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿಯು ಜಾಗತಿಕ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ನಾವೀನ್ಯತೆಗಳಿಗೆ ಡಾ. ಮೊಯ್ದೀನ್ ಅವರ ಅಪ್ರತಿಮ ಕೊಡುಗೆಗಳನ್ನು ಗುರುತಿಸುವ ಒಂದು ಪ್ರಶಸ್ತಿಯಾಗಿದೆ. ಪ್ರಸಿದ್ಧ ಉದ್ಯಮಿ ಡಾ. ಮೊಯ್ದೀನ್ ಅವರು ತುಂಬೆ ಗ್ರೂಪ್ ಅನ್ನು ಜಾಗತಿಕ ಬ್ರ‍್ಯಾಂಡ್ ಆಗಿ ಯಶಸ್ವಿಯಾಗಿ ಪರಿವರ್ತಿಸಿದ್ದಾರೆ, ಹೊಸತನದ ಮೂಲಕ ಬೆಳವಣಿಗೆಯನ್ನು ಮುನ್ನಡೆಸುತ್ತಿದ್ದಾರೆ. ಸಮಾರಂಭದಲ್ಲಿ ನಜೀರ್ ಅಹ್ಮದ್ ಅವರು ಮಾತನಾಡಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ತುಂಬೆ ಮೊಯ್ದೀನ್, ಬ್ಯಾರೀಸ್ ಕಲ್ಚರಲ್ ಫೋರಂಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನಾವೀನ್ಯತೆ, ಜಾಗತಿಕ ಪೌರತ್ವ ಮತ್ತು ಸಮುದಾಯ ಕಲ್ಯಾಣವನ್ನು ಬೆಳೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.ಈ ಪ್ರಶಸ್ತಿಯು ಜಾಗತಿಕವಾಗಿ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ನಮ್ಮ ಯಶಸ್ಸಿನ ಮೂಲವಾಗಿರುವ ಅಚಲ ಸಮರ್ಪಣೆಯನ್ನು ಹೊಂದಿರುವ ನನ್ನ ಅದ್ಭುತ ತಂಡಕ್ಕೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ ಎಂದು ಡಾ. ಮೊಯ್ದೀನ್ ಹೇಳಿದರು.ಬ್ಯಾರೀಸ್ ಕಲ್ಚರಲ್ ಫೋರಂ ಆಯೋಜಿಸಿದ್ದ ಈ ಕಾರ್ಯಕ್ರಮ ಯುಎಇ ಮತ್ತು ಭಾರತದ ನಡುವಿನ ಬಲವಾದ ಸಾಂಸ್ಕೃತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ಎತ್ತಿ ತೋರಿಸಿತು.