ಡಾ. ವಸಂತಕುಮಾರ್ ತಿಮಕಾಪುರಗೆ ಬೀಳ್ಕೊಡುಗೆ

| Published : Jul 19 2024, 12:53 AM IST

ಸಾರಾಂಶ

ಲೆಮರೆ ಕಾಯಿಯಂತೆ ಈ ಭಾಗದ ರೈತರಿಗಾಗಿ ವಸಂತ ಕುಮಾರ್ ತಿಮಕಾಪುರ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ಹೊಸ ಆವಿಷ್ಕಾರ

ಕನ್ನಡಪ್ರಭ ವಾರ್ತೆ ಮೈಸೂರು

ಅಮೇರಿಕ ಪ್ರವಾಸ ಕೈಗೊಂಡಿರುವ ಮೈಸೂರಿನ ಕೃಷಿ ವಿಜ್ಞಾನಿ ಡಾ. ವಸಂತಕುಮಾರ್ ತಿಮಕಾಪುರ ಅವರನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಮತ್ತು ಪುಣ್ಯಕೋಟಿ ಸೇವಾ ಟ್ರಸ್ಟ್ ಸಹಯೋಗದಲ್ಲಿ

ಬೀಳ್ಕೊಡುಗೆ ನೀಡಲಾಯಿತು.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಯಮುನಾ ಮಾತನಾಡಿ, ತಿಮಕಾಪುರ ಅವರ ರೈತಪರ ಕಾಳಜಿಯನ್ನು ಸರ್ಕಾರ ಗುರುತಿಸಿ ಇವರ ಸೇವೆಯನ್ನು ಇನ್ನು ಹೆಚ್ಚಿನ ರೈತರಿಗೆ ದೊರೆಯುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಪ್ರೊ. ವಸಂತಮ್ಮ ಮಾತನಾಡಿ, ಎಲೆಮರೆ ಕಾಯಿಯಂತೆ ಈ ಭಾಗದ ರೈತರಿಗಾಗಿ ವಸಂತ ಕುಮಾರ್ ತಿಮಕಾಪುರ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ಹೊಸ ಆವಿಷ್ಕಾರ ಮಾಡಿ ಬೆಳೆಗಳನ್ನು ಕಾಡುವ. ಗುಣಪಡಿಸಲು ಸಾಧ್ಯವೇ ಇಲ್ಲದ ವೈರಸ್ಗೆ ಔಷಧಿಯನ್ನು ಮೈಸೂರಿನಲ್ಲಿರುವ ಪ್ರಯೋಗಾಲಯದಲ್ಲಿ ಅಭಿವೃದ್ದಿ ಪಡಿಸಿದ್ದು ಅದನ್ನುಅಮೇರಿಕದಲ್ಲಿ ಪ್ರಬಂಧ ಮಂಡಿಸಲು ಹೋಗುತ್ತಿರುವುದು ನಮಗೆಲ್ಲ ಅತ್ಯಂತ ಸಂತೋಷದ ವಿಷಯ. ಅವರ ಪ್ರವಾಸ ಸುಖಕರ ಮತ್ತು ಫಲಕಾರಿಯಗಲಿ ಎಂದು ಆಶಿಸಿದರು.

ಅವರ ಸೇವೆಗೆ ಕನ್ನಡರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿದ್ದು, ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿಗಳು ಸಿಗಲಿ ಎಂದರು.

ಪುಣ್ಯಕೋಟಿ ಸೇವಾ ಟ್ರಸ್ಟ್ ನ ಹನುಮಂತೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ. ವಸಂತ ಕುಮಾರ್ ತಿಮಕಾಪುರ ಅವರು ಅಮೇರಿಕದ ಮೆಮ್ ಫಿಸ್ ನಲ್ಲಿ ನಡೆಯುವ ಅಮೇರಿಕನ್ ಫೈಟೋಪೆಥಾಲಜಿಕಲ್ ಸೊಸೈಟಿಯ ಆಹ್ವಾನದ ಮೇರೆಗೆ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ.