ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ವರ್ಷದ ಜನ್ಮದಿನವನ್ನು ಕಾರ್ಕಳದ ಸುರಕ್ಷಾ ಸೇವಾಶ್ರಮದಲ್ಲಿ ಸೇವಾಧಾರಿತ ರೀತಿಯಲ್ಲಿ ಸಂಭ್ರಮಿಸಲಾಯಿತು.
ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹೆಬ್ರಿ ತಾಲೂಕು ಅಜೆಕಾರು ಜನಜಾಗೃತಿ ವೇದಿಕೆ ಹಾಗೂ ಶೌರ್ಯ ವಿಪತ್ತು ಘಟಕದ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ವರ್ಷದ ಜನ್ಮದಿನವನ್ನು ಕಾರ್ಕಳದ ಸುರಕ್ಷಾ ಸೇವಾಶ್ರಮದಲ್ಲಿ ಸೇವಾಧಾರಿತ ರೀತಿಯಲ್ಲಿ ಸಂಭ್ರಮಿಸಲಾಯಿತು.ಅನಾಥ ಮಕ್ಕಳ ಪಾಲಿನ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ಸೇವಾಶ್ರಮದಲ್ಲಿ ಕೇಕ್ ಕತ್ತರಿಸಿ, ಅನ್ನದಾನ ನಡೆಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜನಜಾಗೃತಿ ಸಮಿತಿಯ ವಲಯ ಅಧ್ಯಕ್ಷ ನಂದಕುಮಾರ್ ಹೆಗ್ಡೆ, ಸದಸ್ಯ ಪ್ರಶಾಂತ್ ಶೆಟ್ಟಿ, ವಲಯ ಮೇಲ್ವಿಚಾರಕ ನಿಶ್ಮಿತ್, ಘಟಕ ಸಂಯೋಜಕಿ ವಿಜಯ ಕಾಮತ್, ಒಕ್ಕೂಟ್ ಅಧ್ಯಕ್ಷ ಪ್ರವೀಣ್ ಮಡಿವಾಳ ಹಾಗೂ ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸೇವಾಶ್ರಮದ ಆಯಿಷ ಮೇಡಂ ನೆನಪಿನ ಕಾಣಿಕೆ ನೀಡಿ, ಆಶ್ರಮದ ಎಲ್ಲಾ ಸದಸ್ಯರೊಂದಿಗೆ ಪೂಜ್ಯ ವೀರೇಂದ್ರ ಹೆಗ್ಗಡೆ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳನ್ನು ಕೋರಿದರು.