ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪೂರಕವಾದ ಅರ್ಥಿಕ ನೆರವು. ಕೆರೆಗಳು, ಶಾಲೆಗಳಿ ಅಭಿವೃದ್ಧಿ, ಸ್ಮಶಾನ ನಿರ್ಮಾಣ ಮತ್ತು ನಿರ್ಗತಿಕರಿಗೆ ವಾತ್ಸಲ್ಯದ ಮನೆ, ವೃದ್ಧಾಶ್ರಮಗಳಿಗೆ ಹಾಗೂ ವಿಕಲಚೇತನರಿಗೆ ನೆರವು ಸೇರಿದಂತೆ ನೂರಾರು ಕಾರ್ಯಕ್ರಮಗಳ ಯೋಜನೆಗಳನ್ನು ಹೊಂದಿದ್ದು ರಾಜ್ಯದ ಲಕ್ಷಾಂತರ ಜನತೆಗೆ ಮಾರ್ಗದರ್ಶಕವಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಯೋಜನೆಗಳು ಸದೃಢ ಸಮಾಜಕ್ಕೆ ಸಹಕಾರಿಯಾಗಿವೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ತಾಲೂಕಿನ ಹರಿಹರಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಶ್ರೀಧರ್ಮಸ್ಥಳ ಯೋಜನೆ ಮೂಲಕ ಕೃಷಿ, ಅರ್ಥಿಕ, ಸಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪೂರಕವಾದ ಅರ್ಥಿಕ ನೆರವು. ಕೆರೆಗಳು, ಶಾಲೆಗಳಿ ಅಭಿವೃದ್ಧಿ, ಸ್ಮಶಾನ ನಿರ್ಮಾಣ ಮತ್ತು ನಿರ್ಗತಿಕರಿಗೆ ವಾತ್ಸಲ್ಯದ ಮನೆ, ವೃದ್ಧಾಶ್ರಮಗಳಿಗೆ ಹಾಗೂ ವಿಕಲಚೇತನರಿಗೆ ನೆರವು ಸೇರಿದಂತೆ ನೂರಾರು ಕಾರ್ಯಕ್ರಮಗಳ ಯೋಜನೆಗಳನ್ನು ಹೊಂದಿದ್ದು ರಾಜ್ಯದ ಲಕ್ಷಾಂತರ ಜನತೆಗೆ ಮಾರ್ಗದರ್ಶಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಬಿರದಲ್ಲಿ 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದುಕೊಂಡರು. ಸಾದುಗೋನಹಳ್ಳಿ ಬಳಿಯ ವೃದ್ಧಾಶ್ರಮದಲ್ಲಿ 70 ವೃದ್ಧರಿಗೆ ಹಣ್ಣು ಹಂಪಲು ವಿತರಿಸಲಾಯಿತು. ಸಂಸ್ಥೆ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್, ಮೈಸೂರು ಪ್ರಾದೇಶಿಕ ಕಚೇರಿ ಜನ ಜಾಗೃತಿ ಯೋಜನಾಧಿಕಾರಿ ಮುಕೇಶ್, ಕಿಕ್ಕೇರಿ ತಾಲೂಕಿನ ಯೋಜನಾಧಿಕಾರಿ ಪ್ರಸಾದ್, ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ ನಳಿನ, ನಿರ್ದೇಶಕರಾದ ಮೊಟ್ಟೆ ಮಂಜು, ಡಿ.ಸಿಕುಮಾರ್, ಹರಿಹರಪುರ ವಲಯ ಮೇಲ್ವಿಚಾರಕಿ ಸಂಗೀತ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಒಕ್ಕೂಟದ ಅಧ್ಯಕ್ಷರಾದ ಕಲ್ಪನಾ, ಲತಾ ಗವಿಗೌಡ, ಶಾಲಾ ಮುಖ್ಯ ಶಿಕ್ಷಕ ರಮೇಶ್, ಸೇವಾಪ್ರತಿನಿಧಿಗಳಾದ ಮಂಜುಳಾ, ಶೃತಿ, ವೀಣಾ, ಗೀತಾ, ರೇಖಾ, ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.