ಸಾರಾಂಶ
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 2029ನೇ ಸಾಲಿನ ಅವಧಿಗೆ ಎಲ್ಲ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯಾ ಕರಡು ಮತದಾರರ ಪಟ್ಟಿಯನ್ನು ಎಲ್ಲ ಇಲಾಖೆಗಳಿಂದ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿವರದಂತೆ ಜು.1ರಂದು ಚಿಕ್ಕೋಡಿಯ ಬಸವ ಸರ್ಕಲ್ ಬಳಿ ಇರುವ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ ಕಚೇರಿಯ ಸಭಾಗೃಹದಲ್ಲಿರುವ ಜಿಲ್ಲಾ ಶಾಖೆಯ ಸೂಚನಾ ಫಲಕದಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಚಿಕ್ಕೋಡಿ: ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 2029ನೇ ಸಾಲಿನ ಅವಧಿಗೆ ಎಲ್ಲ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯಾ ಕರಡು ಮತದಾರರ ಪಟ್ಟಿಯನ್ನು ಎಲ್ಲ ಇಲಾಖೆಗಳಿಂದ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿವರದಂತೆ ಜು.1ರಂದು ಚಿಕ್ಕೋಡಿಯ ಬಸವ ಸರ್ಕಲ್ ಬಳಿ ಇರುವ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ ಕಚೇರಿಯ ಸಭಾಗೃಹದಲ್ಲಿರುವ ಜಿಲ್ಲಾ ಶಾಖೆಯ ಸೂಚನಾ ಫಲಕದಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚಿಕ್ಕೋಡಿ ತಾಲೂಕಿನ ರಾಜ್ಯ ಸರ್ಕಾರಿ ನೌಕರರು ಮನವಿ ಆಕ್ಷೇಪಣೆಗಳನ್ನು ಸಲ್ಲಿಸುವವರು ಜು.2 ರಿಂದ ಜು.10ರವರೆಗೆ ಸೂಕ್ತ ದಾಖಲೆಗಳೊಂದಿಗೆ ಸಂಘದ ಜಿಲ್ಲಾ ಕಚೇರಿ (ಟಿಎಚ್‌ಒ ಕಚೇರಿ ಸಭಾಗೃಹ)ಗೆ ಸಲ್ಲಿಸಲು ಕೋರಿದೆ. ಮಾಹಿತಿಗಾಗಿ ಬಿ.ಎ.ಕುಂಬಾರ(ಮೊ. 9448805406) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.