Draft voter list to be published on August 17, final voter list on August 19

-ಚುನಾವಣಾಧಿಕಾರಿ ಇಕ್ರಮ ಶರೀಫ್ ಮಾಹಿತಿ । ಎಸ್ಐಆರ್ ಪರಿಷ್ಕರಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ । ಆ. 8ರವರೆಗೆ ಬಿಎಲ್‌ಒ ಮನೆ-ಮನೆಗೆ ಭೇಟಿ

----

ಕನ್ನಡಪ್ರಭವಾರ್ತೆ ಕಲಬುರಗಿ

ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಬಿ‌ಎಲ್‌ಒಗಳು ಆಗಸ್ಟ್ 8ರ ವರೆಗೆ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಜತೆ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಡಿಜಿಟೈಸ್ ಕಾರ್ಯ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ ಶರೀಫ್ ತಿಳಿಸಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯಂತೆ ಜುಲೈ 29ರ ಬದಲಿಗೆ ಆಗಸ್ಟ್ 8ರ ವರೆಗೆ ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ ಸಂಗ್ರಹಣೆ ಮಾಡಿ ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಿದ್ದಾರೆ. ಇದೇ ಅವಧಿಯಲ್ಲಿ ಮತಗಟ್ಟೆಗಳ ರೇಷನಲೈಸೇಷನ್ ಕಾರ್ಯ ಸಹ ನಡೆಯಲಿದೆ. ಆಗಸ್ಟ್ 17ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ಸೆಪ್ಟೆಂಬರ್ 16ರ ವರೆಗೆ ಆಕ್ಷೇಪಣೆ ಆಹ್ವಾನಿಸಿ ಅಕ್ಟೋಬರ್ 15ರೊಳಗೆ ಆಕ್ಷೇಪಣೆ ವಿಲೇವಾರಿ ಮಾಡಿ ಕೊನೆಗೆ ಅಕ್ಟೋಬರ್ 19ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಜೂನ್ 30 ರಿಂದ ಜಿಲ್ಲೆಯಲ್ಲಿ ಎಸ್.ಐ.ಆರ್ ಕಾರ್ಯ ನಡೆದಿದ್ದು ಜಿಲ್ಲೆಯಾದ್ಯಂತ ಬಿ.ಎಲ್.ಒ ಗಳು ಮನೆ-ಮನೆಗೆ ಹೋಗಿ ಒಟ್ಟು 23,71,542 ಮತದಾರರ ಪೈಕಿ 23,59,324 ಜನರಿಗೆ ಗಣತಿ ನಮೂನೆ ವಿತರಣೆ ಮಾಡಿದ್ದಾರೆ. 8,89,088 ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್‌ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಬಿಎಲ್ಒ ಗಳು ಮನೆ-ಮನೆಗೆ ಭೇಟಿ ನೀಡಿ 9,782 ಜನ ಮತದಾರರು ನಿಧನ ಹೊಂದಿರುವ ಬಗ್ಗೆ, 361 ಮತದಾರರು ವಿಳಾಸದಲ್ಲಿಲದ(ಗೈರು), 9,061 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 2,364 ಮತದಾರರು ಈಗಾಗಲೆ ನೋಂದಣಿಯಾಗಿರುವುದು ವರದಿಯಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಕಲಬುರಗಿ ದಕ್ಷಿಣ ಕ್ಷೇತ್ರ: ಶೇ.98.20ರಷ್ಟು ಗಣತಿ ನಮೂನೆ ವಿತರಣೆ

ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರದಿಂದ ಸಾಗಿದ್ದು, ಕ್ಷೇತ್ರದಾದ್ಯಂತ ಬುಧವಾರದ ಅಂತ್ಯಕ್ಕೆ ಒಟ್ಟು 2,97,785 ಮತದಾರರ ಪೈಕಿ 2,92,422 (ಶೇ.98.20)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು(ಅಭಿವೃದ್ಧಿ) ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಪ್ರಮೀಳಾ ಎಂ.ಕೆ. ತಿಳಿಸಿದ್ದಾರೆ.

ಇದೂವರೆಗೆ ಬಿ.ಎಲ್.ಒ ಗಳು 54,528 (ಶೇ.18.31) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್‌ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಇನ್ನು 2,574 (ಶೇ.0.86) ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿ.ಎಲ್.ಒಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 06 ಜನ‌ ಮತದಾರರು ವಿಳಾಸದಲ್ಲಿ ಗೈರು, 506 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ.

ಕಲಬುರಗಿ ಉತ್ತರ ಕ್ಷೇತ್ರ: ಶೇ.98.70ರಷ್ಟು ಗಣತಿ ನಮೂನೆ ವಿತರಣೆ

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರದಿಂದ ಸಾಗಿದ್ದು, ಕ್ಷೇತ್ರದಾದ್ಯಂತ ಬುಧವಾರದ ಅಂತ್ಯಕ್ಕೆ ಒಟ್ಟು 3,35,254 ಮತದಾರರ ಪೈಕಿ 3,30,909 (ಶೇ.98.70)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದು ಪಾಲಿಕೆಯ ಆಯುಕ್ತ ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅವಿನಾಶ ಶಿಂಧೆ ತಿಳಿಸಿದ್ದಾರೆ.

ಇದೂವರೆಗೆ ಬಿ.ಎಲ್.ಒ ಗಳು 71,275 (ಶೇ.21.26) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್‌ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಇನ್ನು 1,565 (ಶೇ.0.47) ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿ.ಎಲ್.ಒ ಗಳು ಮನೆ-ಮನೆ ಭೇಟಿ ನೀಡಿದಾಗ, 115 ಜನ‌ ಮತದಾರರು ವಿಳಾಸದಲ್ಲಿ ಗೈರು, 719 ಮತದಾರರು ಶಾಶ್ವತವಾಗಿ ಸ್ಥಳಾಂತರ, 1,209 ಜನ ಮತದಾರರು ನಿಧನ, 465 ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದ್ದಾರೆ.ಜೇವರ್ಗಿ ಕ್ಷೇತ್ರ: ಶೇ.99.84ರಷ್ಟು ಗಣತಿ ನಮೂನೆ ವಿತರಣೆ

ಜೇವರ್ಗಿ ಕ್ಷೇತ್ರದಲ್ಲಿ ಭರದಿಂದ ಸಾಗಿದ್ದು, ಕ್ಷೇತ್ರದಾದ್ಯಂತ ಬುಧವಾರದ ಅಂತ್ಯಕ್ಕೆ ಒಟ್ಟು 2,59,061 ಮತದಾರರ ಪೈಕಿ 2,58,668 (ಶೇ.99.84)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಜೇವರ್ಗಿ ತಹಸೀಲ್ದಾರ್ ಅಂಜುಮ್ ತಬಸುಮ್ ತಿಳಿಸಿದ್ದಾರೆ.

ಇದೂವರೆಗೆ ಬಿಎಲ್‌ಒ ಗಳು 1,05,466 (ಶೇ.40.71) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್‌ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ.