ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಮಲಬಾರ್ ವಿಶ್ವ ರಂಗ ಪುರಸ್ಕಾರ -2026 ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಶ್ರೀಪತಿ ಮಂಜನಬೈಲು ಬೆಂಗಳೂರು, ಗೀತಾ ಸುರತ್ಕಲ್, ಎಸ್. ನಿತ್ಯಾನಂದ ಪೈ ಕಾರ್ಕಳ, ಅವಿನಾಶ್ ಕಾಮತ್ ಮುಂಬೈ, ರಾಮ್ ಶೆಟ್ಟಿ ಹಾರಾಡಿ ಅವರಿಗೆ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಮಲಬಾರ್ ವಿಶ್ವ ರಂಗ ಪುರಸ್ಕಾರ -2026 ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಶ್ರೀಪತಿ ಮಂಜನಬೈಲು ಬೆಂಗಳೂರು, ಗೀತಾ ಸುರತ್ಕಲ್, ಎಸ್. ನಿತ್ಯಾನಂದ ಪೈ ಕಾರ್ಕಳ, ಅವಿನಾಶ್ ಕಾಮತ್ ಮುಂಬೈ, ರಾಮ್ ಶೆಟ್ಟಿ ಹಾರಾಡಿ ಅವರಿಗೆ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪ್ರತಿಯೊಂದು ನಾಟಕವು ಸಮಾಜಕ್ಕೆ ಹೊಸ ಆಲೋಚನೆ ನೀಡುವ ಬೆಳಕಿನ ಕಿರಣವಾಗಿರುತ್ತದೆ, ಕಲಾವಿದರು ಆ ಪಾತ್ರಕ್ಕೆ ಶಕ್ತಿ ತುಂಬುವ ಮೂಲಕ ಪ್ರೇಕ್ಷಕರಿಗೆ ಹೊಸ ಭರವಸೆ ಮತ್ತು ಸಂದೇಶ ನೀಡುವ ಕಾರ್ಯ ಮಾಡುತ್ತಾರೆ ಎಂದರು.ಶಂಕರ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕಿ ಸುಗುಣ ಸುವರ್ಣ ಮಾತನಾಡಿ, ರಂಗಭೂಮಿಯು ಸಮಾಜವನ್ನು ಸರಿ ದಾರಿಗೆ ತಲುಪಲು ನೆರವು ನೀಡುತ್ತದೆ. ಕಲಾವಿದರಿಗೆ ಗೌರವ ನೀಡಿದಾಗ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ಸಾಹ ಸಿಗುತ್ತದೆ ಎಂದರು.

ಮಣಿಪಾಲದ ನವೀನ್ ಕುಮಾರ್ ಶುಭ ಹಾರೈಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ನ ಶಾಖಾ ವ್ಯವಸ್ಥಾಪಕ ಹಫೀಸ್ ರೆಹಮಾನ್, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು. ಮಲಬಾರ್ ಗೋಲ್ಡ್ ಸಿಬ್ಬಂದಿ, ರಂಗ ನಟ ವಿಘ್ನೇಶ್ ಹಿರಿಯಡಕ ಅವರನ್ನು ಗೌರವಿಸಲಾಯಿತು. ಡಾ. ಭಾರ್ಗವಿ ಐತಾಳ, ರಂಜನಿ ವಸಂತ್, ವಿದ್ಯಾಸರಸ್ವತಿ, ಪೂರ್ಣಿಮಾ ಜನಾರ್ದನ್, ವಿದ್ಯಾ ಶ್ಯಾಮಸುಂದರ್ ಅವರು ಪುರಸ್ಕೃತರನ್ನು ಪರಿಚಯಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು.ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಸಂಧ್ಯಾ ಶೆಣೈ ವಂದಿಸಿದರು.