ಸಾರಾಂಶ
ಭಾಷೆಯ ಮೂಲಕ ಸಮಾಜದ ಅಂತರಾಳದ ಭಾವನೆಗಳು, ಧಾರ್ಮಿಕತೆ, ನೈತಿಕತೆ ಹಾಗೂ ಮಾನವೀಯತೆ ಹೊರಹೊಮ್ಮುತ್ತವೆ
ಹನಮಸಾಗರ: ಕ್ಷಾತ್ರ ಭಾಷೆಯಲ್ಲಿ ನಾಟಕ ಪ್ರದರ್ಶನ ಮಾಡುವುದು ನಮ್ಮ ಸಂಸ್ಕೃತಿಯ ಗೌರವ ಉಳಿಸಿ ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದು ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ ಹೇಳಿದರು.
ಪಟ್ಟಣದ ಎಸ್‌ಎಸ್‌ಕೆ ಸಮಾಜದಿಂದ ಕ್ಷಾತ್ರ ಭಾಷೆಯ ಸೊಗಡಿನಲ್ಲಿ ರಚಿಸಲ್ಪಟ್ಟ ನಾಲ್ಕನೇ ನಾಟಕ ಧರ್ಮದರ್ಶಿ ಮಂಗಳವಾರ ರಾತ್ರಿ ಪಟ್ಟಣದ ವೆಂಕಪ್ಪಯ್ಯ ದೇಸಾಯಿ ಬಯಲು ಮೈದಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾಷೆಯ ಮೂಲಕ ಸಮಾಜದ ಅಂತರಾಳದ ಭಾವನೆಗಳು, ಧಾರ್ಮಿಕತೆ, ನೈತಿಕತೆ ಹಾಗೂ ಮಾನವೀಯತೆ ಹೊರಹೊಮ್ಮುತ್ತವೆ. ಇಂತಹ ಕೃತಿಗಳು ಯುವ ಪೀಳಿಗೆಗೆ ಸ್ಫೂರ್ತಿದಾಯಕ.ನಾಟಕ ಎಂಬ ಕಲೆ ಕೇವಲ ಮನರಂಜನೆಯ ಸಾಧನವಾಗಿ ಅಲ್ಲ, ಅದು ಸಮಾಜದ ಕನ್ನಡಿ. ಕ್ಷಾತ್ರ ಭಾಷೆಯ ನಾಟಕಗಳು ಗ್ರಾಮೀಣ ಬದುಕಿನ ನಿಜ ಸ್ವರೂಪ ಚಿತ್ರಿಸುವ ಮೂಲಕ ನಮ್ಮ ಪರಂಪರೆಯ ಮೂಲ ಮೌಲ್ಯ ಸಾರುತ್ತವೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ರಾಜೇಂದ್ರ ಪಂಥ, ಕಿಶನರಾವ್ ಕುಲಕರ್ಣಿ, ಮಲ್ಲಯ್ಯ ಕೋಮಾರಿ, ಶ್ರಿನಿವಾಸ ಜಹಗೀರದಾರ ಮಾತನಾಡಿದರು. ಅಂಬಾಸಾ ರಂಗ್ರೇಜ, ಮಾರುತಿಸಾ ರಂಗ್ರೇಜ, ವೆಂಕಪ್ಪಯ್ಯ ದೇಸಾಯಿ, ಶಂಕರಸಾ ರಾಯಬಾಗಿ, ತುಳಸಾಬಾಯಿ ಕಾಟವಾ, ಭವಾನಿಸಾ ಕಾಟವಾ, ಹನುಂತಸಾ ರಾಯಬಾಗಿ, ಗುರುನಾಥಸಾ ನಿರಂಜನ, ವಿಠಲಸಾ ಪವಾರ, ಮಂಜುನಾಥ ಪಾಟೀಲ, ವಿನೋದ ಪಾಟೀಲ, ಶಂಕರ ಬಸೂದೆ, ಸುನೀಲ ಬಸೂದೆ, ನೇಮಾಸಾ ರಂಗ್ರೇಜ, ಹನುಮಂತಸಾ ಕಾಟವಾ, ಪಾತ್ರಧಾರಿಗಳಾದ ಭವಾನಿಸಾ ಪಾಟೀಲ, ಅಂಬಾಸಾ ರಾಯಬಾಗಿ, ರಾಜು ರಾಯಬಾಗಿ, ರಾಘವೇಂದ್ರಸಾ ರಾಯಬಾಗಿ, ಮಂಜುನಾಥ ಪಾಟೀಲ, ಗಂಗಾಧರ ರಾಯಬಾಗಿ, ಸುನಿಲ ಕಾಟವಾ, ತಿಲಕ ಮೆರವಾಡೆ, ವೆಂಕಟೇಶ ರಂಗ್ರೇಜ, ಭೀಮಸಾ ದೇವಳೆ ಇತರರು ಇದ್ದರು.