ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ: ರುದ್ರಗೌಡ ಗೌಡಪ್ಪನವರ

| Published : Feb 10 2025, 01:46 AM IST

ಸಾರಾಂಶ

ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ರಂಗಕಲೆ ಉಳಿದಿದೆ.

ಹನುಮಸಾಗರದಲ್ಲಿ ಉಚಿತ ನಾಟಕ ಪ್ರದರ್ಶನ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷಕನ್ನಡಪ್ರಭ ವಾರ್ತೆ ಹನುಮಸಾಗರ

ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ರಂಗಕಲೆ ಉಳಿದಿದೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.

ಗ್ರಾಮದ ಶ್ರೀ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ನಿಸರ್ಗ ಸಂಗೀತ ಶಾಲೆ ಹಾಗೂ ರಂಗ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ರಂಗ ಕಲಾವಿದ ಪಿ.ಬಿ. ಧುತ್ತರಗಿ ಹಾಗೂ ಸರೋಜಮ್ಮ ಧುತ್ತರಗಿ ಸ್ಮರಣಾರ್ಥಕವಾಗಿ ಸಿಂಧೂರ ಲಕ್ಷ್ಮಣ - ಉಚಿತ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸಿನಿಮಾ, ಮೊಬೈಲ್ ಹಾವಳಿಯಿಂದ ರಂಗಕಲೆಯಾದ ನಾಟಕ, ಯಕ್ಷಗಾನ, ಬಯಲಾಟ ಮತ್ತಿತರ ಜನಪದ ಕಲೆಗಳು ನಶಿಸಿ ಹೋಗುತ್ತಿರುವುದು ವಿಷಾದದ ಸಂಗತಿ ಎಂದರು.

ನಿಸರ್ಗ ಕೋಮಾರಿ ಹಾಗೂ ಶ್ರೇಯಾ ಚಲವಾದಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಗಾನಯೋಗಿ ಪಂ. ಪುಟ್ಟರಾಜ ಗವಾಯಿ ಭಜನ ಮಂಡಳಿಯವರು ಹಂತಿಪದ ಹಾಗೂ ಜನಪದ ಸಂಗೀತ ಪ್ರಸ್ತುತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಮುಖಂಡರಾದ ಕರಿಸಿದ್ಧಪ್ಪ ಕುಷ್ಟಗಿ, ಬಸವರಾಜ ಹಳ್ಳೂರ, ವಿಶ್ವನಾಥ ಕನ್ನೂರ, ವಿಶ್ವನಾಥ ನಾಗೂರ, ಮಹಾಂತೇಶ ಅಗಸಿಮುಂದಿನ, ಬಸವಂತಪ್ಪ ಕಂಪ್ಲಿ, ಶ್ರೀಶೈಲ ಮೋಟಗಿ, ಬಸವರಾಜ ಬಾಚಲಾಪುರ, ವಿರೂಪಾಕ್ಷಪ್ಪ ಧುತ್ತರಗಿ, ಮಹಾಂತಯ್ಯ ಕೋಮಾರಿ, ಈರಣ್ಣ ಹುನಗುಂಡಿ, ಸಕ್ರಪ್ಪ ಬಿಂಗಿ, ಕಲ್ಯಾಣಮ್ಮ ಹಿರೇಮಠ, ಶ್ರೀನಿವಾಸ ಜಹಗೀದಾರ, ಸಂಸ್ಥೆಯ ಕಾರ್ಯದರ್ಶಿ ಶ್ರೀದೇವಿ ಕೋಮಾರಿ ಇತರರು ಇದ್ದರು.

ಲೀಲಾವತಿ ಶೆಟ್ಟರ್, ರಾಮಚಂದ್ರ ಬಡಿಗೇರ, ಕಿಶನರಾವ್ ಕುಲಕರ್ಣಿ ನಿರ್ವಹಿಸಿದರು.