ಸಾರಾಂಶ
ಪಂಚನಹಳ್ಳಿಯ ಶಿವಸಂಚಾರ ನಾಟಕೋತ್ಸವದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
ಕನ್ನಡಪ್ರಭ ವಾರ್ತೆ, ಕಡೂರುನಮ್ಮನ್ನು ನಾವು ಸುಸಂಸ್ಕೃತನನ್ನಾಗಿ ಮಾಡಿಕೊಳ್ಳಲು ನಾಟಕಗಳು ಸಹಕಾರಿಯಾಗುತ್ತವೆ ಎಂದು ಸಾಣೇಹಳ್ಳಿ ಶ್ರೀಮಠದ ಡಾ. ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಂಚನಹಳ್ಳಿಯಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವದ ಎರಡನೇ ದಿನ ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಾಟಕಗಳು ಈ ಸಮಾಜದ ಕನ್ನಡಿಯಿದ್ದಂತೆ. ಸಮಾಜದ ನೂನ್ಯತೆಗಳನ್ನು ತೋರಿಸುತ್ತವೆ ಮತ್ತು ಸಮಾಜದ ಸುಧಾರಣೆಗೆ ಸಹಕಾರಿಯಾಗುತ್ತವೆ ಎಂದರು.ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಸಹಕಾರಿ. ಅದರಲ್ಲೂ ಮಕ್ಕಳಲ್ಲಿ ಕಲೆ ಮತ್ತು ಸಾಹಿತ್ಯದ ಬಗ್ಗೆ ಒಲವು ಮೂಡಿಸಿದರೆ ಮಕ್ಕಳ ಮನಸ್ಸು ಅರಳುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆ ತಂತಾಗುತ್ತದೆ ಎಂದರು.
ಬರಗಾಲದಲ್ಲಿ ನಾಟಕ ಪ್ರದರ್ಶನ ಬೇಡ ಎನ್ನವುದು ಕೆಲವರ ಅಭಿಪ್ರಾಯವಾಗಿತ್ತು. ಆದರೆ ಜನರಿಗೆ ಮನೋ ಸ್ಥೈರ್ಯ ತುಂಬುವ ಮತ್ತು ಬದುಕಿನಲ್ಲಿ ಭರವಸೆ ಮೂಡಿಸುವ ನಾಟಕಗಳ ಪ್ರದರ್ಶನ ಬರಗಾಲ ದಲ್ಲಿಯೇ ಹೆಚ್ಚು ಪ್ರಸ್ತುತ. ಎಲ್ಲಾ ಕಾಲದಲ್ಲೂ ನಾಟಕಗಳನ್ನು ನೋಡುವ ಅಭಿರುಚಿ ಬೆಳೆಸಬೇಕಿದೆ. ಅನೇಕ ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಂಡಿರುವ ಶಿವಸಂಚಾರ ನಾಟಕಗಳು ಜನರ ಮನಸ್ಸು ಮುಟ್ಟಿವೆ. ದೃಶ್ಯ ಮಾಧ್ಯಮದ ನಡುವೆಯೂ ಶಿವ ಸಂಚಾರ ನಾಟಕಗಳು ಹೆಚ್ಚು ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಮಾತನಾಡಿ ಧಾರವಾಹಿಗಳ ಹಾವಳಿ ನಡುವೆಯೂ ನಾಟಕ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದು ಸಂತಸದ ವಿಚಾರ. ರಂಗ ಶಾಲೆ ಕಟ್ಟುವುದು ಮತ್ತು ಅಲ್ಲಿ ಕಲಿತ ವಿದ್ಯಾರ್ಥಿಗಳಿಂದ ದೇಶದ್ಯಾಂತ ನಾಟಕಗಳು ಪ್ರದರ್ಶನಗೊಳ್ಳುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳು ಕಳೆದ 27 ವರ್ಷಗಳಿಂದ ರಂಗಭೂಮಿಗೆ ತಮ್ಮದೆಯಾದ ಕೊಡುಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ. ಪ್ರತಿ ವರ್ಷ ಗ್ರಾಮಸ್ಥರ ಸಹಕಾರದಿಂದ ಪಂಚನಹಳ್ಳಿಯಲ್ಲಿ ಶಿವ ಸಂಚಾರ ನಾಟಕೋತ್ಸವ ಏರ್ಪಡಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಸಾವೆ ಮರುಳಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಪಿ.ಎಂ.ಪಾಪಣ್ಣ, ಪಿ.ಎಸ್. ಸಂತೋಷ್, ಪಿ.ಆರ್.ರಂಗನಾಥ್, ಲತಾ ಹಾಲಪ್ಪ, ರೂಪ ಶ್ರೀನಿವಾಸ್, ಉಪನ್ಯಾಸಕ ಟಿ.ಎನ್.ಚನ್ನಬಸಪ್ಪ, ಮೊರಾರ್ಜಿ ಸತೀಶ್, ಪಿ.ಈ.ಸಂಜಯ್ ಮತ್ತಿತರಿದ್ದರು. 8ಕೆಕೆಡಿಯು3ಪಂಚನಹಳ್ಳಿಯಲ್ಲಿ ನಡೆಯುತ್ತಿರುವ ಶಿವ ಸಂಚಾರ ನಾಟಕೋತ್ಸವದ ಎರಡನೇ ದಿನವಾದ ಗುರುವಾರ ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸಾಣೇಹಳ್ಳಿ ಮಠದ ಡಾ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.