ಸಾರಾಂಶ
ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಮಾದಕ ವ್ಯಸನಿಯೊಬ್ಬ ಏಕಾಏಕಿ ಅಡ್ಡ ಹಾಕಿ ಆಕೆಯ ಜತೆ ಅನುರ್ಚಿತವಾಗಿ ನಡೆದುಕೊಂಡಿದಲ್ಲದೇ ಬಲವಂತ ಮಾಡಲು ಮುಂದಾದಾಗ ವಿರೋಧ ವ್ಯಕ್ತಪಡಿಸಿದ ವೇಳೆ ಆಕೆಗೆ ಥಳಿಸಿದ್ದು, ಸುತ್ತಮುತ್ತ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದಾಗ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ೮ ಗಂಟೆಯ ಸಮಯದಲ್ಲಿ ನಗರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹಾಸನ
ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಮಾದಕ ವ್ಯಸನಿಯೊಬ್ಬ ಏಕಾಏಕಿ ಅಡ್ಡ ಹಾಕಿ ಆಕೆಯ ಜತೆ ಅನುರ್ಚಿತವಾಗಿ ನಡೆದುಕೊಂಡಿದಲ್ಲದೇ ಬಲವಂತ ಮಾಡಲು ಮುಂದಾದಾಗ ವಿರೋಧ ವ್ಯಕ್ತಪಡಿಸಿದ ವೇಳೆ ಆಕೆಗೆ ಥಳಿಸಿದ್ದು, ಸುತ್ತಮುತ್ತ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದಾಗ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ೮ ಗಂಟೆಯ ಸಮಯದಲ್ಲಿ ನಗರದಲ್ಲಿ ನಡೆದಿದೆ. ಅಂಗಡಿ ಮಾಲೀಕನೋರ್ವ ಮಾಧ್ಯಮದೊಂದಿಗೆ ಮಾತನಾಡಿ, ಮಂಗಳವಾರ ಸಂಜೆ ಸುಮಾರು ೭:೩೦ರ ಗಂಟೆಯ ಸಮಯ ಕಟ್ಟಿನಕೆರೆ ಮಾರುಕಟ್ಟೆ ಪಿಕ್ಚರ್ ಪ್ಯಾಲೇಸ್ ಪಕ್ಕದ ಧ್ವಾರದ ರಸ್ತೆಯಲ್ಲಿ ಹುಡುಗಿ ಓರ್ವಳು ನಡೆದುಕೊಂಡು ಬರುತ್ತಿರಬೇಕಾದರೇ ಮಾದಕವ್ಯಸನಿ ಓರ್ವ ಆಕೆಯ ಜತೆ ಅನುಚಿತವಾಗಿ ನಡೆದುಕೊಂಡು ತೊಂದರೆ ಕೊಟ್ಟಿದ್ದಾನೆ. ಈ ವೇಳೆ ಸುತ್ತ ಮುತ್ತ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಭಾಗದಲ್ಲಿ ಇಂತಹ ಕೃತ್ಯಗಳು ಹೆಚ್ಚು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿವಿಧ ರೀತಿಯಲ್ಲಿ ನಶೆ ಏರಿಸಿಕೊಂಡ ಪುಂಡರು ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ರೇಗಿಸುತ್ತಿದ್ದು, ಈ ಭಾಗದಲ್ಲಿ ಹೆಣ್ಣು ಮಕ್ಕಳು ಓಡಾಡುವುದೇ ಅಸಹ್ಯ ಎನಿಸುವಂತಾಗಿದೆ. ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಇಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಇಬ್ಬರೂ ಸೆಕ್ಯೂರಿಟಿ ಇದ್ದರೂ ಇಂತಹ ಸಣ್ಣಪುಟ್ಟ ಕೃತ್ಯಗಳು ನಡೆಯುತ್ತಿವೆ. ಕೀಳು ಮಟ್ಟದ ಜನರಿಂದಾಗಿ ಈ ಭಾಗದಲ್ಲಿರುವ ಅಂಗಡಿಗಳಿಗೆ ಮಹಿಳೆಯರು ಬರಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಮ್ಮ ವ್ಯಾಪಾರ ಕೂಡ ಹಾಳಾಗುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಇಲ್ಲಿಗೆ ಪೊಲೀಸ್ ಬೀಟ್ ನಿಯೋಜಿಸುವಂತೆ ಮನವಿ ಮಾಡಿದರು.