ಸಾರಾಂಶ
ಇತ್ತೀಚಿನ ಕಲುಷಿತ ವಾತಾವರಣದಲ್ಲಿ ರೋಗಗಳಿಂದ ಮುಕ್ತವಾಗಬೇಕಾದರೆ ಶುದ್ಧ ನೀರು ಸೇವನೆ ಅತ್ಯವಶ್ಯ
ಗದಗ: ಇತ್ತೀಚಿನ ಕಲುಷಿತ ವಾತಾವರಣದಲ್ಲಿ ರೋಗಗಳಿಂದ ಮುಕ್ತವಾಗಬೇಕಾದರೆ ಶುದ್ಧ ನೀರು ಸೇವನೆ ಅತ್ಯವಶ್ಯ. ಅಂತಹ ಶುದ್ಧ ಕುಡಿಯುವ ನೀರನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟ ಪುಣ್ಯ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಲ್ಲುತ್ತದೆ ಎಂದು ನಿವೃತ್ತ ಡಿಡಿಪಿಐ ಎಂ.ಎ. ರಡ್ಡೇರ ಹೇಳಿದರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿದ ಶುದ್ಧ ನೀರು ಘಟಕ ಹಾಗೂ ನಗರಸಭೆಯ ನೆರವಿನ ಹೈಮಾಸ್ಟ್ ದೀಪ ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಹಲವಾರು ದಾನಿಗಳ ನೆರವಿನಿಂದ ಸರ್ಕಾರಿ ಪ್ರೌಢಶಾಲೆ ಒಂದು ಹೊಸ ಕಳೆ ಕಟ್ಟಿಕೊಟ್ಟು ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಮೂಡಿ ಬಂದಿದೆ ಎಂದರು.
ಡಾ.ಬಸವರಾಜ ಧಾರವಾಡ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಮೇಲೆ ಈ ಶಾಲೆಯಲ್ಲಿ ಹಲವಾರು ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಲಾಗಿದೆ. ಶೀಘ್ರದಲ್ಲಿಯೇ ಬೃಹತ್ ಕಾರ್ಯಕ್ರಮ ಆಯೋಜಿಸಿ ಪೂರ್ಣಗೊಂಡ ಎಲ್ಲ ಕಾಮಗಾರಿ ಲೋಕಾರ್ಪಣೆ ಗೊಳಿಸಲಾಗುವುದು ಎಂದರು.ಈ ವೇಳೆ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ ಪ್ರಭಾರಿ ಮುಖ್ಯೋಪಾಧ್ಯಾಯ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಅಮರೇಶ ಗಡಗಿ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಭುಲಿಂಗ ನೆಗಳೂರ, ಸುನೀಲ ವೆರ್ಣೆಕರ್, ಸಂತೋಷ ಪಾಟೀಲ, ಮಲ್ಲಪ್ಪ ಜಿನಗಿ, ಮೈಲಾರಪ್ಪ ಹುಯಿಲಗೋಳ, ಮಂಜುನಾಥ ಹುಡೇದ, ರೇಖಾ ಬಾವಿ, ಮಾರುತಿ ಚಲವಾದಿ, ರೇಣುಕಾ ರೋಣದ, ಶಿವಶಿಂಪರ, ಬಾಕಳೆ, ಶಿಕ್ಷಕರಾದ ಸುಭಾಸ ನಿಡಸನೂರ, ಎ.ಎಂ. ಸಂಗನಾಳ, ಶಂಕ್ರಮ್ಮ. ಆರ್.ಹನಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ.ಪಿ. ಸಾಮ್ರಾಣಿ, ಸುಮಂಗಲ.ಎಂ. ಪತ್ತಾರ, ಶಾರದಾ ಬಾಣದ, ಶೋಭಾ.ಎಸ್. ಗಾಳಿ, ರಮೇಶ ಬಸರಿ, ಸಾವಿತ್ರಿ.ಎ. ಗದ್ದನಕೇರಿ, ಎನ್.ಆರ್. ಶಿರೋಳ, ಸಬಿಯಾ ಕುಷ್ಟಗಿ, ಗಂಗಾ ಅಳವಂಡಿ, ಮಂಜುಳಾ.ಟಿ, ಪದ್ಮಾ ದಾಸರ, ಲಕ್ಷ್ಮಮ್ಮ ಮಾಳೋತ್ತರ ಸೇರಿದಂತೆ ಮುಂತಾದವರು ಇದ್ದರು. ಸಂಜೀವಿನಿ ಕೂಲಗುಡಿ ನಿರೂಪಿಸಿದರು. ಶಶಿಕಲಾ ಗುಳೇದ ವಂದಿಸಿದರು.