ಕುಡಿತದಿಂದ ಆಯುಷ್ಯ ಇಳಿಕೆ, ಘನತೆಗೆ ಕುಂದು: ಡಾ. ವೀರೇಂದ್ರ ಹೆಗ್ಗಡೆ

| Published : Oct 29 2024, 01:05 AM IST

ಕುಡಿತದಿಂದ ಆಯುಷ್ಯ ಇಳಿಕೆ, ಘನತೆಗೆ ಕುಂದು: ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಸನ ಎಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ, ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತದ ವ್ಯಸನದಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದರೊಂದಿಗೆ ಘನತೆ, ಗೌರವಕ್ಕೆ ಕುಂದು ಬರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಅವರು ಧರ್ಮಸ್ಥಳದಲ್ಲಿ 234ನೇ ವಿಶೇಷ ಮದ್ಯವರ್ಜನ ಶಿಬಿರದ 66 ಮಂದಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವ್ಯಸನ ಎಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ, ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತದ ವ್ಯಸನದಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದರೊಂದಿಗೆ ಘನತೆ, ಗೌರವಕ್ಕೆ ಕುಂದು ಬರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಅವರು ಧರ್ಮಸ್ಥಳದಲ್ಲಿ 234ನೇ ವಿಶೇಷ ಮದ್ಯವರ್ಜನ ಶಿಬಿರದ 66 ಮಂದಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿ ಅವರು ಮಾತನಾಡಿದರು.

ಮದ್ಯಪಾನ ಮಾಡುವುವರಿಗೆ ಎಲ್ಲರೂ ಸ್ನೇಹಿತರೇ. ಈ ವ್ಯಸನಕ್ಕೆ ಊರು, ಜಾತಿ, ಮತ ಭೇದವಿಲ್ಲ. ದುರಾದೃಷ್ಟವೆಂದರೆ ಯಾವುದೇ ಸಿನಿಮಾದಲ್ಲಿ ಸ್ನೇಹಿತರು ಸೇರಿದ ಕೂಡಲೇ ಮದ್ಯಪಾನ, ಧೂಮಪಾನ ಮುಂತಾದ ದೃಶ್ಯಗಳು ಇರುವುದು ಬೇಸರದ ವಿಷಯ ಎಂದರು.

ಕುಡಿತ ಬಿಟ್ಟು ಶುದ್ಧ ಆದ ಮೇಲೆ ಮತ್ತೆ ಮೈಲಿಗೆ ಆಗದ ಹಾಗೆ ನೋಡಿಕೊಳ್ಳಬೇಕು. ತಮ್ಮತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶ್ರಮವಹಿಸಿಕೊಂಡು ಜಾಗೂರುಕತೆಯಿಂದ ಜೀವನ ನಡೆಸಬೇಕು. ವ್ಯಸನಿಗಳ ಸಂಕಲ್ಪಕ್ಕೆ ಪ್ರೇರಣೆ ಕೊಡುವುದೇ ಈ ಮದ್ಯವರ್ಜನ ಶಿಬಿರದ ಉದ್ದೇಶ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ ಎಸ್.ಎಸ್. ಮಾತನಾಡಿ, ಪುರ್ನಜನ್ಮಕೊಡುವ ವ್ಯವಸ್ಥೆ ಈ ಮದ್ಯವರ್ಜನ ಶಿಬಿರ ಎಂದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯ್ಸ್‌ ಕುಟುಂಬ ದಿನ ಕಾರ್ಯಕ್ರಮ ನೇರವೇರಿಸಿದರು, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ ಸಹಕರಿಸಿದರು. ಮುಂದಿನ ವಿಶೇಷ ಶಿಬಿರ ನ.4 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.