ಸಾರಾಂಶ
ನ.5ರಂದು ಈ ಅಂಬೇಡ್ಕರ್ ಭವನದಲ್ಲಿ ಶಾಮರಾಜ್ ಬಿರ್ತಿಯವರು ತಮ್ಮ ಮಗ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ ಬಗ್ಗೆ ಅಭಿನಂದನ ಸಮಾರಂಭ ಹಮ್ಮಿಕೊಂಡಿದ್ದರು. ಸಮಾರಂಭದ ನಂತರ ಅದೇ ಭವನದಲ್ಲಿ ಮದ್ಯಪಾನ ಪಾರ್ಟಿ
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅಕ್ರಮವಾಗಿ ಮದ್ಯಪಾನ ಪಾರ್ಟಿ ನಡೆಸಿದ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.5ರಂದು ಈ ಅಂಬೇಡ್ಕರ್ ಭವನದಲ್ಲಿ ಶಾಮರಾಜ್ ಬಿರ್ತಿಯವರು ತಮ್ಮ ಮಗ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ ಬಗ್ಗೆ ಅಭಿನಂದನ ಸಮಾರಂಭ ಹಮ್ಮಿಕೊಂಡಿದ್ದರು. ಸಮಾರಂಭದ ನಂತರ ಅದೇ ಭವನದಲ್ಲಿ
ಶಾಮರಾಜ್ ಬಿರ್ತಿ, ಸುರೇಶ್, ಶಿವ, ಪ್ರಶಾಂತ್ ಮತ್ತು ಇತರರು ಮದ್ಯಪಾನ ಪಾರ್ಟಿ ನಡೆಸಿದ್ದಾರೆ. ಅವರು ಪಾರ್ಟಿ ನಡೆಸಲು ಪಂಚಾಯಿತಿ ಅಥವಾ ಸಂಬಂಧಪಟ್ಟ ಇಲಾಖೆಯಿದ ಅನುಮತಿ ಪಡೆಯದೆ ಭವನವನ್ನು ದುರುಪಯೊಗ ಪಡಿಸಿಕೊಂಡು ಕಾನೂನುಬಾಹಿರವಾಗಿ ಮದ್ಯಪಾನ ಪಾರ್ಟಿಯನ್ನು ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆರೋಪಿಗಳು ತಮಗೆ ಬೆದರಿಕೆ ಹಾಕಿ ಅವಾಚ್ಯ, ಶಬ್ದದಿಂದ ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))