ಕುಡಿಯುವ ನೀರು, ಚರ್ಮಗಂಟು ತಡೆಗೆ ಕ್ರಮ

| Published : Sep 19 2025, 01:00 AM IST

ಸಾರಾಂಶ

ಜಿಲ್ಲೆಯ ವಿವಿಧೆಡೆ ಕಂಡು ಬಂದಿರುವ ಕುಡಿಯುವ ನೀರು ಸಮಸ್ಯೆಗಳ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಹನೂರು ಭಾಗದ ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕಂಡು ಬಂದಿರುವ ಚರ್ಮಗಂಟು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಭರವಸೆ । ಬೋರ್‌ವೆಲ್‌ಗಳನ್ನು ದುರಸ್ತಿಪಡಿಸುವಂತೆ ಕಟ್ಟುನಿಟ್ಟಿನ ಸೂಚಿಸಲಾಗಿದೆಕನ್ನಡಪ್ರಭ ವಾರ್ತೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಕಂಡು ಬಂದಿರುವ ಕುಡಿಯುವ ನೀರು ಸಮಸ್ಯೆಗಳ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಹನೂರು ಭಾಗದ ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕಂಡು ಬಂದಿರುವ ಚರ್ಮಗಂಟು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆ ಅದರಲ್ಲೂ ಹನೂರು ಭಾಗದ ಕೆಲ ಗ್ರಾಮಗಳಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಬೋರ್‌ವೆಲ್‌ಗಳನ್ನು ಕೊರೆಯಿಸಿ ಸಮರ್ಪಕ ಕುಡಿಯುವ ನೀರು ತಲುಪಂತೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.ಜಿಲ್ಲಾ ಕೇಂದ್ರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು, ಮಾಲಂಗಿ ಯೋಜನೆ ಆಗುವವರೆಗೆ ತಾತ್ಕಾಲಿಕ ಬೋರ್‌ವೆಲ್ ಕೊರೆಯಿಸುವಂತೆ ಹಾಗೂ ಬೋರ್‌ವೆಲ್‌ಗಳನ್ನು ದುರಸ್ತಿಪಡಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.ನಗರಕ್ಕೆ ನೀರು ಪೂರೈಸುತ್ತಿರುವ ಟಿ. ನರಸೀಪುರದ ಬಳಿ ಇರುವ ನೀರೆತ್ತುವ ಮೋಟಾರ್ ಪದೇ ಪದೆ ಕೆಟ್ಟು ಸಮಸ್ಯೆ ತಲೆದೂರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಮೋಟಾರ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟರಿಗೆ ತಿಳಿಸಿದರು.ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿ ಬಗ್ಗೆ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಆನಂತರ ಪರಿಹಾರ ನೀಡಲು ಕ್ರಮ ಕ್ಯಗೊಳ್ಳಲಾವುದು ಎಂದರು.ಚರ್ಮಗಂಟು ತಡೆಗೆ ಅಗತ್ಯ ಕ್ರಮ:ಚರ್ಮಗಂಟು ರೋಗ ಬೀದರ್ ಮತ್ತು ಚಾಮರಾಜನಗರ ಜಿಲ್ಲೆಯ ಕುರಟ್ಟಹೊಸೂರಿನಲ್ಲಿ ಕಂಡು ಬಂದಿದ್ದು, ಮುಂಜಾಗ್ರತವಾಗಿ ತಡೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸೂಚಿಸಿದ್ದು, ರಾಜ್ಯ ಮಟ್ಟದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದರು.ಚರ್ಮಗಂಟು ರೋಗ ಅಂಟು ರೋಗವಾಗಿದೆ. ಆದ್ದರಿಂದ ಅದು ಹರಡಂತೆ ಚುಚ್ಚು ಮದ್ದು ಹಾಕಲಾಗಿದೆ, ಸತ್ತಿರುವ ಕರುಗಳಿಗೆ ತಲಾ ₹೧೫ ಸಾವಿರದಂತೆ ಪರಿಹಾರ ನೀಡಲಾಗುವುದು ಎಂದರು.ರೋಗದ ಬಗ್ಗೆ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕುರಟ್ಟಿ ಹೊಸೂರು ಗ್ರಾಮದ ಸುಮಾರು ೧೪ ಜಾನುವಾರುಗಳಲ್ಲಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿದ್ದು, ಇದುವರೆಗೂ ೬ ಕರುಗಳು ಮೃತಪಟ್ಟಿವೆ. ಉಳಿದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೋಗೋದ್ರೇಕದ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಚರ್ಮಗಂಟು ರೋಗದ ಪ್ರತಿಬಂಧಕ ಲಸಿಕೆಯನ್ನು ಕುರಟ್ಟಿ ಹೊಸೂರು ಗ್ರಾಮದ ೮೭೦ ಜಾನುವಾರುಗಳಿಗೆ ಹಾಕಲಾಗಿದೆ. ಕುರಟ್ಟಿ ಹೊಸೂರಿನ ಸುತ್ತಮುತ್ತಲ ೧೦ ಕಿ.ಮೀ ವ್ಯಾಪ್ತಿಯ ದಂಟಳ್ಳಿ, ಶೆಟ್ಟಹಳ್ಳಿ, ಚೆನ್ನೂರು, ಭದ್ರಯ್ಯನಹಳ್ಳಿ, ಎ.ಹೊಸಹಳ್ಳಿ, ಅರಬಗೆರೆ, ಎಲ್.ಪಿ.ಎಸ್ ಕ್ಯಾಂಪ್, ಮುನಿಶೆಟ್ಟಿದೊಡ್ಡಿ, ವಿ.ಎಸ್.ದೊಡ್ಡಿ ಗ್ರಾಮದ ಒಟ್ಟು ೩೭೯೯ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಲಾಗಿದೆ ಎಂದರು.ಮಹದೇಶ್ವರ ಹುಲಿ ಸಂರಕ್ಷಣೆಯ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ. ಆರ್. ಮಂಜುನಾಥ್ ಇದ್ದರು.೧೮ಸಿಎಚ್‌ಎನ್೧

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ. ಆರ್. ಮಂಜುನಾಥ್ ಇದ್ದಾರೆ.