ಮಹಾಲಿಂಗಪುರದಲ್ಲಿ ಶುಭ ಕಾರ್ಯಗಳಿಗೆ ಚಾಲನೆ

| Published : May 04 2024, 12:30 AM IST

ಸಾರಾಂಶ

ಕಂಬಿ ಮಲ್ಲಯ್ಯ ಪುರಪ್ರವೇಶ ಮಾಡಿದ ಮಲ್ಲಯ್ಯನ ಕಂಬಿಯನ್ನು ಗುರುವಾರ ಐದೇಶಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕಂಬಿ ಮಲ್ಲಯ್ಯ ಪುರಪ್ರವೇಶ ಮಾಡಿದ ಮಲ್ಲಯ್ಯನ ಕಂಬಿಯನ್ನು ಗುರುವಾರ ಐದೇಶಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು. ಮಹಾಲಿಂಗೇಶ್ವರ ದೇವಸ್ಥಾನದ ಗರ್ಭ ಗುಡಿಯ ಮುಂಭಾಗದಲ್ಲಿಟ್ಟು ಸಂಜೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ಬೆಲ್ಲ ಹಂಚುವ ಕಾರ್ಯಕ್ಕೆ ಚಾಲನೆ ನೀಡಿದರು.

ಪುರದ ಸುತ್ತ ಮುತ್ತಲಿನ ಹಳ್ಳಿಗಳ ಸಹಸ್ರಾರ ಭಕ್ತರು ಹೂವುಗಳಿಂದ ಅಲಂಕರಿಸಿದ ಮಲ್ಲಯ್ಯನ ದರ್ಶನ ಪಡೆದು ಬೆಲ್ಲ ಹಂಚಿ, ಕಾಯಿ ಕರ್ಪೂರ ಅರ್ಪಿಸಿದರು.

ಪಾದಯಾತ್ರೆ ಮುಗಿಸಿಕೊಂಡು ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು ವಸ್ತ್ರಗಳ (ಬಟ್ಟೆಗಳನ್ನು )ಕಾಣಿಕೆ ನೀಡಿದರು.

ಮಲ್ಲಯ್ಯನನ್ನು ಶ್ರೀಶೈಲಕ್ಕೆ ಬೀಳ್ಕೊಡುವಾಗ ಮತ್ತು ಮರಳಿ ಬಂದಾಗ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅದ್ದೂರಿ ಸ್ವಾಗತ, ಐದೇಶಿ, ಸಮಾರೋಪ ಸೇರಿದಂತೆ ಎಲ್ಲ ಆಚರಣೆಗಳಲ್ಲಿ ಹಿಂದು- ಮುಸ್ಲಿಮರು ಸೇರಿ ಎಲ್ಲ ಸಮುದಾಯದವರು ಭಾಗವಹಿಸಿ ಭಾವೈಕ್ಯತೆಗೆ ಸಾಕ್ಷಿಯಾದರು.

ಮಲ್ಲಯ್ಯನ ಕಂಬಿ ಪುರಪ್ರವೇಶದ ನಂತರ ಬರುವ ಗುರುವಾರ ಐದೇಶಿ ಆಚರಿಸಲಾಗುತ್ತದೆ. ಈ ಒಂದೂವರೆ ತಿಂಗಳು ಗ್ರಾಮದಲ್ಲಿ ಹೊಸ ವಸ್ತು ಖರೀದಿಯಿಂದ ಹಿಡಿದು ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಮಲ್ಲಯ್ಯನ ಕಂಬಿ ಪುರಪ್ರವೇಶದ ಬಳಿಕ ಎಲ್ಲ ಶುಭ ಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಐದೇಶಿ ಇಡೀ ರಾತ್ರಿ ನಗರದಲ್ಲಿ ಬೈಲಾಟ ಅನೇಕ ಕಾರ್ಯಕ್ರಮ ಜರುಗಿದವು

ಈ ಸಂಧರ್ಭದಲ್ಲಿ ಕೃಷ್ಣಗೌಡ ಪಾಟೀಲ, ಯಲ್ಲಪ್ಪ ಹಟ್ಟಿ, ವಿಜಯ ಕುಳ್ಳೊಳ್ಳಿ, ಶುಭಾಸ ವಜ್ಜರಮಟ್ಟಿ, ಈಶ್ವರ ಮಠದ, ಮಹಾಂತೇಶ ಹಳ್ಳಿ, ಬ್ರಹ್ಮ ಕೋಟಿ, ಅಜರ್ುನ್ ಕೋತ, ಪ್ರಮೋದ ಬಾಳಿಕಾಯಿ, ಕೆದಾರಿ ಬಾಳಿಕಾಯಿ, ಸೇರಿ ಹಲವರು ಇದ್ದರು.