ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳುವುದು. ಸಮಾಜದಲ್ಲಿ ಸನ್ಮಾರ್ಗ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಜಾಗೃತಗೊಳಿಸಲು ಒಂದು ಅತ್ಯಂತ ಪರಿಣಾಮಕಾರಿ ಮತ್ತು ಪವಿತ್ರವಾದ ಮಾರ್ಗವಾಗಿದೆ ಎಂದು ಶ್ರೀಮದ್ ರಂಭಾಪುರಿ ವೀರಾಸಿಂಹಾಸ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳುವುದು. ಸಮಾಜದಲ್ಲಿ ಸನ್ಮಾರ್ಗ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಜಾಗೃತಗೊಳಿಸಲು ಒಂದು ಅತ್ಯಂತ ಪರಿಣಾಮಕಾರಿ ಮತ್ತು ಪವಿತ್ರವಾದ ಮಾರ್ಗವಾಗಿದೆ ಎಂದು ಶ್ರೀಮದ್ ರಂಭಾಪುರಿ ವೀರಾಸಿಂಹಾಸ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಪುಣ್ಯತಪೋಕ್ಷೇತ್ರ ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರೀ ಮಠದ ವತಿಯಿಂದ ನಡೆಯುವ 5ನೇ ವರ್ಷದ ಜಂಗಮ ಗಣಾರಾಧನೆಯ ಮಹಾಮಂಗಲ ಹಾಗೂ ಶ್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಮುಡಿ ಸಮರ್ಪಣೆ ಕಾರ್ಯಕ್ರಮದ ನಿಮಿತ್ತ ಅಕ್ಟೋಬರ್ 29 ರಿಂದ ನವೆಂಬರ್ 3ರ ವರೆಗೂ ಕಾರ್ಜುವಳ್ಳಿ ಶ್ರೀಮಠದಿಂದ ಬುಕ್ಕಾಂಬುಧಿ ಬೆಟ್ಟಕ್ಕೆ ಸುಮಾರು 130 ಕಿ.ಮೀ. ಜರುಗುವ ಪಾದಯಾತ್ರೆ ಚಾಲನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದಿನ ಯುವ ಪೀಳಿಗೆಯಲ್ಲಿ ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಿತ್ತುವುದು. ಸಾಮಾಜಿಕ ಸಾಮರಸ್ಯ ಜಾತಿ-ಭೇದ ಮರೆತು ಎಲ್ಲರನ್ನೂ ಧರ್ಮದ ಹೆಸರಿನಲ್ಲಿ ಒಂದುಗೂಡಿಸುವುದು. ಸನಾತನ ಸಂಸ್ಕೃತಿಯ ಅರಿವು, ದಿನನಿತ್ಯದ ಜೀವನದಲ್ಲಿ ಧರ್ಮದ ಆಚರಣೆ ಮತ್ತು ಅದರ ಮಹತ್ವವನ್ನು ತಿಳಿಸಿಕೊಡುವುದು ಈ ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಠ-ಮಾನ್ಯಗಳಿಂದ ಹಿಂದೂ ಧರ್ಮ ನಿಜಕ್ಕೂ ದಿನೇ ದಿನೇ ಗಟ್ಟಿಯಾಗುತ್ತಿದೆ. ಇಂತಹ ಧಾರ್ಮಿಕ ಆಚರಣೆಗಳು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ಜಾಗೃತಿ ಕಾರ್ಯಗಳಿಂದ ಹಿಂದೂ ಧರ್ಮ ಮತ್ತು ಸನಾತನ ಧರ್ಮ ಮತ್ತಷ್ಟು ಗಟ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಕಾರ್ಜುವಳ್ಳಿ ಶ್ರೀಗಳು ಧರ್ಮ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಬಾಳೆಹೊನ್ನೂರು ರಂಭಾಪುರಿ ಪೀಠವು ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ಹಾಗೂ ಧಾರ್ಮಿಕ ಆಚರಣೆಗಳು ಸಹಕಾರಿಯಾಗಿದೆ ಅದರ ಶಾಖಾ ಮಠದವಾದ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಮಠದ ಗುರುಗಳಾದ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಮಠದ ಘನತೆಯನ್ನು ಎತ್ತಿಹಿಡಿಯವ ಕಾರ್ಯ ಮಾಡಿದ್ದಾರೆ. ಶ್ರೀಗಳು ಮಠದ ಪೀಠಾಧಿಕಾರಿಗಳಾದ ನಂತರ ಮಠವನ್ನು ಅತ್ಯುತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ‌ ಹೊಂದಿದ್ದಾರೆ ಅವರಿಗೆ ಸಹಕಾರ ನೀಡುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ ಎಂದು ತಿಳಿಸಿದರು.ಪಾದಯಾತ್ರೆ ಸಾಗುವ ಮಾರ್ಗ:

ಅ.29ರ ಗುರುವಾರ ಶ್ರೀಮಠ-ಕಾರ್ಜುವಳ್ಳಿ ಕೂಡಿಗೆಯಿಂದ ಮದಘಟ್ಟ-ತಗರೆ-ಬೇಲೂರು‌ ಮಾರ್ಗವಾಗಿ ಹೆಬ್ಬಾಳು ಗ್ರಾಮ ತಲುಪಿ ಅಲ್ಲಿ ವಾಸ್ತವ್ಯ ಉಡುವಲಾಗುವುದು. ಅ.30 ರ ಶುಕ್ರವಾರ ಹೆಬ್ಬಾಳು ಗ್ರಾಮದಿಂದ ಹಳೇಬೀಡು-ಕೆ ಬಿ ಹಾಳ್-ಜಾವಗಲ್-ನೇರ್ಲಿಗೆ ಮಾರ್ಗವಾಗಿ ನಿಡಘಟ್ಟ ತಲುಪಿ ರಾತ್ರಿಯಲ್ಲಿ ವಾಸ್ತವ್ಯ ಉಡಲಾಗುವುದು. ಅ.31ರ ಶನಿವಾರ ಬೆಳಗ್ಗೆ ಹೋಚಿಹಳ್ಳಿ ಸರ್ಕಲ್ ನಿಂದ ಎಲ್ ನಗರ-ಕಡೂರು ಮಾರ್ಗವಾಗಿ ಬೀರೂರು ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಉಡಲಾಗುವುದು. ನ.1ರ ರವಿವಾರ ಚಾಪುರ-ಅಜ್ಜಂಪುರ ಹೀರೆಕಾನಂಗಲ ಮಾರ್ಗವಾಗಿ ಬುಕ್ಕಾಂಬುಧಿ ಬೆಟ್ಟ ತಲುಪಿ ರಾತ್ರಿ ತಪೋಕ್ಷೇತ್ರ ಬುಕ್ಕಾಂಬುಧಿಯಲ್ಲಿ ವಾಸ್ತವ್ಯ ಉಡಲಾಗುವುದು ಎಂದು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಹಾರನಹಳ್ಳಿ ಮಠದ ಶಿವ ಯೋಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರೆಕೆರೆ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಶ್ರೀ ಮಠದ ಆಡಳಿತಾಧಿಕಾರಿ ಎಸ್. ಎಸ್ ಶಿವಮೂರ್ತಿ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಸಹಕಾರ್ಯದರ್ಶಿ ಡಾ. ಜಯರಾಜ್, ಖಜಾಂಚಿ ಟೀಕ್ ರಾಜ್, ಅಖಿಲ ಭಾರತ ವೀರಶೈವ ಮಹಾ ಘಟಕದ ಹಾಸನ ಜಿಲ್ಲಾಧ್ಯಕ್ಷ ಪುನೀತ್ ಪಟೇಲ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶೀಧರ, ಜೆಡಿಎಸ್ ಹಾಸನ ಜಿಲ್ಲಾಧ್ಯಕ್ಷ ನಟರಾಜ್ ಐಸಾಮಿಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸ್ವಾಮಿ ಸೇರಿದಂತೆ ಮುಂತಾದವರು ಹಾಜರಿದ್ದರು.ಪೋಟೋ ಕ್ಯಾಪ್ಶನ್: ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಹಿರೇಮಠದಲ್ಲಿಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಪುಣ್ಯತಪೋಕ್ಷೇತ್ರ ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರೀ ಮಠದ ವತಿಯಿಂದ ನಡೆಯುವ 5 ನೇ ವರ್ಷದ ಜಂಗಮ ಗಣಾರಾಧನೆಯ ಮಹಾಮಂಗಲ ಹಾಗೂಶ್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಮುಡಿ ಸಮರ್ಪಣೆ ಕಾರ್ಯಕ್ರಮದ ನಿಮಿತ್ಯ ಅಕ್ಟೋಬರ್ 29 ರಿಂದ ನವೆಂಬರ್ 3ರ ವರೆಗೂ ಕಾರ್ಜುವಳ್ಳಿ ಶ್ರೀಮಠದಿಂದ ಬುಕ್ಕಾಂಬುಧಿ ಬೆಟ್ಟಕ್ಕೆ ಸುಮಾರು 130 ಕಿ.ಮೀ. ಜರುಗುವ ಪಾದಯಾತ್ರೆ ಚಾಲನಾ ಸಮಾರಂಭಕ್ಕೆ ಗಣ್ಯರಿಂದ ಚಾಲನೆ ನೀಡುತ್ತಿರುವುದು. ‌