ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸರ್ಕಾರಗಳು ರೈತ ಪರ ಹಾಗು ಕನ್ನಡ ಪರವಾಗಿ ನಿಲ್ಲುವುದು ಕಷ್ಟವಾಗುತ್ತಿದ್ದು,ಇಂಥ ಸಂದರ್ಭಗಳಲ್ಲಿ ಹೋರಾಟ ಅನಿವಾರ್ಯ ಎಂದು ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸರ್ಕಾರಗಳು ರೈತ ಪರ ಹಾಗು ಕನ್ನಡ ಪರವಾಗಿ ನಿಲ್ಲುವುದು ಕಷ್ಟವಾಗುತ್ತಿದ್ದು,ಇಂಥ ಸಂದರ್ಭಗಳಲ್ಲಿ ಹೋರಾಟ ಅನಿವಾರ್ಯ ಎಂದು ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ನಗರದ ನ್ಯಾಯಾಲಯ ರಸ್ತೆಯಲ್ಲಿ ಗಡಿನಾಡು ಕನ್ನಡ ರಕ್ಷಣಾ ವೇದಿಕೆಯಿಂದ ನಡೆದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪರ ಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ಕರ್ನಾಟಕದ ಸಂಪತ್ತು ಅನ್ಯ ರಾಜ್ಯದವರ ಪಾಲಾಗುತ್ತಿದೆ. ಕಾವೇರಿ ನೀರು ನಮ್ಮ ದೊರೆಯಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ರಾಜ್ಯದಲ್ಲಿರುವ ಕಲ್ಲು, ಮಣ್ಣು, ಮರಳು ಹೊರರಾಜ್ಯಕ್ಕೆ ರಾಜಾರೋಷವಾಗಿ ಹೋಗುತ್ತದೆ. ಇವೆಲ್ಲರು ಕನ್ನಡಿಗರ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಕನ್ನಡ ಸಂಘಡನೆಗಳು ಹಾಗೂ ರೈತರು ಸಂಘಟನೆಗಳು ಹೋರಾಟದ ಮೂಲಕ ಪರಿಹಾರವನ್ನು ಕಂಡು ಕೊಳ್ಳಬೇಕಾಗಿದೆ. ಹೀಗಾಗಿ ರೈತರ ಹೋರಾಟಗಳಲ್ಲಿ ಕನ್ನಡ ಸಂಘಟನಗಳು ಭಾಗವಹಿಸುವಂತಾಗಬೇಕು. ಕನ್ನಡಕ್ಕೆ ಧಕ್ಕೆಯಾದಾಗ ರೈತರು ಸಹ ಹೋರಾಟಕ್ಕೆ ಮುಂದಾಗ ಮಾತ್ರ ಕನ್ನಡ ನಾಡು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯಾವುದೇ ಭಾಗದಲ್ಲಿ ಕನ್ನಡಕ್ಕೆ ಧಕ್ಕೆಯಾಧಾಗ ಮೊದಲು ಹೋರಾಟದ ಕಿಚ್ಚು ಚಾ.ನಗರದಿಂದ ಆರಂಭವಾಗುತ್ತದೆ. ಕನ್ನಡ ಪ್ರೇಮ ಗಡಿ ಭಾಗದ ಚಾ.ನಗರದಲ್ಲಿ ಹೆಚ್ಚಾಗಿದೆ. ಗಡಿನಾಡು ಕನ್ನಡ ರಕ್ಷಣಾ ವೇದಿಕೆಯು ಕನ್ನಡ ರಾಜ್ಯೋತ್ಸವ ಆಚರಣೆಯ ಜೊತೆಗೆ ನಾಡು ನುಡಿ, ಜಲ ಉಳಿವಿಗಾಗಿ ಹೋರಾಟ ಮಾಡಲಿ ಕನ್ನಡ ನಾಡು ಬೆಳವಣಿಗೆಯಲ್ಲಿ ಮಹತ್ವರ ಪಾತ್ರವನ್ನು ವಹಿಸಲಿ ಎಂದು ಶುಭ ಹಾರೈಸಿದರು.ಮುಖಂಡ ಶಿವಲಿಂಗಮೂರ್ತಿ ಮಾತನಾಡಿ, ಕನ್ನಡ ರಾಜ್ಯೋತ್ಸವನ್ನು ಎಲ್ಲಾ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡುವುದು ಕಡ್ಡಾಯವಾಗಿದೆ. ಭಾನುವಾರವಾದ ಕಾರಣದಿಂದ ಅನೇಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಡೆದಿಲ್ಲ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಂ.ರಾಮಚಂದ್ರ, ಶ್ರೀನಿಧಿಕುದರ್, ನಿಜಧ್ವನಿ ಗೋವಿಂದರಾಜು, ಪ್ರಾಂಶುಪಾಲ ರಂಗಸ್ವಾಮಿ, ಶಿವು ಜನಸ್ನೇಹಿ ಆಶ್ರಮ, ಬಸವರಾಜು, ಪ್ರಸನ್ನಕುಮಾರ್, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗೇಸ್, ಉಪಾಧ್ಯಕ್ಷ ಡಿ. ಕಾರ್ತಿಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಘ್ನೇಶ್, ಗೌರವ ಅಧ್ಯಕ್ಷ ಚಾ.ಸಿ. ಸಿದ್ದರಾಜು, ಖಜಾಂಚಿ ಗಣೇಶ್, ನಿರ್ದೇಶಕರು, ಸದಸ್ಯರು ಹಾಜರಿದ್ದರು.