ಸಾರಾಂಶ
ಶ್ರೀರಂಗಪಟ್ಟಣ ದಸರಾ- ೨೦೨೪ ರ ಅಂಗವಾಗಿ ಬೆಟ್ಟ ಹತ್ತುವ ಸ್ಪರ್ಧೆ (ಚಾರಣ) ಗೆ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರು ಶನಿವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ದಸರಾ- ೨೦೨೪ ರ ಅಂಗವಾಗಿ ಬೆಟ್ಟ ಹತ್ತುವ ಸ್ಪರ್ಧೆ (ಚಾರಣ) ಗೆ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರು ಶನಿವಾರ ಚಾಲನೆ ನೀಡಿದರು.ಸ್ಪರ್ಧೆ ಕರಿಫಟ್ಟ ಪಾದದಿಂದ ದೇವಸ್ಥಾನದವರೆಗೆ ನಡೆಯಿತು, ಸ್ಪರ್ಧೆಯಲ್ಲಿ ೨೯ ವರ್ಷದೊಳಗಿನ ಯುವಕ, ಯುವತಿಯರು ಹಾಗೂ ೩೦ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಸೇರಿದಂತೆ ಸುಮಾರು ೨೦೦ ಜನರು ಭಾಗವಹಿಸಿದ್ದರು.
ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಶಿವಮೂರ್ತಿ ಅವರು, ವಾತಾವರಣ ತುಂಬಾ ಚೆನ್ನಾಗಿದೆ. ಸ್ವಲ್ಪ ಮಟ್ಟಿಗೆ ಮಳೆ ಆಗಿರುವುದರಿಂದ ಬೆಟ್ಟ ಹತ್ತುವ ಸಂದರ್ಭದಲ್ಲಿ ಜಾರುವ ಸಾಧ್ಯತೆ ಇದೆ. ಆದ್ದರಿಂದ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಜಾಗರೂಕವಾಗಿ ಬೆಟ್ಟ ಹತ್ತುವಂತೆ ಸಲಹೆ ನೀಡಿದರು.ವಿಜೇತರಾದವರ ಪಟ್ಟಿ : ವಿಜೇತರಿಗೆ ನಗದು ಬಹುಮಾನ ಪ್ರಥಮ-೧೫೦೦, ದ್ವಿತೀಯ-೧೦೦೦, ತೃತೀಯ-೫೦೦ ಹಾಗೂ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು. ೩೦ ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಪ್ರಥಮ-ಎಸ್.ಜಿ. ವಿಜಯ, ದ್ವಿತೀಯ-ಶಾಂತ ಕುಮಾರಿ, ತೃತೀಯ ಎನ್.ಆರ್.ಶೋಭಾ, ಪುರುಷರಲ್ಲಿ ಪ್ರಥಮ - ಟಿ.ಸಿ.ನವೀನ, ದ್ವಿತೀಯ -ಎಸ್.ಡಿ.ಅಭಿಷೇಕ್, ತೃತೀಯ-ಪಿ.ಹರೀಶ್ ವಿಜೇತರು.
೨೯ವರ್ಷ ಒಳಪಟ್ಟ ಮಹಿಳೆಯರಲ್ಲಿ ಪ್ರಥಮ- ಎಸ್.ಜಯಶ್ರೀ, ದ್ವಿತೀಯ- ಎಸ್.ಆರ್.ಮಾನಸ, ತೃತೀಯ-ದಿವ್ಯ, ಪುರುಷರಲ್ಲಿ ಪ್ರಥಮ- ಮಣಿಕಂಠ, ದ್ವಿತೀಯ-ಭರತ್, ತೃತೀಯ ವೈಶಾಕ್ ವಿಜಯಶಾಲಿಗಳುಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ವೈದಾಧಿಕಾರಿ ಡಾ. ಬಿ.ಎನ್ ಸೀತಾಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಶ್ರೀರಂಗಪಟ್ಟಣ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ನಾಗಮಂಗಲ ತಾಲೂಕಿನ ತಹಸೀಲ್ದಾರ್ ಆದರ್ಶ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಇತರರಿದ್ದರು.