ದಾಬಸ್‌ಪೇಟೆಯ ಸಿರಿಸೆಲೆ ರೈತ ಉತ್ಪಾದಕ ಕಂಪನಿಗೆ ಚಾಲನೆ

| Published : Aug 11 2024, 01:33 AM IST

ದಾಬಸ್‌ಪೇಟೆಯ ಸಿರಿಸೆಲೆ ರೈತ ಉತ್ಪಾದಕ ಕಂಪನಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ಹಾಗೂ ಅತಿ ಸಣ್ಣ ರೈತರು ಎದುರಿಸುವ ಅನೇಕ ಸವಾಲುಗಳಿಗೆ ಪರಿಹಾರ ನೀಡುವ ಶಕ್ತಿ ರೈತ ಉತ್ಪಾದಕ ಕಂಪನಿಗಳಿಗಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿರಿಸೆಲೆ ರೈತ ಉತ್ಪಾದಕ ಕಂಪನಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದರು. ದಾಬಸ್‌ಪೇಟೆಯಲ್ಲಿ ಸಿರಿಸೆಲೆ ರೈತ ಉತ್ಪಾದಕ ಕಂಪನಿ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.

ದಾಬಸ್‌ಪೇಟೆ: ಸಣ್ಣ ಹಾಗೂ ಅತಿ ಸಣ್ಣ ರೈತರು ಎದುರಿಸುವ ಅನೇಕ ಸವಾಲುಗಳಿಗೆ ಪರಿಹಾರ ನೀಡುವ ಶಕ್ತಿ ರೈತ ಉತ್ಪಾದಕ ಕಂಪನಿಗಳಿಗಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿರಿಸೆಲೆ ರೈತ ಉತ್ಪಾದಕ ಕಂಪನಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದರು.

ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಅನಿಕೇತನ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ಸಿರಿಸೆಲೆ ರೈತ ಉತ್ಪಾದಕ ಕಂಪನಿ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರೈತರು ವ್ಯವಸಾಯದಲ್ಲಿ ನಷ್ಟದ ಕಡೆ ಪಯಣ ಮಾಡುವುದೇ ಹೆಚ್ಚಾಗಿದೆ. ಆದ್ದರಿಂದ ಬಿತ್ತನೆಯಿಂದ ಮಾರುಕಟ್ಟೆವರೆಗೂ ರೈತರ ಜತೆ ಇದ್ದು, ಅವರಿಗೆ ಲಾಭ ದೊರೆಯುವ ಕೃಷಿಯ ಸಲಹೆಗಳನ್ನು ನೀಡಲು ರೈತ ಉತ್ಪಾದಕ ಕಂಪನಿಗಳು ಸಹಾಯ ಮಾಡಲಿವೆ. ರೈತರು ರೈತ ಉತ್ಪಾದಕ ಕಂಪನಿಗಳನ್ನು ಸದ್ಬಳಕೆ ಮಾಡಿಕೊಂಡು ಲಾಭ ಪಡೆಯಬಹುದು. ಸರ್ಕಾರದ ಎಲ್ಲಾ ಯೋಜನೆಗಳನ್ನು ರೈತರಿಗೆ ನೇರವಾಗಿ ಸಿಗುವಂತೆ ಮಾಡಲಾಗುವುದು ಎಂದರು.

ಸಿರಿಸೆಲೆ ರೈತ ಉತ್ಪಾದಕ ಕಂಪನಿ ನಿರ್ದೇಶಕ ಅನ್ನದಾನಯ್ಯ ಮಾತನಾಡಿ, ರೈತ ಉತ್ಪಾದಕ ಕಂಪನಿಯ ಅನಿವಾರ್ಯತೆ ರೈತರಿಗೆ ಬಹಳಷ್ಟು ಇದೆ, ನಾವು ರೈತರಾಗಿ ರೈತರ ಸಂಕಷ್ಟಗಳನ್ನು ತಿಳಿದಿದ್ದೇವೆ. ಆದ್ದರಿಂದ ರೈತ ಉತ್ಪಾದಕ ಕಂಪನಿ ಆರಂಭಿಸಿದ್ದು, ರೈತರಿಗೆ ಸಂಕಷ್ಟ ಬರದಂತೆ ಕೃಷಿಯಲ್ಲಿ ಮುಂದುವರೆಸುವ ಸಣ್ಣ ಪ್ರಯತ್ನ ಎಂದರು.

ನೂತನ ನಿರ್ದೇಶಕರಿಗೆ ಅಭಿನಂದನೆ: ಸಿರಿಸೆಲೆ ರೈತ ಉತ್ಪಾದಕ ಕಂಪನಿಯ ನೂತನ ನಿರ್ದೇಶಕರಾದ ಚನ್ನಮಾರೇಗೌಡ (ಸಿ.ಎಂ.ಗೌಡ), ಸೋಮೇಶ್, ಚಿಕ್ಕಣ್ಣ, ಅನ್ನದಾನಯ್ಯ, ಚಿಕ್ಕಮಾರನಹಳ್ಳಿ ಮಂಜುನಾಥಯ್ಯ, ರಂಗಮ್ಮ, ವೆಂಕಟೇಗೌಡ, ಹುಚ್ಚ ಹನುಮೇಗೌಡ, ಸದಾನಂದಯಾದವ್, ಉಮೇಶ್, ಚನ್ನಮಾರೇಗೌಡ, ಕುಮಾರ್ರವರಿಗೆ ಸಂಸ್ಥೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ಕೃಷಿ ಉತ್ಪನ್ನಗಳಿಗೆ ವಿವಿಧ ಯೋಜನೆಗಳ ಅನುಷ್ಠಾನ: ಕೃಷಿ ಇಲಾಖೆ ಜಂಟಿ ನಿರ್ದೇಶಕ

ಕನ್ನಡಪ್ರಭ ವಾರ್ತೆ ರಾಮನಗರಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಕಟಾವಿನ ನಂತರ ಮಳೆ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಸಂಸ್ಕರಣೆಗೆ ಒಳಪಡಿಸಿ, ರೈತರ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಉದ್ದೇಶದಿಂದ ಕೃಷಿ ಸಂಸ್ಕರಣಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ಯೋಜನೆಯಡಿ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಾದ ರಾಗಿ ಕ್ಲೀನಿಂಗ್ ಮಿಷನ್, ಪ್ಲೋರ್ ಮಿಲ್, ಪಲ್ವಾ ರೈಸರ್, ತೊಗರಿ ಬೇಳೆ ಮಾಡುವ ಯಂತ್ರ, ರಾಗಿ ಪಾಲಿಶಿಂಗ್ ಮಿಷನ್, ಶುಗರ್ ಕೇನ್ ಜ್ಯೂಸ್ ಮೇಕಿಂಗ್ ಮಿಷನ್ ಹಾಗೂ ಸಣ್ಣ ಯಂತ್ರಚಾಲಿತ ಎಣ್ಣೆಗಾಣಗಳನ್ನು ಅನುಮೋದನೆಗೊಂಡ ಸಂಸ್ಥೆಗಳಡಿ ಸಾಮಾನ್ಯ ವರ್ಗಕ್ಕೆ ಶೇ.50 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ಜೇಷ್ಠತೆ ಹಾಗೂ ಸಹಾಯಧನದ ಲಭ್ಯತೆ ಮೇರೆ ವಿತರಿಸಲಾಗುತ್ತಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ): ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ.90ರ ಸಹಾಯಧನದಲ್ಲಿ ಅನುಮೋದಿತ ಸಂಸ್ಥೆಗಳ ತುಂತುರು ನೀರಾವರಿ ಘಟಕಗಳನ್ನು ವಿತರಣೆ ಮಾಡಲಾಗುವುದು. ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ತೆಗೆದು ಜಲಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಂತೆ, ಯೋಜನೆಯನ್ನು ಪ್ಯಾಕೇಜ್ ರೂಪದಲ್ಲಿ ಪ್ಯಾಕೇಜ್‌ನ ಘಟಕಗಳಾದ ಕಂದಕಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕೃಷಿ ಹೊಂಡಕ್ಕೆ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣ, ಹೊಂಡದಿಂದ ನೀರೆತ್ತಲೂ ಡೀಸೆಲ್/ಪೆಟ್ರೋಲ್ ಪಂಪ್‌ಸೆಟ್, ನೀರನ್ನು ಬೆಳೆಗೆ ಹಾಯಿಸಲು ತುಂತುರು ನೀರಾವರಿ ಘಟಕಗಳನ್ನು ಘಟಕವಾರು ನಿಗದಿ ಪಡಿಸಲಾದ ಸಹಾಯಧನದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.ಕೃಷಿ ಹೊಂಡ ಮತ್ತು ಪಾಲಿಥೀನ್ ಹೊದಿಕೆ ಘಟಕದಡಿ ಸಾಮಾನ್ಯ ವರ್ಗಕ್ಕೆ ಶೇ. 80 ಹಾಗೂ ಪ.ಜಾತಿ/ಪ.ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಯೋಜನೆಯಡಿ ಭಾಗವಹಿಸಿದ ರೈತರು ಕಡ್ಡಾಯವಾಗಿ ಪ್ಯಾಕೇಜ್‌ನ ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ. ಈ ಎಲ್ಲಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ರೈತರು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯ ಜೊತೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವಂತೆ ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಯಾಂತ್ರೀಕರಣ ಯೋಜನೆ: ಕೃಷಿಯಲ್ಲಿ ಕೃಷಿ ಕಾರ್ಮಿಕರ ಕೊರತೆ ನೀಗಿಸಿ ಉತ್ಪಾದನಾ ವೆಚ್ಚ ತಗ್ಗಿಸಿ ರೈತರಿಗೆ ಆರ್ಥಿಕ ಲಾಭ ಪಡೆಯಲು ಕೃಷಿ ಯಾಂತ್ರೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಆಧುನಿಕ ಕೃಷಿ ಯಂತ್ರೋಪಕರಣಗಳಾದ ಭೂಮಿ ಸಿದ್ಧತೆ ಉಪಕರಣಗಳು, ನಾಟಿ/ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಕೊಯ್ಲು ಮತ್ತು ಒಕ್ಕಣೆ ಮಾಡುವ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಡೀಸೆಲ್ ಪಂಪ್ ಸೆಟ್‌ಗಳನ್ನು ಅನುಮೋದನೆಗೊಂಡ ಸಂಸ್ಥೆಗಳ ಮುಖಾಂತರ ಸಾಮಾನ್ಯ ವರ್ಗಕ್ಕೆ ಶೇ.50, ಪರಿಶಿಷ್ಟ/ಪ.ಪಂಗಡದ ರೈತರಿಗೆ ಶೇ. 90ರ ಸಹಾಯಧನದಲ್ಲಿ ಅರ್ಜಿ ಸಲ್ಲಿಸಿದ ರೈತರ ಜೇಷ್ಠತೆ ಹಾಗೂ ಸಹಾಯಧನದ ಲಭ್ಯತೆ ಆಧಾರದ ಮೇರೆಗೆ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.