ಅಳಿವಿನ ಅಂಚಿನಲ್ಲಿರುವ ಶ್ರೀರಂಗಪಟ್ಟಣದ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಐತಿಹಾಸಿಕ ಕುರುಹುಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು.
ಶ್ರೀರಂಗಪಟ್ಟಣ:
ಪಟ್ಟಣದ ರೋಟರಿ ಕ್ಲಬ್, ಭುವನೇಶ್ವರಿ ಕ್ಲಬ್ ಬೆಂಗಳೂರು ಮತ್ತು ಮೈಸೂರು ಅಂಬಾರಿ ಕ್ಲಬ್ ಆಶ್ರಯದಲ್ಲಿ ಶ್ರೀರಂಗಪಟ್ಟಣ ಪಾರಂಪರಿಕ ನಡಿಗೆ (ಹೆರಿಟೇಜ್ ವಾಕ್) ನಡೆಯಿತು.ಪಟ್ಟಣದ ವಾಟರ್ ಗೇಟ್, ಟಿಪ್ಪು ಮಡಿದ ಸ್ಥಳ, ಥಾಮಸ್ ಇನಮನ್ ಬಂಧಿಖಾನೆ, ಮದ್ದಿನ ಮನೆ ಹಾಗೂ ಜಾಮಿಯಾ ಮಸೀದ್ ಮುಂತಾದ ಸ್ಥಳಗಳಿಗೆ ಕ್ಲಬ್‌ನ ಸದಸ್ಯರು ಭೇಟಿ ನೀಡಿ ಸ್ಥಳದ ಮಹತ್ವಗಳನ್ನು ತಿಳಿದುಕೊಂಡರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಘವೇಂದ್ರ ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಶ್ರೀರಂಗಪಟ್ಟಣದ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಐತಿಹಾಸಿಕ ಕುರುಹುಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದರು.ಭುವನೇಶ್ವರಿ ಕ್ಲಬ್ ಅಧ್ಯಕ್ಷ ಹರೀಶ್ ಮಾತನಾಡಿ, ಪಟ್ಟಣದಲ್ಲಿ ಒಟ್ಟು ಒಂಬತ್ತು ಮದ್ದಿನ ಮನೆಗಳಿವೆ. ಈ ಮನೆಗಳ ಸುತ್ತಮುತ್ತ ಅಂಬಿನ ಬಳ್ಳಿಗಳು ಬೆಳೆದು ನಿಂತಿವೆ. ಮದ್ದಿನ ಮನೆಗಳ ಸ್ವಚ್ಛತೆಗೆ ರಾಜ್ಯ ಪುರಾತತ್ವ ಇಲಾಖೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಮಂಜು ರಾಮ್ ಪುಟ್ಟೆಗೌಡ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಜಯಶಂಕರ್, ರೋಟರಿ ಕಾರ್ಯದರ್ಶಿ ಎನ್.ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಎನ್. ಸರಸ್ವತಿ, ಗಾಯತ್ರಿ, ಶಾರದ ವಿಲಾಸ್ ಕಾನೂನು ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸವಿತಾ ಸೇರಿದಂತೆ ಇತರರು ಇದ್ದರು.ಶ್ರೀ ಭುವನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಎನ್.ಬಸವರಾಜು ಆಯ್ಕೆ
ಮಂಡ್ಯ: ನಗರದ ಪ್ರವಾಸಿ ಮಂದಿರದಲ್ಲಿ ಶ್ರೀಭುವನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಬಸವರಾಜು ಹಾಗೂ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.ಅಧ್ಯಕ್ಷ ಎನ್.ಬಸವರಾಜು ಮಾತನಾಡಿ, ವಿಶ್ವಕರ್ಮ ಸಮಾಜವು ಬಹಳ ಹಿಂದುಳಿದಿದ್ದು ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಸಹಕರಾ ನೀಡಿ ಸಮಾಜದ ಹೇಳಿಗೆಗೆ ಶ್ರಮಿಸುತ್ತೇನೆ, ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣವಂತರಾಗಿಸಲು, ಪ್ರತಿಭಾವಂತರಾಗಿಸಲು ಕೈ ಜೋಡಿಸಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಬೇವಿನಹಳ್ಳಿ ಸೋಮು ಮಾತನಾಡಿ, ನಮ್ಮ ಸಮುದಾಯದಲ್ಲಿ ಹಲವು ಬಣಗಳಿದ್ದು, ವಿಶ್ವಕರ್ಮ ಸಮಾಜದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯದರ್ಶಿ ಕಟ್ಟೆಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಕೆ.ಸಿ.ಶ್ರೀನಿವಾಸ್, ನಿರ್ದೇಶಕರಾದ ಎಂ.ಆರ್.ಮಹೇಶ್, ಈರಣ್ಣ, ಆನಂದ್, ರಾಜಶೇಖರ್, ಈಶ್ವರಚಾರ್, ಶ್ರೀಕಂಠು, ದ್ರಾಕ್ಷಾಯಿಣಿ, ಪುಟ್ಟಸ್ವಾಮಚಾರಿ, ಚಂದ್ರು ಭಾಗವಹಿಸಿದ್ದರು.