ಕನಕಗಿರಿ ಉತ್ಸವದ ಕ್ರೀಡಾಕೂಟಕ್ಕೆ ಚಾಲನೆ

| Published : Feb 29 2024, 02:05 AM IST

ಸಾರಾಂಶ

ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಆಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಆಂಜನೇಯಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕ್ರೀಡಾಕೂಟಕ್ಕೆ ವಿಧ್ಯಕ್ತವಾಗಿ ಚಾಲನೆ ಸಿಕ್ಕಿತು.

ಕನಕಗಿರಿ: ಉತ್ಸವ-2024ರ ಅಂಗವಾಗಿ ಜಿಲ್ಲಾಡಳಿತದಿಂದ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ರುದ್ರಸ್ವಾಮಿ ಪ್ರೌಢ ಶಾಲಾ ಆವರಣ ಮೈದಾನದಲ್ಲಿ ಮಾ.3ರವರೆಗೆ ನಡೆಯುವ ಕ್ರೀಡಾಕೂಟಕ್ಕೆ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಬುಧವಾರ ಚಾಲನೆ ನೀಡಿದರು.

ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲೂಕು ಆಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಆಂಜನೇಯಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕ್ರೀಡಾಕೂಟಕ್ಕೆ ವಿಧ್ಯಕ್ತವಾಗಿ ಚಾಲನೆ ಸಿಕ್ಕಿತು.ಕನಕಗಿರಿಯ ರುದ್ರಸ್ವಾಮಿ ಪ್ರೌಢ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಪುರುಷ ಮತ್ತು ಮಹಿಳಾ ವಿಭಾಗದ ಕುಸ್ತಿ, ಹ್ಯಾಂಡ್‌ಬಾಲ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ಮಲ್ಲಕಂಬ ಪ್ರದರ್ಶನ ನಡೆಯಿತು.ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಿದ ಅಭಿಮಾನಿಗಳುರಣ ಬಿಸಿಲಲ್ಲಿಯೂ ಕುಸ್ತಿಪಟುಗಳು ಅಖಾಡದಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ನೆರೆದಿದ್ದ ಜನ ಸಮೂಹ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇನ್ನು ಕೆಲವು ಪ್ರೇಕ್ಷಕರು ರಣಕಣದಲ್ಲಿ ತೋರುತ್ತಿದ್ದ ಕ್ರೀಡಾಪಟುಗಳ ಶಕ್ತಿ ಪ್ರದರ್ಶನಕ್ಕೆ ಶಿಳ್ಳೆ, ಕೇಕೆ ಹಾಕಿ ಹುರಿದುಂಬಿಸಿದರು. ಬಿಸಿಲಿನಲ್ಲೂ ಸಾರ್ವಜನಿಕರ ಉತ್ಸಾಹಕ್ಕೇನು ಕಡಿಮೆ ಇರಲಿಲ್ಲ.ತುಂಬ ರೋಚಕತೆಯಿಂದ ಕೂಡಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಒಟ್ಟಾರೆ ಜಟ್ಟಿಗಳ ಕಾಳಗವು ನೋಡುಗರ ಗಮನ ಸೆಳೆಯಿತು. ಕುಸ್ತಿಪಟುಗಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದಲೂ ಪ್ರೋತ್ಸಾಹ ದೊರೆಯಿತು.ಆಹಾರ ಇಲಾಖೆಯ ಉಪನಿರ್ದೇಶಕ ಚಿದಾನಂದ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡ್ರ, ತಹಶೀಲ್ದಾರ ವಿಶ್ವನಾಥ ಮುರಡಿ, ತಾಪಂ ಇಒ ಚಂದ್ರಶೇಖರ ಕಂದಕೂರ, ಪಿಐ ಎಂ.ಡಿ. ಫೈಜುಲ್ಲಾ, ಗ್ರೇಡ್-2 ತಹಶೀಲ್ದಾರ ವಿ.ಎಚ್. ಹೊರಪೇಟೆ, ಪ್ರಮುಖರಾದ ವಿರೇಶ ಸಮಗಂಡಿ, ಗಂಗಾಧರಸ್ವಾಮಿ, ಕೆ.ಎಚ್. ಕುಲಕರ್ಣಿ, ಹುಲುಗಪ್ಪ ವಾಲೇಕಾರ, ವೈ.ಎಂ. ದೇವರಾಜ್, ಗಂಗಾಧರ ಗಂಗಾಮತ, ಶರಣಬಸಪ್ಪ ಭತ್ತದ, ರವಿ ಪಾಟೀಲ್, ಶರಣೇಗೌಡ, ಅನಿಲ ಬಿಜ್ಜಳ, ವಿರೂಪಾಕ್ಷ, ರಾಜಸಾಬ ನಂದಾಪುರ, ನಾಗೇಶ ಬಡಿಗೇರ, ಸಿದ್ಧಾರ್ಥ ಮಲ್ಲದಗುಡ್ಡ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಇದ್ದರು.