ಸಾರಾಂಶ
ದೇಶದ ಕ್ರೀಡೆಗಳಲ್ಲಿ ಕುಸ್ತಿಗೆ ಹೆಚ್ಚು ಮಹತ್ವ ದೊರೆತಿದೆ. ಈಗ ಮಟ್ಟಿ ಮೇಲಿನ ಕುಸ್ತಿಗಿಂತ ಮ್ಯಾಟ್ ಕುಸ್ತಿ ಪಂದ್ಯಾವಳಿಗಳು ಹೆಚ್ಚಾಗಿ ನಡೆಯತ್ತಿವೆ. ದೇಶಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ಕುಸ್ತಿ ಸೇರಿ ಇತರೆ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕರೀಘಟ್ಟದ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೆ.ಶೆಟ್ಟಹಳ್ಳಿ ಗ್ರಾಮಸ್ಥರು, ಕರ್ನಾಟಕ ಕ್ರೀಡಾ ಸಂಸ್ಥೆ, ಹಾಗೂ ಅಮೇಚೂರು ಕುಸ್ತಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಭಾಗ ಮಟ್ಟದ ತೂಕದ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಜಿಪಂ ಮಾಜಿ ಸದಸ್ಯ ಎಸ್.ಎಲ್ ಲಿಂಗರಾಜು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದೇಶದ ಕ್ರೀಡೆಗಳಲ್ಲಿ ಕುಸ್ತಿಗೆ ಹೆಚ್ಚು ಮಹತ್ವ ದೊರೆತಿದೆ. ಈಗ ಮಟ್ಟಿ ಮೇಲಿನ ಕುಸ್ತಿಗಿಂತ ಮ್ಯಾಟ್ ಕುಸ್ತಿ ಪಂದ್ಯಾವಳಿಗಳು ಹೆಚ್ಚಾಗಿ ನಡೆಯತ್ತಿವೆ. ದೇಶಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ಕುಸ್ತಿ ಸೇರಿ ಇತರೆ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು. ಕ್ರೀಡಾಪಟುಗಳಿಗೆ ಮಾಸಿಕ 10 ಸಾವಿರ ಮಾಸಾಶನವನ್ನು ನಿಗಧಿ ಮಾಡಬೇಕು. ಇದರಿಂದ ಕ್ರೀಡಾ ಪಟುಗಳಿಗೆ ಸಹಕಾರಿಯಾಗಲಿದೆ ಎಂದರು.
ಪಂದ್ಯಾವಳಿಯಲ್ಲಿ ಮಹಿಳಾ,ಪುರುಷ ಕುಸ್ತಿ ಪಟುಗಳು ಭಾಗವಹಿಸಿದ್ದು, 44 ಕೆಜಿಯಿಂದ 84 ಕೆಜಿ ತೂಕದವರೆಗೂ ಒಳಪಟ್ಟು ಜೊತೆಗಳ ಕಟ್ಟಿ ಪಾಯಿಂಟ್ ಕುಸ್ತಿಗಳನ್ನು ನಡೆಸಲಾಯಿತು. ಸುಮಾರು 60ಕ್ಕೂ ಹೆಚ್ಚು ಜೊಡಿ ಕುಸ್ತಿ ಪಟುಗಳು ಆಗಮಿಸಿದ್ದು, 8 ವಿಧದ ತೂಕಗಳಲ್ಲಿ ಕುಸ್ತಿಗಳನ್ನು ನಡೆಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಹಂತದಲ್ಲಿ ಜಯಶೀಲರಾದವರಿಗೆ ನಗದು ಜೊತೆಗೆ ಟ್ರೋಪಿಗಳನ್ನು ನೀಡಲಾಯಿತು.ಗ್ರಾಮದ ಕ್ರೀಡಾಪಟು ನಂದೀಶ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ರೈತ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಶ್ರೀನಿವಾಸ್‌ಗೌಡ, ಗ್ರಾಮದ ಸ್ವಾಮೀಗೌಡ, ಡೈರಿ ಅಧ್ಯಕ್ಷ ಆನಂದ್, ರವಿಚಂದ್ರ, ಬಾಲಸುಬ್ರಮಣ್ಯ, ರವಿ ಪ್ರಸಾದ್, ಕುಬೇರಪ್ಪ ಸೇರಿ ಇತರರು ಇದ್ದರು.