ಸಾರಾಂಶ
ಯುವಕರಿಗೆ ಉಚಿತ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿಪ್ರತಿಯೊಬ್ಬರು ಡ್ರೈವಿಂಗ್ ಲೈಸೆನ್ಸ್ ಹೊಂದುವ ಮೂಲಕ ವಾಹನಗಳ ಚಾಲನೆಗೆ ಮುಂದಾಗಬೇಕು ಎಂದು ಸ್ಥಳೀಯ ಪಿಎಸ್‌ಐ ಮೌನೇಶ್ ರಾಥೋಡ್ ಹೇಳಿದರು.
ಇಲ್ಲಿನ ಅಯ್ಯನಹಳ್ಳಿ ಗ್ರಾಮದಲ್ಲಿ ಎಸ್‌ಎಲ್‌ಆರ್ ಮೆಟಲಿಕ್ಸ್ ಲಿ.ನವರು ಸಿಎಸ್‌ಆರ್ ಸಾಮಾಜಿಕ ಮಿತ್ರ ಯೋಜನೆ ಅಡಿಯಲ್ಲಿ ಯುವಕರಿಗೆ ಉಚಿತ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಸ್‌ಎಲ್‌ಆರ್ ಮೆಟಲಿಕ್ಸ್ ಕಾರ್ಖಾನೆಯವರು ತಮ್ಮಕಾರ್ಖಾನೆಯ ವ್ಯಾಪ್ತಿಯ ಗ್ರಾಮಗಳ ಯುವಕರಿಗೆ ಸಿಎಸ್‌ಆರ್ ಯೋಜನೆಯಡಿಯಲ್ಲಿ ಯುವಕರಿಗೆ ವಾಹನಗಳ ಚಾಲನಾ ತರಬೇತಿ ನೀಡಿ, ಅವರಿಗೆ ಚಾಲನಾ ಪರವಾನಗಿ ವಿತರಿಸುವ ಮೂಲಕ ಯುವಕರು ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಸ್ಥಳೀಯ ಯುವಕರಿಗೆ ಉಚಿತ ಚಾಲನಾ ತರಬೇತಿ ನೀಡಿ ಅವರಿಗೆ ಚಾಲನಾ ಪರವಾನಗಿ ವಿತರಿಸುವ ಮೂಲಕ ನಿರುದ್ಯೋಗಿ ಯುವಕರು ಈ ಅವಕಾಶವನ್ನು ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನದತ್ತ ಸಾಗಬಹುದು ಎಂದರು.ಎಸ್‌ಎಲ್‌ಆರ್ ಕಂಪನಿಯ ಎ.ಜಿ.ಎಂ. ರಾಘವಾಂಕ ಕೆ.ಎಸ್ ಮಾತನಾಡಿ, ಎಸ್ ಎಲ್ ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ ಯೋಜನೆ ಅಡಿಯಲ್ಲಿ ಎಸ್‌ಎಲ್‌ಆರ್ ಕಾರ್ಖಾನೆಯ ವ್ಯಾಪ್ತಿಯ ಗ್ರಾಮಗಳ ಜನರಿಗೆ ಸಮುದಾಯದ ಅಭಿವೃದ್ಧಿಗಾಗಿ ಸಾಮಾಜಿಕ ಮಿತ್ರ, ವಿದ್ಯಾರ್ಥಿ ಮಿತ್ರ, ಆರೋಗ್ಯ ಮಿತ್ರ ಮತ್ತು ರೈತ ಮಿತ್ರ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕೆಲಸಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ಸ್ಥಳೀಯವಾಗಿರುವ ಬಡವರು ಮತ್ತು ಹಿಂದುಳಿದ ವರ್ಗದ ಅರ್ಹ ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಗೆ ಅಯ್ಯನಹಳ್ಳಿ ಮತ್ತು ಲೋಕಪ್ಪನಹೊಲ ಗ್ರಾಮಗಳ ಯುವಕರಿಗೆ ಉಚಿತವಾಗಿ 30 ದಿನಗಳ ಕಾಲ ಕಾರು ಚಾಲನೆ ತರಬೇತಿಯನ್ನು ನೀಡಿ ಅವರಿಗೆ ಚಾಲನಾ ಪರವಾನಗಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ಸ್ಥಳೀಯ ಮುಖಂಡರಾದ ಈ. ಅಂಬರೇಶ್, ಈ. ಮಂಜುನಾಥ, ಕುರುಬರ ಸೋಮಪ್ಪ, ಲಕ್ಷ್ಮೀದೇವಿ ಅಂಬರೀಶ್, ಹನುಮಂತಪ್ಪ, ಎಂ. ಮಾಬುಸಾಬ್, ಜಿ. ಗೋಣಿಪ್ಪ, ಹನುಮಜ್ಜ, ರಾಮಕೃಷ್ಣ, ರಾಮಚಂದ್ರ, ಲಕ್ಷ್ಮಣ, ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯ ಅಧಿಕಾರಿಗಳಾದ ಜಿ. ಶೇಷ ಸಾಯಿ, ಅನಿಲ್ ಕುಮಾರ್, ಮಲ್ಲಿಕಾರ್ಜುನ. ಕೆ, ಮಾರುತಿ ಘೋಷಿ ಸೇರಿದಂತೆ ಅಯ್ಯನಹಳ್ಳಿ ಗ್ರಾಮದ ಮುಖಂಡರು ಹಾಗೂ ಲೋಕಪ್ಪನಹೊಲ ಗ್ರಾಮದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.