ಚಿನ್ನಾಭರಣದ ಬ್ಯಾಗ್‌ ವಾಪಸ್‌ ನೀಡಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರು

| Published : May 15 2025, 01:34 AM IST

ಚಿನ್ನಾಭರಣದ ಬ್ಯಾಗ್‌ ವಾಪಸ್‌ ನೀಡಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರು
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಬಸ್ ನಿಲ್ದಾಣದ ಬಳಿ ಚಿನ್ನದ ಆಭರಣವಿದ್ದ ಬ್ಯಾಗು ಬಿಟ್ಟು ಹೋಗಿದ್ದ ಮಹಿಳೆಗೆ ಬಸ್ ಘಟಕದ ಅಧಿಕಾರಿಗಳು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಕನಕಪುರ: ಬಸ್ ನಿಲ್ದಾಣದ ಬಳಿ ಚಿನ್ನದ ಆಭರಣವಿದ್ದ ಬ್ಯಾಗು ಬಿಟ್ಟು ಹೋಗಿದ್ದ ಮಹಿಳೆಗೆ ಬಸ್ ಘಟಕದ ಅಧಿಕಾರಿಗಳು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ಕನಕಪುರ ಬಸ್ ಘಟಕಕ್ಕೆ ಸೇರಿದ್ದ ಕನಕಪುರ-ಕೊಳ್ಳೆಗಾಲ

ಮಾರ್ಗದ ಬಸ್‌ನಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ಮೂಲದ ಚಿನ್ನಮ್ಮ 75 ಗ್ರಾಂ ತೂಕದ 6 ಲಕ್ಷ ರು. ಮೌಲ್ಯದ ಚಿನ್ನಾಭರಣದ ಬ್ಯಾಗ್ ಬಿಟ್ಟು ಹೋಗಿದ್ದು ಇದನ್ನು ಗಮನಿಸಿದ ಬಸ್ ಚಾಲಕ ದಾಸಪ್ಪ ಹಾಗೂ ನಿರ್ವಾಹಕ ಶಿವಕುಮಾರ್ ಬ್ಯಾಗನ್ನು ಬಸ್ ಘಟಕದ ವ್ಯವಸ್ಥಾಪಕ ನರಸಿಂಹರಾಜು ಬಳಿ ನೀಡಿದ್ದರು. ಬ್ಯಾಗ್ ಕಳೆದುಕೊಂಡ ಮಹಿಳೆ ಈ ಬಗ್ಗೆ ತನ್ನ ಕುಟುಂಬದೊಂದಿಗೆ ಕನಕಪುರ ಬಸ್ ಘಟಕಕ್ಕೆ ಆಗಮಿಸಿ ವಿಚಾರಿಸಿದ ವೇಳೆ ಸಂಪೂರ್ಣ ವಿವರ ಪಡೆದ ವ್ಯವಸ್ಥಾಪಕ ನರಸಿಂಹರಾಜು ಆಭರಣದ ಬ್ಯಾಗನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ. ಚಿನ್ನಾಭರಣದ ಬ್ಯಾಗ್ ಪಡೆದ ಮಹಿಳೆ ಬಸ್ ಚಾಲಕ ಹಾಗೂ ನಿರ್ವಾಹಕರ ಪ್ರಮಾಣಿತೆಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಹಾಯಕ ಬಸ್ ನಿಯಂತ್ರಕ ಸೋಮ, ಚಾಲಕ ದಾಸಪ್ಪ, ನಿರ್ವಾಹಕ ಶಿವಕುಮಾರ್‌ ಸಿಬ್ಬಂದಿ ಉಪಸ್ಥಿತರಿದ್ದರು.