ಸಾರಾಂಶ
ಕೇಂದ್ರ ಸರ್ಕಾರ ಮೋಟಾರು ಕಾಯ್ದೆಯಲ್ಲಿ ಇತ್ತೀಚೆಗೆ ಮಾಡಿದರುವ ಕೆಲವೊಂದು ಕಾನೂನುಗಳ ತಿದ್ದುಪಡಿಯಿಂದ ಚಾಲಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ಸುಂದರೇಶ್ ಮುದಗುಣಿ ಹೇಳಿದರು.
-ಪಟ್ಟಣದ ಜೇಸಿ ವೃತ್ತದಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಕೇಂದ್ರ ಸರ್ಕಾರ ಮೋಟಾರು ಕಾಯ್ದೆಯಲ್ಲಿ ಇತ್ತೀಚೆಗೆ ಮಾಡಿದರುವ ಕೆಲವೊಂದು ಕಾನೂನುಗಳ ತಿದ್ದುಪಡಿಯಿಂದ ಚಾಲಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ಸುಂದರೇಶ್ ಮುದಗುಣಿ ಹೇಳಿದರು.
ಪಟ್ಟಣದ ಜೇಸಿ ವೃತ್ತದಲ್ಲಿ ಕರುನಾಡು ಸಾರಥಿಗಳ ಸೈನ್ಯ, ಆಟೋ ಚಾಲಕರ ಸಂಘ, ಟ್ರ್ಯಾಕ್ಟರ್ ಚಾಲಕರ ಸಂಘ, ಲಾರಿ ಚಾಲಕರ ಸಂಘ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಮೋಟಾರು ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಕೆಲವು ಮಾರ್ಪಾಡು ಮಾಡಿದ್ದು, ಹಿಟ್ ಅಂಡ್ ರನ್ ಕೇಸ್ ದಾಖಲಾದಲ್ಲಿ 10 ವರ್ಷ ಜೈಲು, ರು.7 ಲಕ್ಷ ದಂಡ ವಿಧಿಸಿ ಕಾನೂನಿಗೆ ತಿದ್ದುಪಡಿ ತಂದಿದೆ. ಇದು ಅತ್ಯಂತ ಆತಂಕಕಾರಿ ವಿಚಾರ. ಕೆಲವೊಮ್ಮೆ ಚಾಲಕರಿಗೆ ತಿಳಿಯದೆ ಆಗುವ ಅಪಘಾತದಲ್ಲಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಚಾಲಕರ ಕುಟುಂಬವೇ ಸಂಕಷ್ಟಕ್ಕೆ ಸಿಲುಕಲಿದೆ.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಿ ಈ ಹಿಂದೆ ಯಾವ ಕಾನೂನು ಇತ್ತೋ ಅದನ್ನೇ ಮುಂದುವರೆ ಸಬೇಕು ಅಥವಾ ದಂಡ, ಶಿಕ್ಷೆ ಅವಧಿ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು. ಲಾರಿ ಚಾಲಕರ ಸಂಘದ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಹಬೀಬುಲ್ಲಾ, ನವೀನ್ ಮತ್ತಿತರರು ಹಾಜರಿದ್ದರು.೧೭ಬಿಹೆಚ್‌ಆರ್ ೧:
ಬಾಳೆಹೊನ್ನೂರಿನಲ್ಲಿ ವಿವಿಧ ಚಾಲಕರ ಸಂಘಟನೆಯಿಂದ ಕೇಂದ್ರದ ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದರು.