ಮೊಬೈಲ್‌ನಲ್ಲಿ ಸಂಭಾಷಿಸುತ್ತ ಬಸ್‌ ಚಾಲನೆ: ₹5 ಸಾವಿರು ದಂಡ

| Published : Feb 06 2024, 01:35 AM IST

ಮೊಬೈಲ್‌ನಲ್ಲಿ ಸಂಭಾಷಿಸುತ್ತ ಬಸ್‌ ಚಾಲನೆ: ₹5 ಸಾವಿರು ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸಿದ ಶಿವಮೊಗ್ಗ ನಗರದ ಸಿಟಿ ಬಸ್‌ ಚಾಲಕನಿಗೆ ₹5 ಸಾವಿರ ದಂಡ ವಿಧಿಸಿರುವ ಘಟನೆ ಸೋಮವಾರ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸುತ್ತಿದ್ದ ಚಾಲಕನ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಂಚಾರ ಠಾಣೆ ಪೊಲೀಸರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸಿದ ಸಿಟಿ ಬಸ್‌ ಚಾಲಕನಿಗೆ ₹5 ಸಾವಿರ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ಸೋಮವಾರ ನಡೆದಿದೆ.

ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸುತ್ತಿದ್ದ ಚಾಲಕನ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಂಚಾರ ಠಾಣೆ ಪೊಲೀಸರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ.

ಗೋಪಾಳ- ರಾಗಿಗುಡ್ಡ ಮಾರ್ಗದ ಸಿಟಿ ಬಸ್‌ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಗೋಪಾಳದಿಂದ ಅಣ್ಣಾನಗರ ಚಾನಲ್‌ವರೆಗೂ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸಿದ್ದ. ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಅವರ ವಿಡಿಯೋ ಚಿತ್ರೀಕರಣ ಮಾಡಿ, ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌ ಅವರಿಗೆ ಕಳುಹಿಸಿದ್ದರು.

ಸಂಚಾರ ಠಾಣೆ ಸಿಬ್ಬಂದಿ ಸಂದೀಪ್‌, ವಿಡಿಯೋ ಆಧರಿಸಿ ಚಾಲಕನನ್ನು ಪತ್ತೆ ಹಚ್ಚಿದರು. ಮೊಬೈಲ್‌ ಮಾತನಾಡುತ್ತ ಬಸ್‌ ಚಲಾಯಿಸಿದ್ದಕ್ಕೆ ₹5 ಸಾವಿರ ದಂಡ ಕಟ್ಟಿಸಿಕೊಳ್ಳಲಾಗಿದೆ.

- - -(ಸಾಂದರ್ಭಿಕ ಚಿತ್ರಗಳು): - ಮೊಬೈಲ್‌.ಜೆಪಿಜಿ

-ಮೊಬೈಲ್‌-ಡ್ರೈವರ್‌.ಜೆಪಿಜಿ: