ಡ್ರೋಣ್‌ ಒಂದು ಕ್ರಾಂತಿಕಾರಿ ತಂತ್ರಜ್ಞಾನ: ಡಾ.ಜಯಲಕ್ಷ್ಮೀ

| Published : Mar 14 2024, 02:00 AM IST

ಸಾರಾಂಶ

ಡ್ರೋನ್ ಖರೀದಿಗೆ ರೈತರಿಗಾಗಿ ಲಭ್ಯವಿರುವ ವಿವಿಧ ಯೋಜನೆ ಅಡಿಯಲ್ಲಿ ಇರುವ ಸಬ್ಸಿಡಿ ಬಗ್ಗೆ ಮಾಹಿತಿ ಪಡೆದು ಸೌಲಭ್ಯ ಬಳಸಿಕೊಳ್ಳಿ

ತರೀಕೆರೆ: ಡ್ರೋಣ್‌ ಒಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ಇರುವಕ್ಕಿ (ಕೀಟಶಾಸ್ತ್ರ) ಪ್ರಾಧ್ಯಾಪಕರು ಮತ್ತು ನೋಡೆಲ್ ಅಧಿಕಾರಿ ಡಾ.ಜಯಲಕ್ಷ್ಮಿ ಹೆಗ್ಜೆ ಹೇಳಿದ್ದಾರೆ.ಅವರು, ಸಮೀಪದ ಬಾವಿಕೆರೆ ಗ್ರಾಮದ ರೋಹಿತ್ ಅವರ ತೆಂಗಿನ ತೋಟ ಮತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ ವತಿಯಿಂದ ಏರ್ಪಾಡಾಗಿದ್ದ ಬಿಳಿ ನೊಣ ಹತೋಟಿಗೆ ಡ್ರೋಣ್‌ ಸಹಾಯದಿಂದ ಜೈವಿಕ ಕೀಟನಾಶಕದ ಸಿಂಪರಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೀಟನಾಶಕಗಳ ನಿಖರವಾದ ಸಿಂಪರಣೆಗಾಗಿ ಪರಿಣಾಮಕಾರಿಯಾಗಿ ಬಳಸಲ್ಪಡುತ್ತದೆ. ಇದರಿಂದಾಗಿ ರಾಸಾಯನಿಕ ಬಳಕೆ ಮತ್ತು ಅದರ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದ ಅವರು, ಡ್ರೋಣ್‌ ಖರೀದಿಗೆ ರೈತರಿಗಾಗಿ ಲಭ್ಯವಿರುವ ವಿವಿಧ ಯೋಜನೆ ಅಡಿಯಲ್ಲಿ ಇರುವ ಸಬ್ಸಿಡಿ ಬಗ್ಗೆ ತಿಳಿಸಿದರು.

ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ ಕೀಟಶಾಸ್ತ್ರ ವಿಭಾಗದ ವಿಜ್ಞಾನಿಗಳಾದ ಡಾ. ಕೆ. ಸೆಲ್ವರಾಜ್ ಅವರು ಡ್ರೋಣ್‌ ಚಾಲನೆಗೊಳಿಸಿ ಡ್ರೋಣ್‌ ಸಿಂಪರಣೆನೆಯ ಉಪಯೋಗಗಳು, ಹಾಗೂ ಡ್ರೋಣ್‌ ಯಂತ್ರ ಯಾವ ರೀತಿ ಕೆಲಸ ಮಾಡುತ್ತದೆ ಎಂದು ವಿವರವಾಗಿ ತಿಳಿಸಿದರು.

ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ಸಹಾಯಕ ಪ್ರಾಧ್ಯಾಪಕ ಡಾ. ಗಜೇಂದ್ರ ಟಿ.ಎಚ್, ಕೃ.ತೋ.ಸಂ.ಕೇ, ಬಾವಿಕೆರೆ ವಿಜ್ಞಾನಿಗಳಾದ ಡಾ.ಬಸವರಾಜ್, ಡಾ.ಕೃಷ್ಣಾ ರೆಡ್ಡಿ , ಡಾ. ಮಂಜುನಾಥ್ ಕುದರಿ ಮತ್ತು ಡಾ.ಪವಿತ್ರಾ, ಗ್ರಾಮೀಣ ಕೃಷಿ ಕಾರ್ಯನುಭವದ ವಿದ್ಯಾರ್ಥಿಗಳಾದ ಆದಿತ್ಯ, ಭರತ್, ಪಾಲ್, ದೀಕ್ಷಿತ್, ಗಗನ್, ರಾಜೇಂದರ್, ಮನೋಜಿ, ನಿತೀಶ್, ಶರತ್ ಕುಮಾರ್, ಶರತ್ ಮಾಳಗಿ, ಸುಷನ್, ಶ್ರೇಯಸ್, ವಿಶ್ವನಾಥ್ ಗೌಡ ಹಾಗೂ ಬಾವಿಕೆರೆ ಗ್ರಾಮದ ರೈತರು ಉಪಸ್ಥಿತರಿದ್ದರು.