ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಯುವಕ, ಯುವತಿಯರು ೧೮ ವರ್ಷದೊಳಗಿನವರನ್ನು ಯಾವುದೇ ರೀತಿಯಿಂದ ಪ್ರಚೋದಿಸಿದರೆ ಅದು ಪೊಕ್ಸೋ ಪ್ರಕರಣವಾಗುತ್ತದೆ.

ಹನುಮಸಾಗರ: ಮಾದಕ ದ್ರವ್ಯ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪಿಎಸ್‌ಐ ಧನಂಜಯ.ಎಂ. ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ಯವ್ಯ ಹಾಗೂ ಪೊಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಯುವಕ, ಯುವತಿಯರು ೧೮ ವರ್ಷದೊಳಗಿನವರನ್ನು ಯಾವುದೇ ರೀತಿಯಿಂದ ಪ್ರಚೋದಿಸಿದರೆ ಅದು ಪೊಕ್ಸೋ ಪ್ರಕರಣವಾಗುತ್ತದೆ. ಆಗ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.

ಕೆಪಿಎಸ್ ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಂಶುಪಾಲ ಭೀಮಪ್ಪ ಗೊಲ್ಲರ, ಉಪನ್ಯಾಸಕ ಲಕಪತಿ ರಾಠೋಡ, ಶರಣಪ್ಪ, ಭರಮಲಿಂಗೇಶ ದೇವರಮನಿ, ಗೀತಾ ಬಂಡಿಹಾಳ, ಎಸ್‌ಡಿಎ ವನಜಾಕ್ಷಿ ಪಾಟೀಲ್ ಇತರರು ಇದ್ದರು.