ಪ್ರಸ್ತುತ ಸಮಾಜದ ಯುವ ಸಮುದಾಯವು ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಾದಕ ವಸ್ತುಗಳ ವ್ಯಸನಿಯಾದ ವ್ಯಕ್ತಿ ಕುಟುಂಬ ತ್ಯಜಿಸುತ್ತದೆ

ಕುಕನೂರು: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎಂದು ಪಿಎಸ್ಐ ಎಸ್.ಪಿ. ನಾಯ್ಕ್ ಹೇಳಿದರು.

ತಾಲೂಕಿನ ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ದುಷ್ಪರಿಣಾಮ, ಪೋಕ್ಸೋ, ಬಾಲ್ಯ ವಿವಾಹ, ಸೈಬರ್ ಅಪರಾಧಗಳ ಬಗ್ಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವುದರೊಂದಿಗೆ, ಮಾನಸಿಕ ನೆಮ್ಮದಿ ಕುಂಠಿತಗೊಳ್ಳುತ್ತದೆ. ಅಲ್ಲದೆ ಮಾನಸಿಕ ಖಿನ್ನತೆಯಿಂದ ಸಮಾಜದಲ್ಲಿ ಅಹಿತಕರ ಘಟನೆ ನಡೆಯಲು ಕಾರಣವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಸಮಾಜದ ಯುವ ಸಮುದಾಯವು ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಾದಕ ವಸ್ತುಗಳ ವ್ಯಸನಿಯಾದ ವ್ಯಕ್ತಿ ಕುಟುಂಬ ತ್ಯಜಿಸುತ್ತದೆ. ಅಲ್ಲದೆ ಸಮಾಜ ಕೂಡ ಆತನನ್ನು ಧಿಕ್ಕರಿಸುತ್ತದೆ. ಯುವಕರು ಯುವತಿಯರು ಮಾದಕ ವಸ್ತುಗಳ ದುಷ್ಪರಿಣಾಮ ವ್ಯಸನಿಗಳಾಗದೆ ಸಮಾಜಕ್ಕೆ ಒಳಿತನ್ನು ಬಯಸುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಮಾದಕ ವಸ್ತುಗಳ ಉಪಯೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಹಾಗೂ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ವಾಹನ ಚಲಿಸಬೇಕು ಎಂದು ಹೇಳಿದರು.

ಪ್ರಾಂಶುಪಾಲ ಪ್ರಭುರಾಜ, ಸಿಬ್ಬಂದಿ ಫಕೀರಪ್ಪ ಬೇವಿನಗಿಡದ್, ಮಲ್ಲಿಕಾರ್ಜುನ ಡಿ.ಎಸ್, ಎಚ್.ಜಿ. ಬೊಮ್ಮನಾಳ, ಸಲೀಮ್ ಪಾಷ, ಪೊಲೀಸ್ ಸಿಬ್ಬಂದಿ ಗವಿಸಿದ್ದಯ್ಯ ಹಿರೇಮಠ, ಬಸವರಾಜ ವಾಲಿಕಾರ್, ವಿದ್ಯಾರ್ಥಿಗಳು ಇತರರು ಇದ್ದರು.