ಒಂದು ವಾರದ ಅವಧಿಯಲ್ಲಿ ವಿದೇಶದಿಂದ ಕಳ್ಳ ಸಾಗಾಣಿಕೆಗೆ ಯತ್ನಿಸಿದ 13.39 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಒಂದು ವಾರದ ಅವಧಿಯಲ್ಲಿ ವಿದೇಶದಿಂದ ಕಳ್ಳ ಸಾಗಾಣಿಕೆಗೆ ಯತ್ನಿಸಿದ 13.39 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಈ ತಿಂಗಳ 11ರಿಂದ 16ರವರೆಗೆ ಈ ಕಾರ್ಯಾಚರಣೆ ನಡೆದಿದ್ದು, ಪ್ರವಾಸಿಗರ ಸೋಗಿನಲ್ಲಿ ಹೈಡ್ರೋ ಗಾಂಜಾ ಸಾಗಾಣಿಕೆಗೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಸ್ಟಮ್ಸ್ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಆರು ಮಂದಿ ಪೆಡ್ಲರ್ಗಳನ್ನು ಬಂಧಿಸಿ 38.27 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದೆ.
ನ.10 ರಂದು ಕೆಐಎಗೆ ಬ್ಯಾಂಕಾಕ್ನಿಂದ ಬಂದಿಳಿದವನಿಂದ 3.48 ಕೋಟಿ ರು. ಮೌಲ್ಯದ 9.95 ಕೇಜಿ, ಮರು ದಿನ ಅದೇ ದೇಶದವನಿಂದ 1.58 ಕೋಟಿ ರು. ಮೌಲ್ಯದ 4.54 ಕೆಜಿ, ನ.12 ಸಿಂಗಾಪುರದಿಂದ ಬಂದಿಳಿದವನಿಂದ 1.85 ಕೋಟಿ ರು. ಮೌಲ್ಯದ 5.3 ಕೇಜಿ, ನ.14 ರಂದು ಕೌಲಾಂಪುರದಿಂದ ಬಂದವನ ಬಳಿ 2.41 ಕೋಟಿ ಮೌಲ್ಯದ 6.9 ಕೇಜಿ, ನ.15 ರಂದು ಪ್ರತ್ಯೇಕವಾಗಿ ಕೌಲಾಂಪುರದಿಂದ ಬಂದಿಳಿದ ಒಬ್ಬಾತನಿಂದ 51.4 ಲಕ್ಷ ರು. ಮೌಲ್ಯದ 1.4 ಕೇಜಿ ಹಾಗೂ ಮತ್ತೊಬ್ಬನಿಂದ 3.56 ಕೋಟಿ ರು. ಬೆಲೆಯ 10.18 ಕೇಜಿ ಸೇರಿ ಒಟ್ಟು 13.39 ಕೋಟಿ ರು. ಬೆಲೆಯ ₹38.27 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.ಬ್ಯಾಂಕಾಕ್ ಬಿಟ್ಟು ಈಗ ಮಲೇಷಿಯಾ
ಕರುನಾಡಿಗೆ ಥೈಲ್ಯಾಂಡ್ ಬಳಿಕ ಈಗ ಮಲೇಷಿಯಾ ದೇಶದಿಂದ ಅತಿ ಹೆಚ್ಚು ಹೈಡ್ರೋ ಗಾಂಜಾ ಸಾಗಾಣಿಕೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಒಂದು ವಾರದ ಕಸ್ಟಮ್ಸ್ ಕಾರ್ಯಾಚರಣೆಯಲ್ಲಿ ಜಪ್ತಿಯಾದ 13.30 ಕೋಟಿ ರು. ಮೌಲ್ಯದ ಡ್ರಗ್ಸ್ನಲ್ಲಿ ಮಲೇಷಿಯಾದ ಕೌಲಾಂಪುರದದ ಪೆಡ್ಲರ್ಗಳ ಪಾಲು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈಗ ಡ್ರಗ್ಸ್ ಸಾಗಾಣಿಕೆಗೆ ಮಲೇಷಿಯಾ ಕೂಡ ಕೇಂದ್ರವಾಗುತ್ತಿದೆ ಎಂಬ ಆತಂಕ ಎದುರಾಗಿದೆ.