ಬೆಂಗಳೂರಿನಲ್ಲಿ ಡ್ರಂಕ್‌ ಆ್ಯಂಡ್‌ ಡ್ರೈವ್‌ ಇಳಿಮುಖ

| Published : May 30 2024, 01:31 AM IST / Updated: May 30 2024, 09:32 AM IST

ಸಾರಾಂಶ

ಪಾನಮತ್ತ ವಾಹನ ಚಾಲನೆ ಪ್ರಕರಣಗಳು ಇಳಿಮುಖವಾಗಿದ್ದು, ಕಳೆದ ವರ್ಷ (ಜನವರಿ-ಮೇ) ಶೇಕಡ 4ರಷ್ಟಿದ್ದ ಪ್ರಕರಣಗಳು ಈ ವರ್ಷ ಶೇ.2.6ಕ್ಕೆ ಇಳಿಕೆಯಾಗಿದೆ.

ಬೆಂಗಳೂರು : ರಾಜಧಾನಿಯಲ್ಲಿ ಪಾನಮತ್ತ ವಾಹನ ಚಾಲನೆ ಪ್ರಕರಣಗಳು ಇಳಿಮುಖವಾಗಿದ್ದು, ಕಳೆದ ವರ್ಷ (ಜನವರಿ-ಮೇ) ಶೇಕಡ 4ರಷ್ಟಿದ್ದ ಪ್ರಕರಣಗಳು ಈ ವರ್ಷ ಶೇ.2.6ಕ್ಕೆ ಇಳಿಕೆಯಾಗಿದೆ.

ದ್ವಿಚಕ್ರ ವಾಹನ ಪಾನಮತ್ತ ಚಾಲನೆ ಪ್ರಕರಣಗಳಲ್ಲಿಯೂ ಸಹ ಕಳೆದ ವರ್ಷ ಶೇ.5.2ರಷ್ಟಿದ್ದ ಪ್ರಕರಣಗಳು ಈ ವರ್ಷ ಶೇ.3.2ಕ್ಕೆ ಇಳಿಮುಖವಾಗಿದೆ.

ಇನ್ನು ಪಾನಮತ್ತ ಚಾಲನೆಯಿಂದ ಅಪಘಾತ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ ವರ್ಷ ಶೇ.4.5ರಷ್ಟು ಇದ್ದ ಪ್ರಕರಣಗಳು ಈ ವರ್ಷ ಶೇ.4.3ಕ್ಕೆ ಇಳಿಕೆಯಾಗಿದೆ. 

ಆದರೆ ಈ ವರ್ಷ ಪಾನಮತ್ತ ಚಾಲನೆಯಿಂದ ಸ್ವಯಂ ಅಪಘಾತಗಳು ಹೆಚ್ಚಳವಾಗಿವೆ. ಕಳೆದ ಐದು ತಿಂಗಳಲ್ಲಿ ನಗರದಲ್ಲಿ ಒಟ್ಟು 15 ಪಾನಮತ್ತ ದ್ವಿಚಕ್ರ ವಾಹನ ಚಾಲನೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 11 ಸ್ವಯಂ ಅಪಘಾತ ಪ್ರಕರಣಗಳಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 21 ಪಾನಮತ್ತ ದ್ವಿಚಕ್ರ ವಾಹನ ಚಾಲನೆ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 10 ಬೇರೆ ವಾಹನಗಳಿಗೆ ಡಿಕ್ಕಿಯಾಗಿದ್ದರೆ, 11 ಪ್ರಕರಣಗಳು ಸ್ವಯಂ ಅಪಘಾತಗಳಾಗಿವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.