ಅಮಿತ್‌ ಶಾ ವಿರುದ್ಧ ಕ್ರಮಕ್ಕೆ ಡಿಎಸ್ಎಸ್‌ ಆಗ್ರಹ

| Published : Dec 22 2024, 01:32 AM IST

ಅಮಿತ್‌ ಶಾ ವಿರುದ್ಧ ಕ್ರಮಕ್ಕೆ ಡಿಎಸ್ಎಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅಂಬೇಡ್ಕರ್‌ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಂಬೇಡ್ಕರ್‌ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯ ಸಂಚಾಲಕ ರಮೇಶ್ ಆಸಂಗಿ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ ಅವರಿಗೆ ಅವಮಾನ ಮಾಡಿದ್ದು, ಈ ದೇಶದ ಜನತೆಯು ಸಹಿಸುವುದಿಲ್ಲ. ಆಡಳಿತದಲ್ಲಿರುವ ಕೇಂದ್ರ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ದೇಶಕ್ಕೆ ಅವಮಾನಿಸಿದೆ ಎಂದು ದೂರಿದರು.

ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ ಮತ್ತು ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮಾತನಾಡಿ, ಮನುಸ್ಮೃತಿ ಮನೋಭಾವ ಹೊಂದಿರುವ ಕೇಂದ್ರ ಸರ್ಕಾರ ಈ ವಿಷಯವನ್ನು ಖಂಡಿಸಬೇಕಾಗಿತ್ತು. ಆದರೆ, ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು, ದೇಶದ ದುರಂತ. ರಾಷ್ಟ್ರಪತಿಗಳು ಯಾವುದೇ ಮೂಲಾಜಿಗೆ ಒಳಗಾಗದೇ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ಅನೀಲ ಕೊಡತೆ, ಸುರೇಶ ನಡಗಡ್ಡಿ, ರಾಜಕುಮಾರ ಸಿಂದಗೇರಿ, ಬಿ.ಎಸ್.ತಳವಾರ, ಶಿವಾನಂದ ಮೂರಮಾನ, ರವಿ ಮ್ಯಾಗೇರಿ, ಸೋಮು ಮಾದರ, ಮಂಜು ಎಂಟಮಾನ, ಪೀರಪ್ಪ ಕಟ್ಟಿಮನಿ, ಲಕ್ಷ್ಮಣ ಹಾಲಿಹಾಳ, ಬಸವರಾಜ ಹೊಸಮನಿ, ಸಿದ್ದು ಬಾರಿಗಿಡದ, ಸಾಯಿನಾಥ ಬನಸೂಡೆ, ಲಕ್ಷ್ಮೀಕಾಂತ ಏಳಗಿ, ಆಂಜನೇಯ ಚಲವಾದಿ, ರವಿಚಂದ್ರ ಚಲವಾದಿ, ಬಸವರಾಜ ತಳಕೆರಿ, ಸುಭದ್ರಾ ಮೇಲಿನಕೇರಿ, ಚಂದ್ರಕಲಾ ಮಸಳಿಕೆರಿ ಮುಂತಾದವರು ಇದ್ದರು.