ಸಾರಾಂಶ
1 ರಂದು ನಡೆದಿದ್ದ ಜಿಲ್ಲಾ ವಕೀಲರ ಸಂಘದ ಚುನಾವಣೆ । ೪೩೪ ಮತ ಪಡೆದು ಜಯ ।? ಉಪಾಧ್ಯಕ್ಷರಾಗಿ ಯೋಗೇಶ್ ಮೌರ್ಯ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಡಿ.ಟಿ. ಪ್ರಸನ್ನಕುಮಾರ್, ಉಪಾಧ್ಯಕ್ಷರಾಗಿ ಯೋಗೇಶ್ ಮೌರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಸಂತೋಷ್, ಖಜಾಂಚಿಯಾಗಿ ಎಚ್.ಎನ್.ಪ್ರತಾಪ್, ಜಂಟಿ ಕಾರ್ಯದರ್ಶಿಯಾಗಿ ರೂಪ ಕರಿಗೌಡರು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಕಾರ್ಲೆ ಮೊಗಣ್ಣಗೌಡ ೩೨೩ ಮತ ಪಡೆದರೆ ಡಿ.ಪಿ.ಪ್ರಸನ್ನ ೪೩೪ ಮತಗಳನ್ನು ಪಡೆದರು. ಕಾರ್ಯದರ್ಶಿಯ ಸ್ಥಾನಕ್ಕೆ ಎಚ್.ಆರ್.ಒಂಬೇಶ ೩೦೭ ಮತಗಳು, ಎಸ್.ಬಿ.ಮಂಜುನಾಥ್ ೬೭ ಮತಗಳು ಪಡೆದರೆ ಬಿ.ಎಂ. ಸಂತೋಷ್ ೩೭೬ ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಟಿ. ತಿಮ್ಮೇಗೌಡ ೨೬೫ ಮತಗಳು, ಯತೀಶ್ ೧೦೬ ಮತಗಳು ಸುಗುಣ ೭೪ ಮತಗಳು, ಶಿವರಾಮಚಂದ್ರ ೧೦ ಮತಗ ಪಡೆದರೆ ಯೋಗೇಶ್ ಮೌರ್ಯ ೨೮೦ ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಖಜಾಂಚಿ ಸ್ಥಾನಕ್ಕೆ ಎ.ಜೆ.ರಘು ೨೬೫ ಮತಗಳು ಪಡೆದರೆ ಎಚ್.ಎನ್. ಪ್ರತಾಪ ೪೯೬ ಮತಗಳನ್ನು ಪಡೆದು ಖಜಾಂಚಿ ಆಗಿ ಆಯ್ಕೆಗೊಂಡರು.ಜಿಲ್ಲಾ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾದ ಡಿ.ಟಿ.ಪ್ರಸನ್ನಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ‘ಜೂ.೧ ರಂದು ನಡೆದ ವಕೀಲರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ರಾತ್ರಿ ಸಮಯುದಲ್ಲಿ ಚುನಾವಣೆ ತೀರ್ಪು ಬಂದಿದ್ದು, ನಾನು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದೇನೆ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಹಿರಿಯ ಕಿರಿಯ ಪುರುಷ ಹಾಗೂ ಮಹಿಳಾ ವಕೀಲರಿಗೆ ಹೃತ್ಪೂರ್ವಕ ಅಭಿನಂದನೆ ಅರ್ಪಿಸುತ್ತೇನೆ. ವಕೀಲರ ಸಂಘದ ಉಪಾಧ್ಯಕ್ಷರಾಗಿ ಯೋಗೇಶ್ ಮೌರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ಸಂತೋಷ್, ಖಜಾಂಚಿಯಾಗಿ ಎಚ್.ಎನ್.ಪ್ರತಾಪ್, ಮಹಿಳಾ ಮೀಸಲಾತಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ರೂಪ ಕರಿಗೌಡ ಅವರನ್ನು ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದು ಹೇಳಿದರು.
‘ನಾನು ೨೦೧೪-೧೫ನೇ ಸಾಲಿನಲ್ಲಿ ಈ ಸಂಘದಲ್ಲಿ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದ್ದು, ನೂತನ ಕೋರ್ಟ್ ಕೂಡ ಈ ಸಮಯದಲ್ಲೆ ಉದ್ಘಾಟನೆಯಾಗಿದ್ದು, ಇಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ವಕೀಲರ ಸರ್ವ ಸದಸ್ಯರ ಸಭೆ ಕರೆದು ಚರ್ಚೆಗೆ ತಂದು ಸಲಹೆ ಪಡೆದು ಶ್ರಮವಹಿಸಿ ವಕೀಲರಿಗೆ ಪ್ರಾಮಾಣಿಕವಾಗಿ ನಮ್ಮ ತಂಡದೊಂದಿಗೆ ಪ್ರಯತ್ನ ಪಡಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‘ಈ ಹಿಂದೆಯೂ ಯುವ ವಕೀಲರಿಗೆ ಸಾಕಷ್ಟು ಕಾರ್ಯಾಗಾರ ಮಾಡಲಾಗಿದೆ. ಸುಮಾರು ೨೦೦ ಜನ ಯುವ ವಕೀಲರಿದ್ದು, ಮುಂದೆ ಆವಕಾಶ ಸಿಗಬಹುದು. ಈ ನಿಟ್ಟಿನಲ್ಲಿ ಹಿರಿಯ ವಕೀಲರಿಗೆ ವಾಗ್ಮಿಗಳಿಂದ ಎರಡು ಕಾರ್ಯಾಗಾರ ಮಾಡಲು ನಿರ್ಧರಿಸಲಾಗಿದೆ. ವಕೀಲರ ಸಂಘದಲ್ಲಿ ೭೮೯ ಜನ ಮತದಾರರು ಇದ್ದು, ಎಲ್ಲರೂ ಆಶೀರ್ವಾದ ಮಾಡಿದ್ದು, ನನ್ನ ಪ್ರತಿಸ್ಪರ್ಧಿಯಾಗಿ ಕಾರ್ಲೇ ಮೊಗಣ್ಣಗೌಡರು ಕೂಡ ಸ್ಪರ್ದೆ ಮಾಡಿದ್ದು, ಚುನಾವಣೆ ಬರುತ್ತದೆ ಹೋಗುತ್ತದೆ. ಸೋಲು-ಗೆಲುವು ಸಹಜ ಮೊಗಣ್ಣಗೌಡರಿಗೂ ಕೂಡ ನಾನು ಆಬಾರಿ ಆಗಿದ್ಧೇನೆ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಬರಲಿ. ಅವರ ಸಹಕಾರವನ್ನು ಪಡೆದು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಲಾಗುವುದು’ ಎಂದರು.
ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಸಂತೋಷ್ ಮಾತನಾಡಿ, ಎಲ್ಲರ ಸಹಕಾರದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದು, ಸಂಘದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಹೇಳಿದರು.ವಕೀಲರಾದ ಶ್ರೀಕಾಂತ್ ಇತರರು ಇದ್ದರು.