ಹೈನುಗಾರಿಕೆ ಬಾಕಿ, ಬರ ಪರಿಹಾರ ಶೀಘ್ರ ವಿತರಿಸಿ: ಎಚ್.ಆರ್ ಬಸವರಾಜಪ್ಪ

| Published : May 27 2024, 01:10 AM IST

ಹೈನುಗಾರಿಕೆ ಬಾಕಿ, ಬರ ಪರಿಹಾರ ಶೀಘ್ರ ವಿತರಿಸಿ: ಎಚ್.ಆರ್ ಬಸವರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೈನುಗಾರಿಕೆ ನಂಬಿದ 26 ಲಕ್ಷ ರೈತರಿಗೆ ಸುಮಾರು ₹700 ಕೋಟಿಗೂ ಹೆಚ್ಚು ಸಹಾಯಧನ ಬಾಕಿ ಹಣ ಕೊಡಬೇಕಾಗಿದೆ. ಈ ಹಣವನ್ನು ಇಲ್ಲಿವರೆಗೂ ಜಮಾ ಮಾಡಿಲ್ಲ ಆದ್ದರಿಂದ ತಕ್ಷಣವೇ ಜಮಾ ಮಾಡಬೇಕು. ಕಳೆದ ವರ್ಷ ಮಳೆ ಕಡಿಯಾಗಿದ್ದು, ಬರಗಾಲದ ಪರಿಹಾರ ಬಂದಿಲ್ಲ. ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಕೆಲವು ಕಡೆ ಅತಿವೃಷ್ಟಿಯಾಗುತ್ತಿದೆ ಆದಷ್ಟು ಶೀಘ್ರ ಎರಡು ಪರಿಹಾರ ವಿತರಿಸಬೇಕು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ರೈತರ ಐಪಿ ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಆಗ್ರಹಿಸಿದರು.

ಸಮೀಪದ ನಾಗಸಮುದ್ರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ 42ನೇ ರೈತ ಹುತ್ಮಾತ್ಮ ದಿನದ ಅಂಗವಾಗಿ 1982ರಲ್ಲಿ ಗೋಲಿಬಾರ್‌ಗೆ ಹುತ್ಮಾತ್ಮರಾದ ಬಸವನಗೌಡ, ಮಲ್ಲಪ್ಪ, ನಟರಾಜ್ ಅವರ ಸಮಾಧಿಗಳಿಗೆ ಪುಷ್ಪಮಾಲಿಕೆ ಅರ್ಪಿಸಿ ಮಾತನಾಡಿ

ಹೈನುಗಾರಿಕೆ ನಂಬಿದ 26 ಲಕ್ಷ ರೈತರಿಗೆ ಸುಮಾರು ₹700 ಕೋಟಿಗೂ ಹೆಚ್ಚು ಸಹಾಯಧನ ಬಾಕಿ ಹಣ ಕೊಡಬೇಕಾಗಿದೆ. ಈ ಹಣವನ್ನು ಇಲ್ಲಿವರೆಗೂ ಜಮಾ ಮಾಡಿಲ್ಲ ಆದ್ದರಿಂದ ತಕ್ಷಣವೇ ಜಮಾ ಮಾಡಬೇಕು. ಕಳೆದ ವರ್ಷ ಮಳೆ ಕಡಿಯಾಗಿದ್ದು, ಬರಗಾಲದ ಪರಿಹಾರ ಬಂದಿಲ್ಲ. ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಕೆಲವು ಕಡೆ ಅತಿವೃಷ್ಟಿಯಾಗುತ್ತಿದೆ ಆದಷ್ಟು ಶೀಘ್ರ ಎರಡು ಪರಿಹಾರ ವಿತರಿಸಬೇಕು ಎಂದರು.

ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಎದುರಿಸುತ್ತಿದ್ದು ರಾಜ್ಯ ಸರ್ಕಾರ 222 ತಾಲೂಕುಗಳನ್ನು ಬರಗಾಲವೆಂದು ಘೋಷಿಸಿದೆ. ಆದರೆ ಈವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ಪರಿಹಾರ ನೀಡುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ನಂತರ ಕೇಂದ್ರ ಸರ್ಕಾರ ರೂ. 3 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು.

ರೈತನಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ರು. 2 ಸಾವಿರ ನಿಲ್ಲಿಸಲಾಗಿದೆ. ಬೆಳೆ ಹಾಕಿ ಅಳಿಸಿದ ರೈತರಿಗೆ, ಬೆಳೆ ಹಾಕದೇ ಇದ್ದ ರೈತರಿಗೆ, ಕಾಲುವೆ ಹೋದಂತ ಜಾಗಕ್ಕೆ ಇವರೆಲ್ಲರಿಗೂ ಬರ ಪರಿಹಾರ ಕೊಡದೇ ಇರುವುದು ಸರ್ಕಾರ ರೈತರಿಗೆ ಮಾಡಿದಂತ ಅನ್ಯಾಯವಾಗಿದೆ. ಆದ್ದರಿಂದ ಇವರೆಲ್ಲರಿಗೂ ಮತ್ತು ಹಿಂದೆ ರಾಜ್ಯ ಸರ್ಕಾರ ಕೊಟ್ಟ ರೀತಿ ಯಾವುದೇ ಹಣವನ್ನು ಕಡಿತಗೊಳಿಸದೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.

ಯುವಕರು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘದೊಂದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಘಟನೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ರೈತರು ಸಾಕಷ್ಟು ಪರದಾಡು ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಉಪಾಧ್ಯಕ್ಷ ಎಂ.ಮಹದೇವಪ್ಪ, ಕಾರ್ಯದರ್ಶಿ ಗುರುಶಾಂತ,ತಾಲ್ಲೂಕು ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉಪಾಧ್ಯಕ್ಷ ಜಿ.ಬಿ ರವಿ, ಹಸಿರುಸೇನೆ ಸಂಚಾಲಕ ಸಿದ್ದೇಶ್, ನಾಗರಾಜ್ ಘೋರ್ಪಡೆ, ಶಿವರಾಜ್, ಗೌರೀಶ್, ಜಗನ್ನಾಥ್, ಶಿವಮೂರ್ತಿ, ವೀರೇಶ್, ತಿಮ್ಮಣ್ಣ, ದೇವೇಂದ್ರಪ್ಪ, ಮಂಜಪ್ಪ ಮೊದಲಾದವರಿ ಹಾಜರಿದ್ದರು.