ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ಅವರು ಮಾತು ಬಾರದವರು, ಆದರೂ ಕುಟುಂಬದ ಜವಾಬ್ದಾರಿ ಹೊತ್ತವರು. ಲೋಕದ ಜ್ಞಾನ ಇದ್ದರೂ ಕೇವಲ ಕೈ ಸನ್ನೆ, ಬಾಯಿ ಸನ್ನೆಯಲ್ಲೇ ಜೀವನ ನಡೆಸುವುದು ಅನಿವಾರ್ಯ. ಎಲ್ಲರಂತೆ ನಮಗೂ ಜೀವನ, ಬದುಕು, ಪ್ರೀತಿಸುವ ಹಕ್ಕಿದೆ ಎಂದು ಬೈಲಹೊಂಗಲ ಪಟ್ಟಣದ ಮುರಕೀಭಾಂವಿ ರಸ್ತೆಯಲ್ಲಿನ ಶಿವಾನಂದ ಭಾರತಿ ನಗರದ ಬಡಾವಣೆಯ ನಿವಾಸಿ ಲಕ್ಷ್ಮೀ ಮುರಗೇಶ ದೊಡಮನಿ ಎಂಬುವರ ಪುತ್ರರು ಬುಧವಾರ ಮುರಗೋಡ ರಸ್ತೆಯ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಅವರು ಮಾತು ಬಾರದವರು, ಆದರೂ ಕುಟುಂಬದ ಜವಾಬ್ದಾರಿ ಹೊತ್ತವರು. ಲೋಕದ ಜ್ಞಾನ ಇದ್ದರೂ ಕೇವಲ ಕೈ ಸನ್ನೆ, ಬಾಯಿ ಸನ್ನೆಯಲ್ಲೇ ಜೀವನ ನಡೆಸುವುದು ಅನಿವಾರ್ಯ. ಎಲ್ಲರಂತೆ ನಮಗೂ ಜೀವನ, ಬದುಕು, ಪ್ರೀತಿಸುವ ಹಕ್ಕಿದೆ ಎಂದು ಬೈಲಹೊಂಗಲ ಪಟ್ಟಣದ ಮುರಕೀಭಾಂವಿ ರಸ್ತೆಯಲ್ಲಿನ ಶಿವಾನಂದ ಭಾರತಿ ನಗರದ ಬಡಾವಣೆಯ ನಿವಾಸಿ ಲಕ್ಷ್ಮೀ ಮುರಗೇಶ ದೊಡಮನಿ ಎಂಬುವರ ಪುತ್ರರು ಬುಧವಾರ ಮುರಗೋಡ ರಸ್ತೆಯ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಮೂಗ ಸಹೋದರರಾದ ವಿನಾಯಕ ದೊಡಮನಿ ತುಮಕೂರ ಜಿಲ್ಲೆ ಗುಬ್ಬಿ ತಾಲೂಕಿನ ಅಂತಾಪೂರ ಗ್ರಾಮದ ಕವಿತಾ, ಚಿಕ್ಕಕೆಂಪಯ್ಯ ದಂಪತಿ ಪುತ್ರಿ ಪವಿತ್ರಾಳನ್ನು ಹಾಗೂ ಮಲ್ಲಿಕಾರ್ಜುನ ದೊಡಮನಿ ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ನಾಗಪ್ಪ ಹೊಂಗಲ ಎಂಬುವರ ಪುತ್ರಿ ರಾಜೇಶ್ವರಿಯನ್ನು ವರಿಸಿದರು. ಇವರ ವಿವಾಹಕ್ಕೆ ಮಠಾಧೀಶರು, ಜನಪ್ರತಿನಿಧಿಗಳು, ಗುರು-ಹಿರಿಯರು, ಬಂಧು-ಬಾಂಧವರು, ಸ್ಥಳೀಯರು ಸಾಕ್ಷಿಯಾಗಿ ಶುಭ ಹಾರೈಸಿದರು. ಈ ಮೂಗ ದಂಪತಿಗಳ ಬದುಕು ಭವಿಷ್ಯದಲ್ಲಿ ಸುಂದರವಾಗಲಿ ಎಂದು ಆಶೀರ್ವದಿಸಿದರು.ಇಬ್ಬರಿಗೂ ಬಾಯಿ ಇಲ್ಲದಿದ್ದರು ವಿನಾಯಕ ಮತ್ತು ಮಲ್ಲಿಕಾರ್ಜುನ ಸಹೋದರರು ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವಿಶೇಷಚೇತನರಲ್ಲಿಯೂ ಅದಮ್ಯ ಉತ್ಸಾಹ, ಗುರಿ, ಗುರು ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಜೋಡಿಗಳೇ ಸಾಕ್ಷಿಯಾಗಿದ್ದಾರೆ.
;Resize=(128,128))
;Resize=(128,128))