ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಆಯ್ಕೆ ಪಟ್ಟಿಯನ್ನು ಸಿಐಡಿ ಜಾಲಾಡುತ್ತಿದ್ದಂತೆ ರೋಚಕ ಸಂಗತಿಗಳು ಹೊರಬೀಳುತ್ತಿವೆ. ಪದವಿಯಲ್ಲಿ ಎರಡ್ಮೂರು ಬಾರಿ ಡುಮ್ಕಿ ಹೊಡೆದಿದ್ದರೂ ನೇಮಕಾತಿ ಪರೀಕ್ಷೆಯಲ್ಲಿ ಟಾಪರ್ಸ್‌ಗಳಾಗಿ ಹೊರಹೊಮ್ಮಿದ್ದ ಏಳು ಅಭ್ಯರ್ಥಿಗಳ ವಿವರ ಪತ್ತೆಯಾಗಿ ತನಿಖಾ ತಂಡವೇ ಅಚ್ಚರಿಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಆಯ್ಕೆ ಪಟ್ಟಿಯನ್ನು ಸಿಐಡಿ ಜಾಲಾಡುತ್ತಿದ್ದಂತೆ ರೋಚಕ ಸಂಗತಿಗಳು ಹೊರಬೀಳುತ್ತಿವೆ. ಪದವಿಯಲ್ಲಿ ಎರಡ್ಮೂರು ಬಾರಿ ಡುಮ್ಕಿ ಹೊಡೆದಿದ್ದರೂ ನೇಮಕಾತಿ ಪರೀಕ್ಷೆಯಲ್ಲಿ ಟಾಪರ್ಸ್‌ಗಳಾಗಿ ಹೊರಹೊಮ್ಮಿದ್ದ ಏಳು ಅಭ್ಯರ್ಥಿಗಳ ವಿವರ ಪತ್ತೆಯಾಗಿ ತನಿಖಾ ತಂಡವೇ ಅಚ್ಚರಿಗೊಂಡಿದೆ.

ಐದು ವರ್ಷದ ಪಶು ವಿಜ್ಞಾನ ಪದವಿಯಲ್ಲಿ ಅನುತ್ತೀರ್ಣಗೊಂಡು ಪೂರಕ ಪರೀಕ್ಷೆಗಳಲ್ಲಿ ತಿಣುಕಾಡಿ ಕೆಲವರು ಉತ್ತೀರ್ಣರಾಗಿದ್ದರು. ಆದರೆ ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಮಾತ್ರ ಟಾಪರ್ಸ್‌ಗಳಾಗಿ ಆಯ್ಕೆಯಾಗಿರುವುದು ತೀವ್ರ ಶಂಕೆಗೆ ಕಾರಣವಾಗಿದೆ. ಈ ಶಂಕೆಯೇ ನೇಮಕಾತಿ ಭಾನಗಡಿ ಹೊರಬರಲು ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಈ ಶಂಕಾಸ್ಪದ ಕೆಲ ವಿದ್ಯಾರ್ಥಿಗಳ ವಿವರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಟಾಪರ್ಸ್‌ಗಳಲ್ಲಿ ಸಂಬಂಧಿಕರೇ ಹೆಚ್ಚು:

ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಬಹುತೇಕರು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಸಂಬಂಧಿಕರಾಗಿರುವ ಅಭ್ಯರ್ಥಿಗಳೇ ಉತ್ತೀರ್ಣರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಆಯ್ಕೆಯಾದವರ ಪಟ್ಟಿ ಜಾಲಾಡಿದಾಗ ಸಿಐಡಿಗೆ ಕೆಲವು ಪುರಾವೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಪಶುವೈದ್ಯಾಧಿಕಾರಿಗಳ ಹುದ್ದೆಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆ ತುಂಬಾ ಕಠಿಣವಾಗಿತ್ತು. ಆ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್‌ಸಿ ನಡೆಸುವ ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಕೇವಲ 350 ಅಂಕ ಪಡೆಯಲೂ ವಿಫಲರಾಗಿದ್ದರು. ಆದರೆ ಪಶುವೈದ್ಯ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿರುವ ಅಭ್ಯರ್ಥಿಗಳೇ 400ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಅನುಮಾನ ಮೂಡಿಸುವಂತಿದೆ ಎಂದು ನೊಂದ ಅಭ್ಯರ್ಥಿಗಳು ಆರೋಪಿಸಿದ್ದರು.

ಈ ಅನುಮಾನ ಪುಷ್ಟಿಕರಿಸುವಂತೆ ಏಳು ಅಭ್ಯರ್ಥಿಗಳು ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿದ್ದಾರೆ. ಅಲ್ಲದೆ ಕೆಲವರು ಎರಡು ಬಾರಿ, ಮತ್ತೆ ಮೂರು ಬಾರಿ ಪದವಿಯಲ್ಲಿ ಫೇಲ್ ಆಗಿ ಪೂರಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಕೆಪಿಎಸ್‌ಸಿ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಭರ್ಜರಿ 450ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಭಾರೀ ಅನುಮಾನಕ್ಕೆ ಗ್ರಾಸವಾಗಿದೆ.-ಬಾಕ್ಸ್‌-

ಶಂಕಾಸ್ಪದ ಅಭ್ಯರ್ಥಿಪದವಿಯಲ್ಲಿ ಎಷ್ಟು ಬಾರಿ ಫೇಲ್‌?ನೇಮಕಾತಿಯಲ್ಲಿ ಅಂಕ

1.ಎರಡು ಬಾರಿ468.75

2ಎರಡು ಬಾರಿ466.5

3ಐದು ಬಾರಿ411.75

4.ಎರಡು ಬಾರಿ466.500

5. ಎರಡು ಬಾರಿ466.50

6.ಒಂದು ಬಾರಿ456.750

7. ಒಂದು ಬಾರಿ454.500