ಸಾರಾಂಶ
12 ಮಂದಿ ಸದಸ್ಯರ ಬಲವಿರುವ ಈ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ದುಂಡ ದೇವರಾಜ್ ರವರಿಗೆ 7 ಮತಗಳು ಹಾಗೂ ಇವರ ಪ್ರತಿಸ್ಪರ್ಧಿ ಪಾಂಡುರಂಗೇಗೌಡರಿಗೆ 5 ಮತಗಳು ಲಭಿಸಿದವು.
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಬಾಣಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದುಂಡ ದೇವರಾಜ್, ಉಪಾಧ್ಯಕ್ಷರಾಗಿ ಕೋಡಿಹಳ್ಳಿಯ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ.12 ಮಂದಿ ಸದಸ್ಯರ ಬಲವಿರುವ ಈ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ದುಂಡ ದೇವರಾಜ್ ರವರಿಗೆ 7 ಮತಗಳು ಹಾಗೂ ಇವರ ಪ್ರತಿಸ್ಪರ್ಧಿ ಪಾಂಡುರಂಗೇಗೌಡರಿಗೆ 5 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಡಿಹಳ್ಳಿ ಸಾವಿತ್ರಮ್ಮನವರಿಗೆ 7 ಮತಗಳು ಹಾಗೂ ಅವರ ಪ್ರತಿಸ್ಪರ್ಧಿ ಗಂಗಾಧರಯ್ಯಗೆ 5 ಮತಗಳು ಲಭಿಸಿದವು.
ಚುನಾವಣಾಧಿಕಾರಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರವರು, ಅಧ್ಯಕ್ಷರಾಗಿ ದುಂಡ ದೇವರಾಜ್, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.ಚುನಾವಣೆ ವೇಳೆ ಸದಸ್ಯರಾದ ದುಂಡ ದೇವರಾಜ್, ಕೋಡಿಹಳ್ಳಿ ಸಾವಿತ್ರಮ್ಮ ನಾಗರಾಜ್, ಶಿವರಾಮಯ್ಯ, ನಿಜಗುಣಮೂರ್ತಿ, ಭೈರಪ್ಪಾಜಿ, ಸಂತೋಷ್ ಕಂಟ್ಲಿ, ಪಾಂಡುರಂಗೇಗೌಡ, ಗಂಗಾಧರಯ್ಯ, ಭಾರತಿ, ಕೃಷ್ಣೇಗೌಡ, ಆನಂದ್, ಕಾರ್ಯದರ್ಶಿ ನವೀನ್ ಕುಮಾರ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಣಸಂದ್ರ ಪ್ರಕಾಶ್, ದುಂಡ ನವೀನ್ ಕುಮಾರ್, ಸಂಘದ ಮಾಜಿ ಅಧ್ಯಕ್ಷ ಹನುಮೇಗೌಡ, ಶ್ರೀನಿವಾಸ್, ಕಮಲಮ್ಮ ಸೇರಿದಂತೆ ಹಲವರು ಅಭಿನಂದಿಸಿದರು.