ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಜನಪ್ರಿಯ ಅಭಿಯಾನಗಳಲ್ಲೊಂದಾದ ಮನೆಯೇ ಗ್ರಂಥಾಲಯ ಅಭಿಯಾನದ 175ನೇ ಗ್ರಂಥಾಲಯವನ್ನು ಖ್ಯಾತ ಸಾಹಿತಿ ಹನಿಗವಿ ಎಚ್. ಡುಂಡಿರಾಜ್ ಅವರು ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರ ಮನೆಯಲ್ಲಿ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಜನಪ್ರಿಯ ಅಭಿಯಾನಗಳಲ್ಲೊಂದಾದ ಮನೆಯೇ ಗ್ರಂಥಾಲಯ ಅಭಿಯಾನದ 175ನೇ ಗ್ರಂಥಾಲಯವನ್ನು ಖ್ಯಾತ ಸಾಹಿತಿ ಹನಿಗವಿ ಎಚ್. ಡುಂಡಿರಾಜ್ ಅವರು ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರ ಮನೆಯಲ್ಲಿ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಪುಸ್ತಕಗಳನ್ನು ಓದುವುದರಿಂದ ನಮ್ಮ ಭಾಷಾಜ್ಞಾನ ಹೆಚ್ಚುವುದು ಮಾತ್ರವಲ್ಲ ಕಲ್ಪನಾ ಶಕ್ತಿ ಇಮ್ಮಡಿಯಾಗುತ್ತದೆ. ಮೆದುಳಿಗೆ ಒಳ್ಳೆ ಕೆಲಸ ಸಿಗುತ್ತದೆ. ಚಿಂತೆಯನ್ನೂ ದೂರ ಮಾಡುತ್ತವೆ. ಈಗಾಗಲೇ ಮಾರು ನಾಲ್ಕು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳನ್ನು ಕಸಾಪ ಉಡುಪಿ ತಾಲೂಕು ಘಟಕ ನೀಡಿರುವುದು ಅಭಿನಂದನಾರ್ಹ ಎಂದರು.

ಈ ಸಂದರ್ಭ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಅಸ್ಟ್ರೋ ಮೋಹನ್, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್, ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ಪ್ರವೀಣಾ ಮೋಹನ್, ಪ್ರಜ್ಞಾ ಕೊಡವೂರು, ಸಂಹಿತ್, ಆಶ್ಲೇಷ್, ಉಮಾ ಚಿಕ್ಕಮಠ, ಶ್ರೀಗುರು ಮತ್ತಿತರರು ಉಪಸ್ಥಿತರಿದ್ದರು.