ಸಾರಾಂಶ
ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠ ನಂಬೂದರಿ ನೇತೃತ್ವದಲ್ಲಿ ಜುಲೈ 16ರಂದು ಆರಂಭಗೊಂಡ ದೀಪ ನಮಸ್ಕಾರ ಪೂಜೆಯ ಜೊತೆ, ಆ.4ರಂದು ವಿಶೇಷ ಶತ್ರು ಸಂಹಾರ ಪೂಜೆ, 9ರಂದು ನಾಗರ ಪಂಚಮಿ, 10ರಂದು ಅಯ್ಯಪ್ಪ ಸ್ವಾಮಿಗೆ ನಿರಂಜನಾ ಸೇವೆ, 15ರಂದು ಭುವನೇಶ್ವರಿ ಸನ್ನಿಧಿಯಲ್ಲಿ ಮಹಾಲಕ್ಷ್ಮೀ ಹೋಮ ನೆಡೆಯುವುದರೊಂದಿಗೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ತಿಂಗಳಿಂದ ಭಗವತಿ ದೇವಿಗೆ ನಡೆಯುತ್ತಿದ್ದ ಕರ್ಕಾಟಕ ಮಾಸದ ದುರ್ಗಾ ದೀಪ ನಮಸ್ಕಾರ ಪೂಜೆ ಗುರುವಾರ ಸಂಪನ್ನಗೊಂಡಿತು.ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠ ನಂಬೂದರಿ ನೇತೃತ್ವದಲ್ಲಿ ಜುಲೈ 16ರಂದು ಆರಂಭಗೊಂಡ ದೀಪ ನಮಸ್ಕಾರ ಪೂಜೆಯ ಜೊತೆ, ಆ.4ರಂದು ವಿಶೇಷ ಶತ್ರು ಸಂಹಾರ ಪೂಜೆ, 9ರಂದು ನಾಗರ ಪಂಚಮಿ, 10ರಂದು ಅಯ್ಯಪ್ಪ ಸ್ವಾಮಿಗೆ ನಿರಂಜನಾ ಸೇವೆ, 15ರಂದು ಭುವನೇಶ್ವರಿ ಸನ್ನಿಧಿಯಲ್ಲಿ ಮಹಾಲಕ್ಷ್ಮೀ ಹೋಮ ನೆಡೆಯುವುದರೊಂದಿಗೆ ಸಂಪನ್ನಗೊಂಡಿತು.ಕರ್ಕಾಟಕ ಮಾಸದ ಪೂಜೆಯಲ್ಲಿ ಭುವನೇಶ್ವರಿ ದೇವಿಗೆ ವಾಲ್ಕನ್ನಾಡಿ, ವರ್ಷಕೊಮ್ಮೆ ಶತ್ರು ಸಂಹಾರ ಪೂಜೆ ಸಲ್ಲಿಸುವ ಕರ್ಕಾಟಕ ಅಮಾವಸೆಯಂದು ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲು ಮುಖವಾಡ ಮತ್ತು ಕೊನೆಯ ದಿನ ದೇವಿಗೆ ಚತುರ್ ಬಾಹು ಒಳಗೊಂಡ ಅಲಂಕಾರ ಮಾಡುವ ಮುಖವಾಡಗಳನ್ನು ಭಕ್ತರು, ಅರ್ಚಕ ಮಣಿಕಂಠ ನಂಬೂದರಿ ಅವರ ಸಹಕಾರದಲ್ಲಿ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವಿಗೆ ಸಮರ್ಪಿಸಲಾಯಿತು.ಪೂಜಾ ಕಾರ್ಯಗಳನ್ನು ಅರ್ಚಕರಾದ ಜಗದೀಶ್ ಉಡುಪ ನೆರವೇರಿಸಿದರು. ವೆಂಕಟೇಶ್ ಹೊಳ್ಳ, ಪ್ರಸಾದ್ ಭಟ್, ಚಂದ್ರಹಾಸ ಭಟ್, ಶ್ರೀರಂಗ, ವೆಂಕಟೇಶ್ ಅಯ್ಯರ್, ಬಜೆ ಗುಂಡಿ ಮಣಿ ಮತ್ತಿತರರು ಸಹಕರಿಸಿದರು.ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಒಂದು ತಿಂಗಳು ದೇವಿಯ ಸೇವೆಯಲ್ಲಿ ತೊಡಗಿಸಿಕೊಂಡರು. ನಿತ್ಯ ಭಜನೆಯನ್ನು ಮಹಿಳಾ ಭಕ್ತರು ಮತ್ತು ಅರ್ಚಕರಾದ ವೆಂಕಟೇಶ್ ಹೊಳ್ಳ ನೆಡೆಸಿಕೊಟ್ಟರು.