ದುರ್ಗಾ ಮಾತಾ ದೌಡ್‌ಗೆ ನಗರದಲ್ಲಿ ಅದ್ಧೂರಿ ಸ್ವಾಗತ

| Published : Oct 08 2024, 01:03 AM IST

ದುರ್ಗಾ ಮಾತಾ ದೌಡ್‌ಗೆ ನಗರದಲ್ಲಿ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಅಂಗವಾಗಿ 9 ದಿನಗಳ ದುರ್ಗಾಮಾತಾ ದೌಡ್‌ಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಪ್ರತಿದಿನ ಸ್ವಾಮೀಜಿಯೊಬ್ಬರು ಭಗವಾ ಧ್ವಜ ಹಿಡಿದು ದೌಡ್‌ ನಡೆಸುತ್ತಾರೆ. ಇನ್ನು, ದೌಡ್ ಸಂಚರಿಸುವ ಮಾರ್ಗಗಳಲ್ಲಿ ರಂಗೋಲಿ ಅಲಂಕಾರ ಮಾಡಿ ಹೂವು ಎರಚಿ, ಮಹಿಳೆಯರು ಆರತಿ ಸ್ವಾಗತಿಸುತ್ತಾರೆ. ಸೋಮವಾರ ಬೆಳಿಗ್ಗೆ ನಗರದ ಶಿವಾಜಿ ವೃತ್ತದಲ್ಲಿ ದೌಡ್​​ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿಗಳು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಅಂಗವಾಗಿ 9 ದಿನಗಳ ದುರ್ಗಾಮಾತಾ ದೌಡ್‌ಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಪ್ರತಿದಿನ ಸ್ವಾಮೀಜಿಯೊಬ್ಬರು ಭಗವಾ ಧ್ವಜ ಹಿಡಿದು ದೌಡ್‌ ನಡೆಸುತ್ತಾರೆ. ಇನ್ನು, ದೌಡ್ ಸಂಚರಿಸುವ ಮಾರ್ಗಗಳಲ್ಲಿ ರಂಗೋಲಿ ಅಲಂಕಾರ ಮಾಡಿ ಹೂವು ಎರಚಿ, ಮಹಿಳೆಯರು ಆರತಿ ಸ್ವಾಗತಿಸುತ್ತಾರೆ. ಸೋಮವಾರ ಬೆಳಿಗ್ಗೆ ನಗರದ ಶಿವಾಜಿ ವೃತ್ತದಲ್ಲಿ ದೌಡ್​​ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿಗಳು ಚಾಲನೆ ನೀಡಿದರು.

ಶಿವಾಜಿ ವೃತ್ತ, ಗಾಂಧಿ ವೃತ್ತ, ತಾಸ್ ಬೌಡಿ, ಮಠಪತಿ ಗಲ್ಲಿ ಸೇರಿದಂತೆ ಹಲವೆಡೆ ದೌಡ್ ಸಂಚರಿಸಿತು. ಮಾರ್ಗದುದ್ದಕ್ಕೂ ರಂಗೋಲಿ ಬಿಡಿಸಿ ಬೀದಿಯನ್ನು ಶೃಂಗರಿಸಲಾಗಿತ್ತು. ಭಗವಾಧ್ವಜಕ್ಕೆ ಮಾಲಾರ್ಪಣೆ ಮಾಡಿ ನಗರದ ಪ್ರಮುಖ ಮಂದಿರಗಳಿಗೆ ತೆರಳಿ ಮಂಗಳಾರತಿ ಮಾಡಿದ ಮಹಿಳೆಯರು ಪೂಜೆ ಸಲ್ಲಿಸಿದರು. ಒಂಭತ್ತು ದಿನಗಳ ಕಾಲ ನಡೆಯುವ ಈ ದೌಡ್‌ನಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಭಾಗವಹಿಸುತ್ತಾರೆ.

ಈ ಸಂದರ್ಭದಲ್ಲಿ ಅಭಿನವ ಸಂಗನಬಸವ ಶ್ರೀಗಳು ಮಾತನಾಡಿ, ದಸರಾ ವೇಳೆ ಬೆಳಗಾವಿಯ ಗಲ್ಲಿಗಲ್ಲಿಗಳೆಲ್ಲವೂ ಸಂಪೂರ್ಣ ಕೇಸರಿಮಯವಾಗುತ್ತದೆ. ಬೆಳಗಾವಿಯಲ್ಲಿ ಏಳೆಂಟು ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗುತ್ತಾರೆ. ವಿಜಯಪುರ ನಗರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ. ಹಿಂದೂ ಧರ್ಮದ ಅರಿವು ಮೂಡಿಸುವ ಧರ್ಮ, ಸಂಸ್ಕೃತಿ ಉಳಿವು, ಬೆಳವಣಿಗೆಗೆ ಒತ್ತು ನೀಡುವ ಮೂಲಕ ಶ್ರಮಿಸುತ್ತಿರುವದನ್ನು ಶ್ಲಾಘಿಸಿದರು.